ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ್​ ಕಂಬಾರ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಧವ ಕೌಶಿಕ್ ಅವರು ಆಯ್ಕೆಯಾಗಿದ್ದಾರೆ. 

ನವದೆಹಲಿಯಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷೀಯ ಚುನಾವಣೆಯಲ್ಲಿ 89 ಮತಗಳು ಚಲಾವಣೆಯಾಗಿದ್ದು, ಚಂದ್ರಶೇಖರ ಕಂಬಾರರು 56 ಮತಗಳನ್ನು ಗಳಿಸುವ ಮೂಲಕ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೀಠವನ್ನು ಅಲಂಕರಿಸಿದ್ದಾರೆ.

ಡಾ. ಚಂದ್ರಶೇಖರ ಕಂಬಾರ ಅವರು 10 ವರ್ಷಕ್ಕೂ ಹೆಚ್ಚು ಕಾಲ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು.

2013 ರಿಂದ ಅವರು ಅಕಾಡೆಮಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ರಾಷ್ಟ್ರೀಯ ನಾಟಕ ಮತ್ತು ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕಂಬಾರ ಅವರು ಈ ಪ್ರತಿಷ್ಠಿತ ಸ್ಥಾನಕ್ಕೆ ಆಯ್ಕೆಯಾದ 3ನೇ ಕನ್ನಡದ ಸಾಹಿತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೊದಲು ವಿ.ಕೃ. ಗೋಕಾಕ್​ ಅವರು 1983 ರಲ್ಲಿ ಮತ್ತು ಯು.ಆರ್​. ಅನಂತಮೂರ್ತಿ ಅವರು 1993ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಕಂಬಳ ತಡೆಗೆ ಸುಪ್ರೀಂ ನಕಾರ: ಪೇಟಾ ಸಲ್ಲಿಸಿದ್ದ ಅರ್ಜಿ ವಜಾ:
http://bit.ly/2BT47JA
►►ಮಂಗಳೂರು ಅನೈತಿಕ ಗೂಂಡಾಗಿರಿ: ಸಂತ್ರಸ್ತರ ವಿರುದ್ದವೇ ದೂರು ದಾಖಲು: http://bit.ly/2EYB9Xw
►►ಮಹಿಳಾ ಪೈಲಟ್ ಸಮಯಪ್ರಜ್ಞೆ: ​ಆಕಾಶದಲ್ಲಿ ತಪ್ಪಿತು ವಿಮಾನಗಳ ಭೀಕರ ದುರಂತ: http://bit.ly/2nZIjTm
►►ಎರಡೂ ಕಣ್ಣು ಕುರುಡಾಗಿದ್ದ ಗರುಡಕ್ಕೆ ಉಡುಪಿಯಲ್ಲಿ ಚಿಕಿತ್ಸೆ!: http://bit.ly/2EkTfC5

Related Tags: Kannada Litterateur, Chandrashekar Kambar, Sahitya Akademi, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ