ಸಾಗರದಾಳದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ದಂಪತಿಯ 'ಹ್ಯಾಪಿ ಆನಿವರ್ಸರಿ'
ಸಮುದ್ರದೊಳಗೆ ಪರಸ್ಪರ ಗುಲಾಬಿ ಹೂ ಕೊಟ್ಟು ತಮ್ಮ ಮದುವೆಯ ವಾರ್ಷಿಕೋತ್ಸವ ಆಚರಿಸಿಕೊಂಡು ಪ್ರೀತಿಯನ್ನು ಮತ್ತೆ ರೀಫ್ರೆಶ್ ಮಾಡಿಕೊಂಡ ಅಪರೂಪದ ಜೋಡಿ.

ದೇವರಾಜ ನಾಯ್ಕ/ಕರಾವಳಿ ಕರ್ನಾಟಕ ವರದಿ

ಕಾರವಾರ:
"ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ... ಗಿರಿಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ... ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ... ಜಗವೇನೇ ಹೇಳಲಿ ನಮ್ಮ ಪ್ರೀತಿ ಶಾಶ್ವತ..." ಹೀಗೆ ವಿವಾಹಿತ ಜೋಡಿಯೊಂದು ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದಲ್ಲಿ ಆಚರಿಸಿಕೊಂಡ ಅಪರೂಪದ ಘಟನೆಯೊಂದು ನಡೆದಿದೆ.

ಮುರುಡೇಶ್ವರಕ್ಕೆ ಆಗಮಿಸಿದ್ದ ವಿವಾಹಿತ ಜೋಡಿ ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದಲ್ಲಿ ಆಚರಿಸಿಕೊಳ್ಳುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಂದೀಪ್ ಹಾಗೂ ಲಾವಣ್ಯ ದಂಪತಿಯೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಮುದ್ರದಾಳದಲ್ಲಿ ಆಚರಿಸಿಕೊಂಡ ಜೋಡಿ.

ಸಮುದ್ರದಾಳದ ಜೀವಿ ಪ್ರಪಂಚಗಳನ್ನು ಕಣ್ತುಂಬಿಕೊಂಡ ಸಂದೀಪ್ ಹಾಗೂ ಲಾವಣ್ಯ ಜೋಡಿಯು, ಅಲ್ಲೇ ತಮ್ಮ ಮದುವೆಯ ದಿನದ ಮೆಲುಕು ಹಾಕಿದರು. ಒಬ್ಬರಿಗೊಬ್ಬರು ಸಮುದ್ರದೊಳಗೆ ಗುಲಾಬಿಯ ಗುಚ್ಛ ಹಿಡಿದು ತಮ್ಮ ಪ್ರೀತಿಯ ನಿವೇದನೆ ಮಾಡಿಕೊಂಡರು.

ಪ್ರೇಮಿಗಳ ದಿನಾಚರಣೆಯ ನಿಮಿತ್ತ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯು ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ವಿಶೇಷವಾಗಿ ಸ್ಕೂಬಾ ಡೈವಿಂಗ್ ಅನ್ನು ಆಯೋಜಿಸಿದ್ದು, ಪ್ರೇಮಿಗಳಿಗಾಗಿ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ವಿಶೇಷವಾಗಿ ಅದು ಅವಕಾಶ ಮಾಡಿಕೊಟ್ಟಿತ್ತು.

ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ನುರಿತ ಸ್ಕೂಬಾ ಡೈವರ್ಸ್‌ಗಳು ಈ ಜೋಡಿಯನ್ನು ಸಮುದ್ರದಾಳಕ್ಕೆ‌ ಕರೆದೊಯ್ದಿದ್ದರು. ಪ್ರೇಮಿಗಳಿಗಾಗಿ ರಿಯಾಯಿತಿ ದರದಲ್ಲಿ, ಉಚಿತ ವಸತಿ ಸೌಲಭ್ಯದೊಂದಿಗೆ ಫೆ. 18 ರವರೆಗೆ ಈ ವಿಶೇಷ ಅವಕಾಶವನ್ನು ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆ ಕಲ್ಪಿಸಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಭೀಕರ ಸ್ಫೋಟ: ಐವರು ಮೃತ್ಯು, 11 ಮಂದಿ ಗಂಭೀರ:
http://bit.ly/2sqH2df
►►ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು: http://bit.ly/2EABNfX
►►ಮಗನನ್ನು ಚೂರಿಯಿಂದ ಇರಿದು ಕೊಲೆಗೈದ ತಂದೆ ಪೊಲೀಸ್ ಬಲೆಗೆ: http://bit.ly/2nZOaYB
►►ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ್​ ಕಂಬಾರ: http://bit.ly/2BTKgKa
►►ಕಂಬಳ ತಡೆಗೆ ಸುಪ್ರೀಂ ನಕಾರ: ಪೇಟಾ ಸಲ್ಲಿಸಿದ್ದ ಅರ್ಜಿ ವಜಾ: http://bit.ly/2BT47JA

Related Tags: Scuba Diving, Wedding Anniversary, Murdeshwar, Sandeep, Lavanya, Wedding Anniversary, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ