ಅಧಿಕಾರ ನಡೆಸುವುದನ್ನು ಸಿದ್ದರಾಮಯ್ಯ ಅವರಿಂದ ಮೋದಿ ಕಲಿಯಲಿ: ರಾಹುಲ್ ಗಾಂಧಿ

ಕರಾವಳಿ ಕರ್ನಾಟಕ ವರದಿ

ಹೊಸಪೇಟೆ:
ಪ್ರಧಾನಿ ಮೋದಿ ಮಾಡಬೇಕಿದ್ದ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕ ಸರಕಾರದ ಕುರಿತು ಬಂಡಲ್‌ಗಟ್ಟಲೆ ಸುಳ್ಳುಗಳನ್ನು ಪ್ರಧಾನಿ ಮೋದಿ ಹೋದಲ್ಲಿ ಬಂದಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ. ಅಧಿಕಾರ ಹೇಗೆ ನಡೆಸಬೇಕು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿ ಪ್ರಧಾನಿ ಮೋದಿ ಕಲಿಯಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.

ಹೊಸಪೇಟೆಯಲ್ಲಿ ಶನಿವಾರ ನಡೆದ ಬೃಹತ್‌ 'ಜನಾಶೀರ್ವಾದ' ಯಾತ್ರೆಯಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಭಾಷಣ ಆರಂಭಿಸಿದ ರಾಹುಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸಿದ್ದಾರೆ. ಬಿಜೆಪಿಗೆ ದಲಿತರು, ಬಡವರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಬಿಜೆಪಿ ಸರಕಾರ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದಿದೆ. ಬಳ್ಳಾರಿಯ ಗಣಿ ಸಂಪತ್ತನ್ನು ದೋಚಿದ್ದಾರೆ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

2002ರ ಗಲಭೆ ನಂತರ ಕರ್ನಾಟಕದ ಜನತೆ ಮೋದಿ ಅವರನ್ನು ನಂಬುವುದಿಲ್ಲ. ಕಾಂಗ್ರೆಸ್‌ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಕರ್ನಾಟಕದ ಜನತೆಗೆ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಆಶಿಸುತ್ತಿದ್ದಾರೆ. ಬಳ್ಳಾರಿ ಜತೆಗೆ ಸೋನಿಯಾ ಗಾಂಧಿ ಅವರಿಗೆ ಭಾವನಾತ್ಮಕ ಸಂಬಂಧವಿದೆ.

1999ರಲ್ಲಿ ಲೋಕಸಭೆ ಚುನಾವಣೆಯನ್ನು ಸುಷ್ಮಾ ಸ್ವರಾಜ್‌ ವಿರುದ್ಧ ಸೋನಿಯಾ ಗಾಂಧಿ ಗೆದ್ದಿದ್ದರು. ಬಳ್ಳಾರಿಯ ಎಲ್ಲ 9 ವಿಧಾನಸಭೆ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದು ರಾಹುಲ್‌ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಮೋದಿ ನೋಡ ಹೋದ ಪು.ಉಪಾಧ್ಯಕ್ಷೆಗೆ ಅಪಘಾತ: ಆಸ್ಪತ್ರೆಗೆ ಬಾರದ ಬಿಜೆಪಿಗರು!:
http://bit.ly/2FYVWJN
►►ಕೊಳವೆ ಬಾವಿ ಸಾಲ: ನೇಣಿಗೆ ಕೊರಳೊಡ್ಡಿದ ರೈತ: http://bit.ly/2H2JutR
►►ರಾಘವೇಶ್ವರ ಶ್ರೀ ಮೇಲಿನ ಆರೋಪ ಪ್ರಕರಣ: ಏಳು ಮಂದಿಗೆ ಸಮನ್ಸ್: http://bit.ly/2EUbjUC
►►ಗುಂಡೂರಾವ್ ಅಯೋಗ್ಯ ಎನ್ನುವುದು ಸಾಬೀತು: ಬಿಎಸ್ ಯಡಿಯೂರಪ್ಪ: http://bit.ly/2EgPkpG
►►ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ಮೂವರಿಗೆ ಗಾಯ: http://bit.ly/2BkL7CI
►►ಅರೆಬೆಂದ ಶವದ ಗುರುತು ಪತ್ತೆ: ಗುರುತು ಹಿಡಿಯಲು ನೆರವಾದ ಮುರಿದ ಹಲ್ಲು: http://bit.ly/2Egio4Q
►►ದುಬೈ ನಗರಿಯನ್ನು ಮಂತ್ರಮುಗ್ದಗೊಳಿಸಿದ ಎಚ್‌ಎಮ್‌ಸಿ ಯುನೈಟೆಡ್ ಪೀಸ್ ಅವಾರ್ಡ್ಸ್: http://bit.ly/2EdzDU7

Related Tags: Rahul Gandhi, Bellary Rally, Prime Minister Narendra Modi, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ