ಮಂಗಳೂರು ಅನೈತಿಕ ಗೂಂಡಾಗಿರಿ: ಸಂತ್ರಸ್ತರ ವಿರುದ್ದವೇ ದೂರು ದಾಖಲು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಹುಟ್ಟುಹಬ್ಬದ ಔತಣಕೂಟದಲ್ಲಿ ಪಾಲ್ಗೊಂಡು ಮನೆಗೆ ತೆರಳುತ್ತಿದ್ದ ಇಂಡಿಗೊ ವಿಮಾನ ಸಂಸ್ಥೆಯ ಇಬ್ಬರು ಸಹೋದ್ಯೋಗಿಗಳನ್ನು ಬೆಂಬತ್ತಿ ಹಲ್ಲೆಗೈದು, ಯುವತಿಗೆ ಕಿರುಕುಳ ನೀಡಿದ ಅನೈತಿಕ ಗೂಂಡಾಗಿರಿ ಪ್ರಕರಣದಲ್ಲಿ ಪ್ರತಿ ದೂರು ದಾಖಲಾಗಿದೆ.

ಅದ್ಯಪಾಡಿ ಕ್ರಾಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಒಂದು ಗಂಟೆ ಹೊತ್ತಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಯುವಕ-ಯುವತಿಯನ್ನು ಬೈಕ್‌ಗಳಲ್ಲಿ ಬೆಂಬತ್ತಿ, ವಿಚಾರಿಸಿ, ಯುವಕ-ಯುವತಿ ಇಬ್ಬರಿಗೂ ಹಲ್ಲೆಗೈದು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ ಎಂದು ಸಂತ್ರಸ್ತ ಯುವತಿ ಈ ಮೊದಲು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.

ಸಹೋದ್ಯೋಗಿಯೋರ್ವರ ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡು ಮನೆಗೆ ತೆರಳುವಾಗ ಅದ್ಯಪಾಡಿ ಕ್ರಾಸ್ ರಸ್ತೆಯಲ್ಲಿ ಈ ಘಟನೆ ನಡೆದಿತ್ತು.

ಇದೀಗ ಯುವಕ-ಯುವತಿಯ ಕಾರನ್ನು ಬೆಂಬತ್ತಿದ ತಂಡದವರು ಪಾರ್ಕ್ ಮಾಡಲಾಗಿದ್ದ ಕಾರಿನ ಬಗ್ಗೆ ವಿಚಾರಿಸಲು ಹೋದ ತಮ್ಮ ಮೇಲೆ ಯುವತಿಯು ಇತರರನ್ನು ಕರೆಸಿ ಹಲ್ಲೆ ನಡೆಸಿದ್ದಾರೆ ಎಂದು ಬಜ್ಪೆ ಪೊಲೀಸರಿಗೆ ಪ್ರತಿ ದೂರು ನೀಡಿದ್ದಾರೆ.

ಬಜ್ಪೆ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ಅನೈತಿಕ ಗೂಂಡಾಗಿರಿ ಎಗ್ಗಿಲ್ಲದೆ ನಡೆಯುತ್ತಿದ್ದು, ಇಬ್ಬರು ವಯಸ್ಕರು ಕಾರಿನಲ್ಲಿ ಪ್ರಯಾಣಿಸುವಾಗ ಅವರನ್ನು ತಡೆಯುವ, ವಿಚಾರಿಸುವ ಹಕ್ಕನ್ನು ತಂಡಕ್ಕೆ ನೀಡಿದ್ದು ಯಾರು? ಎಂಬ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಗಮನಾರ್ಹ.

ಇದನ್ನೂ ಓದಿ:
►►ಮಂಗಳೂರಲ್ಲಿ ಮತ್ತೆ ಅನೈತಿಕ ಗೂಂಡಾಗಿರಿ. ಕಾರು ಬೆಂಬತ್ತಿ ಯುವಕ - ಯುವತಿಗೆ ಹಲ್ಲೆ
http://bit.ly/2CavyKO

ಇಂದು ಓದಿದ ಹೆಚ್ಚು ಸುದ್ದಿಗಳು
►►ಮಹಿಳಾ ಪೈಲಟ್ ಸಮಯಪ್ರಜ್ಞೆ: ​ಆಕಾಶದಲ್ಲಿ ತಪ್ಪಿತು ವಿಮಾನಗಳ ಭೀಕರ ದುರಂತ:
http://bit.ly/2nZIjTm
►►ಎರಡೂ ಕಣ್ಣು ಕುರುಡಾಗಿದ್ದ ಗರುಡಕ್ಕೆ ಉಡುಪಿಯಲ್ಲಿ ಚಿಕಿತ್ಸೆ!: http://bit.ly/2EkTfC5
►►ಕಟಪಾಡಿಯಲ್ಲಿ ಹಾರೆಯಿಂದ ಬಡಿದು ಕಾರ್ಮಿಕನ ಹತ್ಯೆ: http://bit.ly/2BpOLLP
►►ಇಸ್ಲಾಂಗೆ ಮತಾಂತರಗೊಳ್ಳಲು ಕ್ರೈಸ್ತ ಪತ್ನಿಗೆ ಕಿರುಕುಳ http://bit.ly/2EWdwyX
►►ಮಂಗಳೂರಲ್ಲಿ ಮತ್ತೆ ಅನೈತಿಕ ಗೂಂಡಾಗಿರಿ: ಯುವಕ-ಯುವತಿ ಬೆನ್ನಟ್ಟಿ ಹಲ್ಲೆ: http://bit.ly/2CavyKO
►►ಕುಂದಾಪುರ: ಚಿರತೆ ಸಾವಿಗೆ ಇಲಾಖೆ ನಿರ್ಲಕ್ಷ ಕಾರಣವೆ? http://bit.ly/2ESSqBj

Related Tags: Right-Wing Activists, Assault Woman, Adyapady Incident, Moral Policing, Mangaluru Airport, Maravoor Bridge, Bajpe Police, Moral Police Mangaluru, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ