ಕುಂದಾಪುರ: ನಿರ್ಲಕ್ಷ್ಯದ ಕಾರ್ಯಾಚರಣೆಗೆ ಚಿರತೆ ಜೀವಬಲಿ

ಕರಾವಳಿ ಕರ್ನಾಟಕ ವರದಿ
ಕುಂದಾಪುರ
: ಬಿಲ್ಲಾಡಿ ಪಂಚಾಯತ್ ವ್ಯಾಪ್ತಿಯ ಶಿರೂರು ಮೂರ್ಕೈ ಭಂಡಾರ್ತಿ ಎಂಬಲ್ಲಿ ಆವರಣವಿಲ್ಲದ ಪಂಚಾಯತ್ ಪಾಳು ಬಾವಿಗೆ ಬಿದ್ದ ಚಿರತೆ ಮುಳುಗಿ ಸಾವಪ್ಪಿದ ಖೇದಕರ ಘಟನೆ ವರದಿಯಾಗಿದೆ.

ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಬಾವಿಯಲ್ಲಿ ಚಿರತೆ(ಮೂರರಿಂದ ಐದು ವರ್ಷ ಪ್ರಾಯ) ಈಜಾಡುತ್ತಿರುವುದರ ಬಗ್ಗೆ ಸ್ಥಳೀಯರು ಶಂಕರನಾರಾಯಣ ವಲಯ ಅರಣ್ಯ ಕಚೇರಿಗೆ ಮಾಹಿತಿ ನೀಡಿದ್ದರು.
ಬೆಳಗಿನ ಜಾವ ಐದೂವರೆ ಸುಮಾರಿಗೆ ಸ್ಥಳೀಯರಾದ ರಾಮ ನಾಯ್ಕ ಅವರು ಬ್ಯಾಟರಿ ಬೆಳಕನ್ನು ಬಾವಿಗೆ ಹಾಯಿಸಿದಾಗ ಚಿರತೆಯನ್ನು ಮೊದಲ ಬಾರಿಗೆ ಕಂಡು ಸ್ಥಳೀಯರ ಗಮನ ಸೆಳೆದಿದ್ದರು.

ಏಳುವರೆ ಗಂಟೆಗೆ ಅರಣ್ಯ ಇಲಾಖೆ ಸಿಬಂದಿ ಧಾವಿಸಿದರೂ ಅವರ ಬಳಿ ರಕ್ಷಣಾ ಕಾರ್ಯ ನಡೆಸಲು ಸೂಕ್ತ ಸಲಕರಣೆಗಳಿರಲಿಲ್ಲ ಎನ್ನಲಾಗಿದೆ. ತಕ್ಷಣ  ಬೋನು ಮತ್ತು ಬಲೆಯೊಂದಿಗೆ ಅರಣ್ಯ ಇಲಾಖಾಧಿಕಾರಿಗಳು ಧಾವಿಸಿದರೂ ಅಷ್ಟರಲ್ಲೇ ಕಾಲ ಮೀಮ್ಚಿತ್ತು.

ರಾತ್ರಿ ಇಡೀ ನೀರಿನಲ್ಲಿ ಈಜಿ ದಣಿದಿದ್ದ ಚಿರತೆ ಎಂಟುವರೆ ಸುಮಾರಿಗೆ ಈಜಲಾಗದೇ ನೀರಿನಲ್ಲಿ ಮುಳುಗಿ ಸಾವಪ್ಪಿದೆ. ಅರಣ್ಯ ಇಲಾಖಾಧಿಕಾರಿಗಳು ಸೂಕ್ತ ಸಿದ್ದತೆ ಮೊದಲೇ ಮಾಡಿಕೊಂಡಿದ್ದರೆ,  ಚಿರತೆಗೆ ಆಧಾರವಾಗಿ ಬಲವಾದ ಮರದ ದಿಮ್ಮಿ ನೀಡಿದಲ್ಲಿ ಕೂಡ ಅದನ್ನು ರಕ್ಷಿಸಬಹುದಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಇಪ್ಪತ್ತೈದಡಿ ಆಳದ ಬಾವಿಯಲ್ಲಿ ಹದಿನೈದಡಿ ನೀರಿತ್ತು. ಮುಳುಗುತಜ್ನ ಮಂಜುನಾಥ  ಅವರು ಚಿರತೆಯ ದೇಹವನ್ನು ಮೇಲಕ್ಕೆತ್ತಿದ್ದು, ಸಾಯ್ಬರ ಕಟ್ಟೆ ಪಶುವೈದ್ಯಾಧಿಕಾರಿಗಳು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.

ಹಾರ್ದಳ್ಳಿ ಮಂಡಳ್ಳಿ ಡಿಪೊದಲ್ಲಿ ಚಿರತೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ಕುಂದಾಪುರ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಎ.ಎ.ಗೋಪಾಲ, ಇಲಾಖಾಧಿಕಾರಿಗಳಾದ ಸಂತೋಷ, ಹರೀಶ, ವೀರಣ್ಣ , ರಾಕೇಶ ಮತ್ತಿತರರು ಈ ಸಂದರ್ಭ ಹಾಜರಿದ್ದರು.


ಕಾರ್ಯಾಚರಣೆ ಸಂದರ್ಭ ಬಿಲ್ಲಾಡಿ ಪಂಚಾಯತ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿಯವರು ಉಪಸ್ಥಿತರಿದ್ದು, ನೆರವು ನೀಡಿದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಮಂಗಳೂರಲ್ಲಿ ಮತ್ತೆ ಅನೈತಿಕ ಗೂಂಡಾಗಿರಿ: ಯುವಕ-ಯುವತಿ ಬೆನ್ನಟ್ಟಿ ಹಲ್ಲೆ:
http://bit.ly/2CavyKO
►►ಮೋದಿ ನೋಡ ಹೋದ ಪು.ಉಪಾಧ್ಯಕ್ಷೆಗೆ ಅಪಘಾತ: ಆಸ್ಪತ್ರೆಗೆ ಬಾರದ ಬಿಜೆಪಿಗರು!: http://bit.ly/2FYVWJN
►►ಕೊಳವೆ ಬಾವಿ ಸಾಲ: ನೇಣಿಗೆ ಕೊರಳೊಡ್ಡಿದ ರೈತ: http://bit.ly/2H2JutR
►►ರಾಘವೇಶ್ವರ ಶ್ರೀ ಮೇಲಿನ ಆರೋಪ ಪ್ರಕರಣ: ಏಳು ಮಂದಿಗೆ ಸಮನ್ಸ್: http://bit.ly/2EUbjUC
►►ಗುಂಡೂರಾವ್ ಅಯೋಗ್ಯ ಎನ್ನುವುದು ಸಾಬೀತು: ಬಿಎಸ್ ಯಡಿಯೂರಪ್ಪ: http://bit.ly/2EgPkpG
►►ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ಮೂವರಿಗೆ ಗಾಯ: http://bit.ly/2BkL7CI
►►ಅರೆಬೆಂದ ಶವದ ಗುರುತು ಪತ್ತೆ: ಗುರುತು ಹಿಡಿಯಲು ನೆರವಾದ ಮುರಿದ ಹಲ್ಲು: http://bit.ly/2Egio4Q
►►ದುಬೈ ನಗರಿಯನ್ನು ಮಂತ್ರಮುಗ್ದಗೊಳಿಸಿದ ಎಚ್‌ಎಮ್‌ಸಿ ಯುನೈಟೆಡ್ ಪೀಸ್ ಅವಾರ್ಡ್ಸ್: http://bit.ly/2EdzDU7

Related Tags: Leopard falls into well, Leopard death, Shiroor Murkai Bhandarthi, Billadi, Naveen Chandra, President, Billadi Panchayat, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ