ಎರಡೂ ಕಣ್ಣು ಕುರುಡಾಗಿದ್ದ ಗರುಡಕ್ಕೆ ಉಡುಪಿಯಲ್ಲಿ ಚಿಕಿತ್ಸೆ!

ಕರಾವಳಿ ಕರ್ನಾಟಕ ವರದಿ

ಉಡುಪಿ:
ಎರಡೂ ಕಣ್ಣುಗಳ ದೃಷ್ಠಿ ಕಳೆದುಕೊಂಡಿದ್ದ ಗರುಡ(ಬ್ರಾಹ್ಮಿಣಿ ಕೈಟ್)ಕ್ಕೆ ಪ್ರಸಾದ್ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಿದ ಮಹತ್ವದ ಸಂಗತಿ ವರದಿಯಾಗಿದೆ.

ಡಾ. ಕೃಷ್ಣಪ್ರಸಾದ್ ಅವರ ನೇತೃತ್ವದಲ್ಲಿ ಡಾ. ಹರಿಪ್ರಸಾದ್, ಡಾ. ಪರೇಶ್ ಪೂಜಾರಿ, ಡಾ. ಚೆನ್ನಪ್ಪ, ಡಾ. ಶಮಂತ್ ಶೆಟ್ಟಿಯವರ ತಂಡವು ಹಕ್ಕಿಯ ಕಣ್ಣಿನ ಚಿಕಿತ್ಸೆ ನಡೆಸಿತು.

ಕಣ್ಣಿನ ಕರಿಗುಡ್ಡೆ ಶುದ್ಧ ಮಾಡುವ ಔಷಧ ಹಾಗೂ ಕಣ್ಣಿನ ಆತಂರಿಕ ಒತ್ತಡ ಕಡಿಮೆ ಮಾಡುವ ಔಷಧಗಳನ್ನು ಹಾಕಲಾಯಿತು. ಪ್ರತೀ ದಿನ ಔಷಧ ಹಾಕುವ ಅಗತ್ಯವಿದ್ದು, ಸರಿಯಾದರೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಕರಿಗುಡ್ಡೆ ಕಪ್ಪಾದ ಮೇಲೂ ಪೊರೆಯಿಂದ ಕಣ್ಣು ಕಾಣಿಸದಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಲಿದೆ. 

ಹಕ್ಕಿಯ ಶಸ್ತ್ರಚಿಕಿತ್ಸೆಗೆ ಅಗತ್ಯ ಸಲಕರಣೆ ತಯಾರಿಗೆ ಕಂಪೆನಿಗೆ ತಿಳಿಸಲಾಗಿದೆ. ಹದಿನೈದು ದಿನ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈಗ ಆಸ್ಪತ್ರೆಯಲ್ಲೇ ಔಷಧ ಹಾಕಲಾಗುತ್ತಿದ್ದು, ಶೇ.70ರಷ್ಟು ಗುಣವಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ವಿದ್ಯುದಾಘಾತಕ್ಕೆ ಒಳಗಾಗಿರುವಂತೆ ಕಂಡುಬಂದ ಗರುಡದ ಕಣ್ಣಿನ ಆಂತರಿಕ ಒತ್ತಡದಿಂದ ಕಪ್ಪು ಭಾಗ ಬೆಳ್ಳಗಾಗಿರುವ ಸಾಧ್ಯತೆ ಇದೆ. ವೈರಲ್ ಸೋಂಕು ಕೂಡ ಇದೆ ಎಂದು ಡಾ. ಕೃಷ್ಣಪ್ರಸಾದ್ ತಿಳಿಸಿದರು.

ಉದ್ಯಾವರ ಪಶು ವೈದ್ಯ ಡಾ. ಸಂದೇಶ್ ಶೆಟ್ಟಿಯವರು ಹಕ್ಕಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಅಗತ್ಯವಾದರೆ ಅನಸ್ತೇಶಿಯಾ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.

ಪೇಜಾವರ ಮಠದ ಬಳಿ ಈ ಬಿಳಿ ಕುತ್ತಿಗೆಯ ಗರುಡ ಬಿದ್ದಿದ್ದನ್ನು ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ಗಮನಿಸಿ ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ. ಕೃಷ್ಣಪ್ರಸಾದ ಅವರಿಗೆ ಚಿಕಿತ್ಸೆ ನೀಡಲು ಕೋರಿದ್ದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಕಟಪಾಡಿಯಲ್ಲಿ ಹಾರೆಯಿಂದ ಬಡಿದು ಕಾರ್ಮಿಕನ ಹತ್ಯೆ:
http://bit.ly/2BpOLLP
►►ಇಸ್ಲಾಂಗೆ ಮತಾಂತರಗೊಳ್ಳಲು ಕ್ರೈಸ್ತ ಪತ್ನಿಗೆ ಕಿರುಕುಳ http://bit.ly/2EWdwyX
►►ಮಂಗಳೂರಲ್ಲಿ ಮತ್ತೆ ಅನೈತಿಕ ಗೂಂಡಾಗಿರಿ: ಯುವಕ-ಯುವತಿ ಬೆನ್ನಟ್ಟಿ ಹಲ್ಲೆ: http://bit.ly/2CavyKO
►►ಕುಂದಾಪುರ: ಚಿರತೆ ಸಾವಿಗೆ ಇಲಾಖೆ ನಿರ್ಲಕ್ಷ ಕಾರಣವೆ? http://bit.ly/2ESSqBj
►►ಮೋದಿ ನೋಡ ಹೋದ ಪು.ಉಪಾಧ್ಯಕ್ಷೆಗೆ ಅಪಘಾತ: ಆಸ್ಪತ್ರೆಗೆ ಬಾರದ ಬಿಜೆಪಿಗರು!: http://bit.ly/2FYVWJN

Related Tags: Eyesight, Brahminy Kite, Dr Krishna Prasad, Prasad Netralaya Udupi, Pejawar math, Sri Vishwaprasannateertha Swamiji, DFO Clifford Lewis, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ