ಮಗನನ್ನು ಚೂರಿಯಿಂದ ಇರಿದು ಕೊಲೆಗೈದ ತಂದೆ ಪೊಲೀಸ್ ಬಲೆಗೆ

ಕರಾವಳಿ ಕರ್ನಾಟಕ ವರದಿ

ಬೆಳ್ತಂಗಡಿ:
ಕ್ಷುಲ್ಲಕ ಕಾರಣಕ್ಕಾಗಿ ತಂದೆ ಮಗನನ್ನು ಚೂರಿಯಿಂದ ಇರಿದು ಭೀಕರವಾಗಿ ಹತ್ಯೆಗೈದ ಘಟನೆ ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ಸಂಭವಿಸಿದೆ.

ಕಸಬಾ ಗ್ರಾಮದ ಮಟ್ಲ ನಿವಾಸಿ ನವೀನ್(28) ಮೃತ ಯುವಕ.

ಕಳೆದ ಡಿಸೆಂಬರ್ 31 ರಂದು ಮನೆಯಲ್ಲಿ ಹೊಸ ವರ್ಷ ಆಚರಣೆ ಮಾಡುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ನವೀನ್ ಹಾಗೂ ತಂದೆ ಮಂಜುನಾಥ ಅವರಿಗೆ ಜಗಳವಾಗಿತ್ತು. ಈ ವೇಳೆಯಲ್ಲಿ ನವೀನ್ ತಂದೆ ಮಂಜುನಾಥ್‌ಗೆ ಹೊಡೆದಿದ್ದರು ಎನ್ನಲಾಗಿದೆ.

ಇದೇ ದ್ವೇಷದಿಂದ ಕಳೆದ ರಾತ್ರಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಮತ್ತೆ ಮಾತಿನ ಚಕಾಮಕಿ ನಡೆದಿದ್ದು, ಮಂಜುನಾಥ ಹಾಗೂ ರಾಘವೇಂದ್ರ ಸೇರಿಕೊಂಡು ನವೀನ್‍ನ ಹೊಟ್ಟೆಯ ಭಾಗಕ್ಕೆ ಹಾಗೂ ತೊಡೆಗೆ ಚೂರಿಯಿಂದ ತಿವಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ನವೀನ್ ಕೊನೆಯುಸಿರೆಳೆದಿದ್ದಾರೆ.

ಬೆಳ್ತಂಡಿಯಲ್ಲಿ ಜ್ಯೋತಿಷಿಗಾಳಗಿರುವ ನವೀನ್ ತಂದೆ ಮಂಜುನಾಥ ಹಾಗೂ ಸಹೋದರ ರಾಘವೇಂದ್ರ ಘಟನೆಯ ಬಳಿಕ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೀನ್ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದರು. ವಿವಾಹಿತರಾಗಿದ್ದು, ಅವರು ಪತ್ನಿ‌ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ್​ ಕಂಬಾರ:
http://bit.ly/2BTKgKa
►►ಕಂಬಳ ತಡೆಗೆ ಸುಪ್ರೀಂ ನಕಾರ: ಪೇಟಾ ಸಲ್ಲಿಸಿದ್ದ ಅರ್ಜಿ ವಜಾ: http://bit.ly/2BT47JA
►►ಮಂಗಳೂರು ಅನೈತಿಕ ಗೂಂಡಾಗಿರಿ: ಸಂತ್ರಸ್ತರ ವಿರುದ್ದವೇ ದೂರು ದಾಖಲು: http://bit.ly/2EYB9Xw
►►ಮಹಿಳಾ ಪೈಲಟ್ ಸಮಯಪ್ರಜ್ಞೆ: ​ಆಕಾಶದಲ್ಲಿ ತಪ್ಪಿತು ವಿಮಾನಗಳ ಭೀಕರ ದುರಂತ: http://bit.ly/2nZIjTm
►►ಎರಡೂ ಕಣ್ಣು ಕುರುಡಾಗಿದ್ದ ಗರುಡಕ್ಕೆ ಉಡುಪಿಯಲ್ಲಿ ಚಿಕಿತ್ಸೆ!: http://bit.ly/2EkTfC5

Related Tags: Beltangady, Youth Murder, Father Arrested, Naveen Murder, Matla, Kasba Village, Beltangady Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ