ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಭೀಕರ ಸ್ಫೋಟ: ಐವರು ಮೃತ್ಯು, 11 ಮಂದಿ ಗಂಭೀರ

ಕರಾವಳಿ ಕರ್ನಾಟಕ ವರದಿ

ಕೊಚ್ಚಿನ್:
ದುರಸ್ಥಿ ಕಾರ್ಯ ನಡೆಯುತ್ತಿರುವ ವೇಳೆಯಲ್ಲಿ ಶಿಪ್‌ಯಾರ್ಡ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದ ಪರಿಣಾಮ ಐವರು ಸಾವನ್ನಪ್ಪಿದ್ದು, 11 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಓಎನ್‌ಜಿಸಿಯ ಕಡಲಾಚೆಯ ಡ್ರಿಲ್ಲಿಂಗ್‌ ಘಟಕದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವ ವೇಳೆ ಅವಘಡ ಸಂಭವಿಸಿದೆ. ಹಡಗಿನ ವಾಟರ್ ಟ್ಯಾಂಕ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಇಬ್ಬರು ಅಪಾಯಕ್ಕೆ ಸಿಲುಕಿಕೊಂಡಿರುವ ಬಗ್ಗೆ ವರದಿಯಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಸಾರ್ವಜನಿಕ ವಲಯದ ಕೊಚ್ಚಿನ್ ಹಡಗುಕಟ್ಟೆಯಲ್ಲಿ ಹಡಗು ನಿರ್ಮಾಣ ಹಾಗೂ ದುರಸ್ತಿ ಕಾರ್ಯ ನಡೆಸಲಾಗುತ್ತದೆ. ಭಾರತೀಯ ನೌಕಾ ದಳ, ಕಡಲು ರಕ್ಷಣಾ ಪಡೆ, ತೈಲ ಶೋಧನಾ ಕೈಗಾರಿಕೆಗಳ ಬೃಹತ್‌ ಹಡಗುಗಳ ದುರಸ್ತಿ ಕಾರ್ಯವನ್ನು ಇಲ್ಲಿ ನಡೆಸಲಾಗುತ್ತದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು:
http://bit.ly/2EABNfX
►►ಮಗನನ್ನು ಚೂರಿಯಿಂದ ಇರಿದು ಕೊಲೆಗೈದ ತಂದೆ ಪೊಲೀಸ್ ಬಲೆಗೆ: http://bit.ly/2nZOaYB
►►ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ್​ ಕಂಬಾರ: http://bit.ly/2BTKgKa
►►ಕಂಬಳ ತಡೆಗೆ ಸುಪ್ರೀಂ ನಕಾರ: ಪೇಟಾ ಸಲ್ಲಿಸಿದ್ದ ಅರ್ಜಿ ವಜಾ: http://bit.ly/2BT47JA

Related Tags: Cochin Shipyard, Five Killed, Fire, Ship Under Repair, Blast Inside Ship, Kannada news, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ