ಕಂಬಳ ತಡೆಗೆ ಸುಪ್ರೀಂ ನಕಾರ: ಪೇಟಾ ಸಲ್ಲಿಸಿದ್ದ ಅರ್ಜಿ ವಜಾ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ನಿಷೇಧ ಹೇರಬೇಕೆಂದು ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 

ಕಂಬಳದಲ್ಲಿ ಪ್ರಾಣಿ ಹಿಂಸೆಯನ್ನು ಮಾಡಲಾಗುತ್ತದೆ. ಇದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಪೇಟಾ ಹೈಕೋರ್ಟ್ ಮೆಟ್ಟಿಲೇರಿತ್ತು.

ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿ, ಪೇಟಾ ಅರ್ಜಿಯನ್ನು ವಜಾಗೊಳಿಸಿದೆ. ಕಂಬಳಕ್ಕೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್‌, ಈ ಕುರಿತ ಅಂತಿಮ ವಿಚಾರಣೆಯನ್ನು ಮಾರ್ಚ್‌ 12ರಂದು ನಿಗದಿಪಡಿಸಿದೆ.

ಕಂಬಳದಲ್ಲಿ ಹಿಂಸೆ ಇಲ್ಲ. ನೀರು ಮತ್ತು ಕೆಸರಿನ ಗದ್ದೆಗಳಲ್ಲಿ ನಡೆಯುವ ಕಂಬಳವು ಕೋಣಗಳ ಪಚನ ಕ್ರಿಯೆ ಮತ್ತು ದೇಹದ ಉಷ್ಣತೆ ನಿರ್ವಹಣೆಗೆ ನೆರವಾಗುತ್ತದೆ ಎಂದು ಈ ಹಿಂದೆ ರಾಜ್ಯ ಸರ್ಕಾರ ಹೇಳಿತ್ತು.

ಕಂಬಳಕ್ಕೆ ತಡೆ ನೀಡಬೇಕು ಎಂದು ಕೋರಿ ಪೇಟಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನವೆಂಬರ್​ 13 ರಂದು ಆರಂಭವಾಗಿತ್ತು. ಆ ನಂತರ ನವೆಂಬರ್​ 17, ನವೆಂಬರ್​ 24 ಮತ್ತು ಡಿಸೆಂಬರ್​ 12 ರಂದು ವಿಚಾರಣೆ ನಡೆದಿತ್ತು. ಡಿ. 12 ರಂದು 6 ವಾರಗಳ ಕಾಲ ವಿಚಾರಣೆಯನ್ನು ಮುಂದೂಡಿತ್ತು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಮಂಗಳೂರು ಅನೈತಿಕ ಗೂಂಡಾಗಿರಿ: ಸಂತ್ರಸ್ತರ ವಿರುದ್ದವೇ ದೂರು ದಾಖಲು:
http://bit.ly/2EYB9Xw
►►ಮಹಿಳಾ ಪೈಲಟ್ ಸಮಯಪ್ರಜ್ಞೆ: ​ಆಕಾಶದಲ್ಲಿ ತಪ್ಪಿತು ವಿಮಾನಗಳ ಭೀಕರ ದುರಂತ: http://bit.ly/2nZIjTm
►►ಎರಡೂ ಕಣ್ಣು ಕುರುಡಾಗಿದ್ದ ಗರುಡಕ್ಕೆ ಉಡುಪಿಯಲ್ಲಿ ಚಿಕಿತ್ಸೆ!: http://bit.ly/2EkTfC5
►►ಕಟಪಾಡಿಯಲ್ಲಿ ಹಾರೆಯಿಂದ ಬಡಿದು ಕಾರ್ಮಿಕನ ಹತ್ಯೆ: http://bit.ly/2BpOLLP
►►ಇಸ್ಲಾಂಗೆ ಮತಾಂತರಗೊಳ್ಳಲು ಕ್ರೈಸ್ತ ಪತ್ನಿಗೆ ಕಿರುಕುಳ http://bit.ly/2EWdwyX
►►ಮಂಗಳೂರಲ್ಲಿ ಮತ್ತೆ ಅನೈತಿಕ ಗೂಂಡಾಗಿರಿ: ಯುವಕ-ಯುವತಿ ಬೆನ್ನಟ್ಟಿ ಹಲ್ಲೆ: http://bit.ly/2CavyKO

Related Tags: Supreme Court, Refuses Interim Stay, Kambala Race, Supreme Court, Karnataka, Chief Justice of India Dipak Misra, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ