ಶಿಕ್ಷಕಿಯಿಂದ ಬುದ್ದಿವಾದ. ಸೇಡು ತೀರಿಸಲು ಶಿಕ್ಷಕಿಯ ಹೆಸರಲ್ಲಿ ಫೇಕ್ ಅಕೌಂಟ್!

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ:
ಶಿಕ್ಷಕಿಯೋರ್ವರು ತರಗತಿಯಲ್ಲಿ ಬೈದು ಬುದ್ಧಿವಾದ ಹೇಳಿದ್ದು ಅವಮಾನ ಎಂದು ಪರಿಗಣಿಸಿದ ವಿದ್ಯಾರ್ಥಿಯೋರ್ವನು ಸೇಡಿಗಾಗಿ ಶಿಕ್ಷಕಿಯ ನಕಲಿ ಫೇಸ್‌ಬುಕ್ ಖಾತೆ ಸೃಷ್ಠಿಸಿ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡಿದ ಘಟನೆ ಕಾರವಾರದ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ನಡೆದಿದೆ.

ನಗರದ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ 9 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಅಭ್ಯಾಸದ ಗಮನ ಕೊಡುವುದಿಲ್ಲ ಎನ್ನುವ ಕಾರಣಕ್ಕಾಗಿ ಶಿಕ್ಷಕಿಯು ಬೈದು ಬುದ್ಧಿವಾದ ಹೇಳಿದ್ದರು. ತರಗತಿಯಲ್ಲಿ ಎಲ್ಲರೆದುರು ಶಿಕ್ಷಕಿಯು ಬೈದಿರುವುದಕ್ಕೆ ಅವರ ಮಾನ ತೆಗೆದು ಸೇಡು ತೀರಿಸಿಕೊಳ್ಳಲು ವಿದ್ಯಾರ್ಥಿಯು ನಿಶ್ಚಯಿಸಿದ್ದಾನೆ.

ಬಳಿಕ ಸ್ಮಾರ್ಟ್ ಮೊಬೈಲ್ ಬಳಕೆಯ ಬಗ್ಗೆ ಏನೂ ಅರಿವಿಲ್ಲದ ತನ್ನ ತಂದೆಯನ್ನು ಕಾಡಿ ಬೇಡಿ ಹಣ ಪಡೆದು ಮೊಬೈಲ್ ಖರೀದಿಸಿದ್ದಾನೆ. ತನ್ನ ಸಂಬಂಧಿಯೋರ್ವರ ಮದುವೆಗೆ ವಿಡಿಯೋ ಮಾಡುವುದಕ್ಕಾಗಿಯೇ ಮೊಬೈಲ್ ಬೇಕು ಎಂದು ಆತ ಹೇಳಿದ್ದರಿಂದ ಪಾಲಕರು ಈ ಮೊಬೈಲ್ ಕೊಡಿಸಿದ್ದಾರೆ.

ಮೊಬೈಲ್ ಖರೀದಿಸಿದ ಈತನು ಶಿಕ್ಷಕಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದಾನೆ.  ಬಳಿಕ ಅದಕ್ಕೆ ಅಶ್ಲೀಲ ವಿಡಿಯೋಗಳನ್ನು ಲಿಂಕ್ ಮಾಡಿ ಗೆಳೆಯರಿಗೆ, ಪರಿಚಯಸ್ಥರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ.

ಶಿಕ್ಷಕಿಯ ಪ್ರೊಫೈಲ್ ಹಾಗೂ ಅದರಲ್ಲಿರುವ ವಿಡಿಯೋಗಳನ್ನು ನೋಡಿದ ಹಲವರು ಆಶ್ಚರ್ಯಗೊಂಡು ಶಿಕ್ಷಕಿಯ ಬಗ್ಗೆ ತಪ್ಪು ಭಾವನೆಯನ್ನೂ ಮೂಡಿಸಿಕೊಂಡಿದ್ದಾರೆ. ಕೆಲವರ ಜೊತೆ ಚಾಟ್ ಕೂಡ ಮಾಡಲಾಗಿದೆ. ಕೊನೆಗೆ ಇತರ ಶಿಕ್ಷಕಿಯರಿಂದ ಈ ವಿಷಯ ಶಿಕ್ಷಕಿಯ ಗಮನಕ್ಕೆ ಬಂದು ಹೌಹಾರಿದ್ದಾರೆ.

ಬಳಿಕ ಮನೆಯಲ್ಲಿಯೂ ಈ ವಿಷಯವನ್ನು ಚರ್ಚಿಸಿ ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ತನ್ನ ತಂದೆಯ ಧೈರ್ಯದಿಂದ ಸೈಬರ್ ಕ್ರೈಮ್ ವಿಭಾಗದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ನಡೆದಿರುವ ಘಟನೆಯಿಂದ ಶಿಕ್ಷಕಿಯು ಮಾನಸಿಕವಾಗಿ ಕಿರಿಕಿರಿ ಅನುಭವಿಸಿ ನೊಂದಿದ್ದರು ಎನ್ನಲಾಗಿದೆ.

ಬಳಿಕ ಪೊಲೀಸರು ನಕಲಿ ಫೇಸ್‌ಬುಕ್ ಖಾತೆಯ ಬಗ್ಗೆ ತನಿಖೆ ಕೈಗೊಂಡು ಇದು ಈ ವಿದ್ಯಾರ್ಥಿಯ ಕಾರ್ಯ ಎನ್ನುವುದು ಗೊತ್ತಾಗಿದೆ. ಶಿಕ್ಷಣ ಸಂಸ್ಥೆಯ ಘನತೆಗೆ ಧಕ್ಕೆ ಬರಬಹುದು ಎಂಬ ಆತಂಕ ಹಾಗೂ ಬಾಲಕನ ಪಾಲಕರ ಆಕ್ಷೇಪದ ನಡುವೆಯೂ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎನ್ನುವ ಉದ್ದೇಶದಿಂದ ವಿದ್ಯಾರ್ಥಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಬಾಲಕನ ತಂದೆಯು ಆಟೋ ಚಾಲಕನಾಗಿದ್ದು ಈತನ ಈ ಕೃತ್ಯದಿಂದಾಗಿ ಪಾಲಕರು ನೊಂದುಕೊಂಡಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಅಧಿಕಾರ ನಡೆಸುವುದನ್ನು ಸಿದ್ದರಾಮಯ್ಯ ಅವರಿಂದ ಮೋದಿ ಕಲಿಯಲಿ: ರಾಹುಲ್ ಗಾಂಧಿ:
http://bit.ly/2CafGYC
►►ಮೋದಿ ನೋಡ ಹೋದ ಪು.ಉಪಾಧ್ಯಕ್ಷೆಗೆ ಅಪಘಾತ: ಆಸ್ಪತ್ರೆಗೆ ಬಾರದ ಬಿಜೆಪಿಗರು!: http://bit.ly/2FYVWJN
►►ಕೊಳವೆ ಬಾವಿ ಸಾಲ: ನೇಣಿಗೆ ಕೊರಳೊಡ್ಡಿದ ರೈತ: http://bit.ly/2H2JutR
►►ರಾಘವೇಶ್ವರ ಶ್ರೀ ಮೇಲಿನ ಆರೋಪ ಪ್ರಕರಣ: ಏಳು ಮಂದಿಗೆ ಸಮನ್ಸ್: http://bit.ly/2EUbjUC
►►ಗುಂಡೂರಾವ್ ಅಯೋಗ್ಯ ಎನ್ನುವುದು ಸಾಬೀತು: ಬಿಎಸ್ ಯಡಿಯೂರಪ್ಪ: http://bit.ly/2EgPkpG
►►ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ಮೂವರಿಗೆ ಗಾಯ: http://bit.ly/2BkL7CI

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ