ಕುಂದಾಪುರ: ಇಸ್ಲಾಂಗೆ ಮತಾಂತರಗೊಳ್ಳಲು ಕ್ರೈಸ್ತ ಪತ್ನಿಗೆ ಕಿರುಕುಳ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಕ್ರೈಸ್ತ ಧರ್ಮೀಯರಾದ ಪತ್ನಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಿರಂತರವಾಗಿ ಪೀಡಿಸಿ, ಮತಾಂತರಗೊಳ್ಳದಿದ್ದರೆ ‘ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ಬೈದು ದೈಹಿಕ ಹಲ್ಲೆಗೈದ ವ್ಯಕ್ತಿಯ ವಿರುದ್ಧ ಗಂಗೊಳ್ಳಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಸೆಲಿನ್ ಬುತ್ತೆಲ್ಲೊ(51), ಇವರು ಗುಜ್ಜಾಡಿಯ ನಿವಾಸಿ ವಲೇರಿಯನ್ ವಿ ಬುತ್ತೆಲ್ಲೊ ಅವರ ವಿರುದ್ಧ ದೂರು ನೀಡಿದ್ದಾರೆ. ಸೆಲಿನ್ ಅವರು ಮುವತ್ತು ವರ್ಷ ಹಿಂದೆ ವಲೇರಿಯನ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪತಿ
ಸುಮಾರು 2 ವರ್ಷಗಳ ಹಿಂದೆ ಗಂಡ ವಲೇರಿಯನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.  ವಲೇರಿಯನ್ ಅವರು ತನ್ನನ್ನು ಮತ್ತು  ಮಕ್ಕಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯ ಮಾಡಿದ್ದು, ಒಪ್ಪದಿದ್ದಾಗ ಕ್ರೈಸ್ತ ಧರ್ಮಕ್ಕೆ ಸೇರಿದ ವಿಗ್ರಹ ಮತ್ತು ಪುಸ್ತಕಗಳನ್ನು ನಾಶ ಮಾಡಿದ್ದಾರೆ. ಅನೇಕ ಬಾರಿ  ಸೆಲಿನ್ ಅವರಿಗೆ ಕಟ್ಟಿಗೆಯಿಂದ ಹೊಡೆದು ಚಿತ್ರಹಿಂಸೆ ನೀಡಿ ಮನೆಯಿಂದ ಓಡಿಸಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ವಿಚ್ಚೇದನ ನೀಡದೆ ಮುಸ್ಲಿಂ ಯುವತಿಯೊಂದಿಗೆ ಮದುವೆ
ವಿಚ್ಚೇದನ ನೀಡದೇ ನಾವುಂದದ ಮುಸ್ಲಿಂ ಧರ್ಮಕ್ಕೆ ಸೇರಿದ ಯುವತಿಯೋರ್ವರನ್ನು ವಿವಾಹವಾಗಿದ್ದಾರೆ ಎಂದು ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಯುವತಿಯ ಬಗ್ಗೆ ಅವರು ವಿವರಗಳನ್ನು ನೀಡಿದ್ದಾರೆ.

ಗಂಗೊಳ್ಳಿ ಚರ್ಚ್ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ
ಮುಸ್ಲಿಂ ಯುವಕರನ್ನು ಮನೆಯೊಳಗೆ ನುಗ್ಗಿಸಿ ತನಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿಸಿದ್ದಾರೆ. ಜನವರಿ 26ರಂದು ಸೆಲಿನ್ ಅವರು ಈ ಎಲ್ಲ ಘಟನೆಗಳಿಂದ ತೀವೃವಾಗಿ ಮನನೊಂದು, ತನ್ನ ನೋವಿನ ವಿಚಾರವನ್ನು ಚರ್ಚ್ ಗುರುಗಳಿಗೆ ತಿಳಿಸಲು ಗಂಗೊಳ್ಳಿ ಚರ್ಚ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ  ಸಂಜೆ 4:45 ಗಂಟೆಗೆ ಆರೋಪಿ ವಲೇರಿಯನ್ ವಿ ಬುತ್ತೆಲ್ಲೊ ಕೆ ಸ್ಕೂಟರಿನಲ್ಲಿ ಅವರನ್ನು ಅಡ್ಡಗಟ್ಟಿ ಕುತ್ತಿಗೆ ಹಿಡಿದು ಅವಾಚ್ಯವಾಗಿ ಬೈದು ಮರ್ಯಾದೆಯಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು ಇಲ್ಲದಿದ್ದರೆ ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾದೆ ಎಂದು ಸೆಲಿನ್ ವಿವರಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ  ಪೊಲೀಸರು ಕಲಂ:341, 498(ಎ), 295(ಎ), 504, 506, 494 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 ಇಂದು ಓದಿದ ಹೆಚ್ಚು ಸುದ್ದಿಗಳು
►►ಮಂಗಳೂರಲ್ಲಿ ಮತ್ತೆ ಅನೈತಿಕ ಗೂಂಡಾಗಿರಿ: ಯುವಕ-ಯುವತಿ ಬೆನ್ನಟ್ಟಿ ಹಲ್ಲೆ:
http://bit.ly/2CavyKO
►►ಮೋದಿ ನೋಡ ಹೋದ ಪು.ಉಪಾಧ್ಯಕ್ಷೆಗೆ ಅಪಘಾತ: ಆಸ್ಪತ್ರೆಗೆ ಬಾರದ ಬಿಜೆಪಿಗರು!: http://bit.ly/2FYVWJN
►►ಕೊಳವೆ ಬಾವಿ ಸಾಲ: ನೇಣಿಗೆ ಕೊರಳೊಡ್ಡಿದ ರೈತ: http://bit.ly/2H2JutR
►►ರಾಘವೇಶ್ವರ ಶ್ರೀ ಮೇಲಿನ ಆರೋಪ ಪ್ರಕರಣ: ಏಳು ಮಂದಿಗೆ ಸಮನ್ಸ್: http://bit.ly/2EUbjUC
►►ಗುಂಡೂರಾವ್ ಅಯೋಗ್ಯ ಎನ್ನುವುದು ಸಾಬೀತು: ಬಿಎಸ್ ಯಡಿಯೂರಪ್ಪ: http://bit.ly/2EgPkpG
►►ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ಮೂವರಿಗೆ ಗಾಯ: http://bit.ly/2BkL7CI
►►ಅರೆಬೆಂದ ಶವದ ಗುರುತು ಪತ್ತೆ: ಗುರುತು ಹಿಡಿಯಲು ನೆರವಾದ ಮುರಿದ ಹಲ್ಲು: http://bit.ly/2Egio4Q
►►ದುಬೈ ನಗರಿಯನ್ನು ಮಂತ್ರಮುಗ್ದಗೊಳಿಸಿದ ಎಚ್‌ಎಮ್‌ಸಿ ಯುನೈಟೆಡ್ ಪೀಸ್ ಅವಾರ್ಡ್ಸ್: http://bit.ly/2EdzDU7

Related Tags: Man forces wife to embrace Islam, Gangolli Police, Valerian V Buthello Gujjadi, Celina Buthello, Gangolli church, Karavalikarnataka News, ಬಲವಂತದ ಮತಾಂತರ ಯತ್ನ, ವಲೇರಿಯನ್ ಬುತ್ತೆಲ್ಲೊ ಗುಜ್ಜಾಡಿ, ಸೆಲಿನಾ ಬುತ್ತೆಲ್ಲೊ ಗುಜ್ಜಾಡಿ, ಗಂಗೊಳ್ಳಿ ಪೊಲೀಸ್, ಕರಾವಳಿಕರ್ನಾಟಕ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ