ಕಟಪಾಡಿಯಲ್ಲಿ ಹಾರೆಯಿಂದ ಬಡಿದು ಕಾರ್ಮಿಕನ ಹತ್ಯೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಕಟಪಾಡಿ ಸಮೀಪ ವಿದ್ಯಾನಗರ ಅಚ್ಚಡ ಕ್ರಾಸ್ ಬಳಿ ವಲಸೆ ಕಾರ್ಮಿಕನೋರ್ವನನ್ನು ಹಾರೆಯಿಂದ ಬಡಿದು ಕೊಲೆಗೈಯಲಾಗಿರುವ ಕಳವಳಕಾರಿ ಘಟನೆ ರಾತ್ರಿ ನಡೆದಿದೆ.

ಮೃತದೇಹ ಮರಳು ರಾಶಿ ಮೇಲೆ ಬಿದ್ದಿದ್ದು, ಕೈಯಲ್ಲಿ ರಾತ್ರಿ ಊಟಕ್ಕೆ ತಂದಿರಬಹುದಾದ ಮೊಸರಿನ ಪ್ಯಾಕ್ ಇತ್ತು. ಕಾರ್ಮಿಕ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಮೃತನ ಗುರುತು ಪತ್ತೆಗಾಗಿ ಇಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರನ್ನು ಪೊಲೀಸರು ಸಂಪರ್ಕಿಸಿದ್ದಾರೆ.

ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ಸ್ಥಳಕ್ಕೆ ಬಂದಿದ್ದರು.


ಇದನ್ನೂ ಓದಿ:
ಒಳಚರಂಡಿ ಗುಂಡಿಗೆ ಬಿದ್ದ ಯುವಕ ಸಾವು
ಮಂಗಳೂರು: ಕೃಷ್ಣಾಪುರ ಕಾಟಿಪಳ್ಳ ಬಳಿ ಒಳಚರಂಡಿ ಕಾಮಗಾರಿಯ ಗುಂಡಿಗೆ ಬಿದ್ದು ಕಾಟಿಪಳ್ಳ ಒಂದನೇ ಬ್ಲಾಕ್ ಗಣೇಶ್ ಕೃಪಾ ನಿವಾಸಿ ಮೋಹನ್ ಎಂಬವರು ಸಾವಪ್ಪಿದ ಖೇದಕರ ಘಟನೆ ವರದಿಯಾಗಿದೆ.

ರಾತ್ರಿ ಏಳುವರೆಗೆ ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡ ಮೋಹನ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಸ್ಪಂದಿಸದೇ ಸಾವಪ್ಪಿದ್ದಾರೆ. ಶಾಸಕ ಮೊಯ್ದೀನ್ ಬಾವಾ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಗುತ್ತಿಗೆದಾರರನ್ನು ಬೇಜವಾಬ್ದಾರಿಯ ಬಗ್ಗೆ ತರಾಟೆಗೆ ತೆಗೆದುಕೊಂಡರರು.

ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಇಸ್ಲಾಂಗೆ ಮತಾಂತರಗೊಳ್ಳಲು ಕ್ರೈಸ್ತ ಪತ್ನಿಗೆ ಕಿರುಕುಳ
http://bit.ly/2EWdwyX
►►ಮಂಗಳೂರಲ್ಲಿ ಮತ್ತೆ ಅನೈತಿಕ ಗೂಂಡಾಗಿರಿ: ಯುವಕ-ಯುವತಿ ಬೆನ್ನಟ್ಟಿ ಹಲ್ಲೆ: http://bit.ly/2CavyKO
►►ಕುಂದಾಪುರ: ಚಿರತೆ ಸಾವಿಗೆ ಇಲಾಖೆ ನಿರ್ಲಕ್ಷ ಕಾರಣವೆ? http://bit.ly/2ESSqBj
►►ಮೋದಿ ನೋಡ ಹೋದ ಪು.ಉಪಾಧ್ಯಕ್ಷೆಗೆ ಅಪಘಾತ: ಆಸ್ಪತ್ರೆಗೆ ಬಾರದ ಬಿಜೆಪಿಗರು!: http://bit.ly/2FYVWJN

Related Tags: Migrant Labourer Murder, Katapady, Kaup Police, Vidyanagara, Achchada Road, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ