ಮೋದಿ ನೋಡ ಹೋದ ಪು.ಉಪಾಧ್ಯಕ್ಷೆಗೆ ಅಪಘಾತ: ಆಸ್ಪತ್ರೆಗೆ ಬಾರದ ಬಿಜೆಪಿಗರು!
ಪಕ್ಷಕ್ಕಾಗಿ ದುಡಿಯಲು ಹೋಗಿ ತನ್ನ ಇಡೀ ಕುಟುಂಬ ನರಳಾಟ ಅನುಭವಿಸುವ ಸ್ಥಿತಿಗೆ ಬಂದಿರುವುನ್ನು ನೆನೆದು ನಿರ್ಮಲಾ ಕಣ್ಣೀರು ಹಾಕುತ್ತಿದ್ದಾರೆ.

ಅಝೀಝ್ ಕಿರುಗುಂದ/ಕರಾವಳಿ ಕರ್ನಾಟಕ ವರದಿ

ಚಿಕ್ಕಮಗಳೂರು:
ಕಳೆದ ಎರಡು ತಿಂಗಳ ಹಿಂದೆ ಪ್ರಧಾನಿ ಮೋದಿ ಬಂದಿದ್ದಾಗ ಧರ್ಮಸ್ಥಳಕ್ಕೆ ತೆರಳಿದ್ದ ಬೀರೂರಿನ ಮಹಿಳೆಯೋರ್ವರು ಇದೀಗ ಹಾಸಿಗೆ ಹಿಡಿದಿದ್ದರೂ ಬಿಜೆಪಿ ಪಕ್ಷದ ಯಾವ ಮುಖಂಡರೂ ಅತ್ತ ಸುಳಿಯದೇ ನಿರ್ಲಕ್ಷ್ಯ ವಹಿಸಿರುವುದು ಈ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

ನಡೆಯಲಾರದ ಸ್ಥಿತಿಗೆ ತಲುಪಿದ ಬಿಜೆಪಿ ಕಾರ್ಯಕರ್ತೆ
ಆ ಮಹಿಳೆಯ ಹೆಸರು ನಿರ್ಮಲಾ ರಾಜಶೇಖರ್. ಕಡೂರು ತಾಲೂಕಿನ ಬೀರೂರು ಪಟ್ಟಣದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತೆ. ಅಲ್ಲದೇ ಬೀರೂರು ಪುರಸಭೆಯ ಉಪಾಧ್ಯಕ್ಷೆ. ಇವರ ಈ ಸ್ಥಿತಿಗೆ ಕಾರಣ ಕೇಳಿದರೆ ಎಂತವರೂ ಕೂಡ ಶಾಕ್ ಆಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಕಾರ್ಯಕ್ರಮಕ್ಕೆ ಬಂದಾಗ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದ ಪ್ರತಿ ನಗರ ಘಟಕದಿಂದ ಮೋದಿ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಬರಲು ಸೂಚಿಸಲಾಗಿತ್ತು.

ಸೌಜನ್ಯಕ್ಕೂ ಭೇಟಿ ನೀಡದ ಬಿಜೆಪಿಗರು
ಈ ಹಿನ್ನೆಲೆಯಲ್ಲಿ ನಿರ್ಮಲಾ ಮೋದಿ ಕಾರ್ಯಕ್ರಮಕ್ಕೆ ಧರ್ಮಸ್ಥಳಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಾಸ್ ಬರುವಾಗ ಮಾರ್ಗಮಧ್ಯೆ ಈಕೆ ಬರುತ್ತಿದ್ದ ಕಾರು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಇತ್ತ ನಿರ್ಮಲಾ ರಾಜಶೇಖರ್‌ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ್ದರು. ಈ ವೇಳೆ ಕೋಮ ಸ್ಥಿತಿಗೆ ಹೋಗಿದ್ದ ಮಹಿಳೆ ಒಂದು ತಿಂಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಲ್ಲದೆ ತಲೆಗೆ ತಲೆಗೆ ಗಂಭೀರ ಪೆಟ್ಟು ಬಿದ್ದು ನರಳಾಟ ನಡೆಸಿದರೂ ಯಾವೊಬ್ಬ ಬಿಜೆಪಿ ಮುಖಂಡರಾಗಲಿ ಸೌಜನ್ಯಕ್ಕೂ ಈವರೆಗೂ ಆರೋಗ್ಯ ವಿಚಾರಿಸಿಲ್ಲ.

ಕಣ್ಣೀರು ಹಾಕುತ್ತಿದ್ದಾರೆ ನಿರ್ಮಲಾ
ಸದ್ಯ ನಿರ್ಮಲಾರಿಗೆ ಕೂರಲು, ನಡೆಯಲು ಆಗುವುದಿಲ್ಲ. ತನ್ನ ಪ್ರತಿ ಚಟುವಟಿಕೆಗಳಿಗೂ ತನ್ನ ಗಂಡನ ನೆರವು ಪಡೆಯದಿದ್ದರೆ ಆಕೆಯ ದೈನಂದಿನ ಆಗುಹೋಗುಗಳು ನಡೆಯುವುದೇ ಇಲ್ಲ. ಎರಡು ತಿಂಗಳ ಹಿಂದೆ ಈ ಮಹಿಳೆ ಎಲ್ಲರಂತೆ ಓಡಾಡಿಕೊಂಡಿದ್ದರು. ಇವರಿಗೆ ಅಧಿಕಾರದ ಜೊತೆಗೆ ಸಮಾಜದಲ್ಲಿ ಗೌರವ, ಗತ್ತು ಜೊತೆಗೆ ಎಲ್ಲಾದರೂ ಸಿಕ್ಕಿದ್ದರೆ ಚೆನ್ನಾಗಿದ್ದಿರಾ ಮೇಡಮ್ ಅನ್ನುವವರು ನೂರಾರು ಜನ ಇದ್ದರು. ಆದರೆ ಇವತ್ತು ಈ ಮಹಿಳೆ ಕಷ್ಟದ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಒಂದು ದಶಕದಿಂದ ಬಿಜೆಪಿ ಪಕ್ಷಕ್ಕಾಗಿ ಮನೆ ಬಿಟ್ಟು ದುಡಿದು ಪಕ್ಷ ಸಂಘಟನೆಗಾಗಿ ದುಡಿದ ನನ್ನ ಬದುಕು ಹೀಗಾಯಿತಲ್ಲ ಅಂತಾ ಮರುಕ ಪಡುತ್ತಿದ್ದಾರೆ ನಿರ್ಮಲಾ. ತನ್ನ ಪಕ್ಷ ಕಷ್ಟದ ದಿನಗಳಲ್ಲಿ ತನ್ನೊಂದಿಗೆ ಇರುತ್ತೆ ಎಂಬ ನಂಬಿಕೆ ಸುಳ್ಳಾಗಿದೆ. ಪಕ್ಷಕ್ಕಾಗಿ ದುಡಿಯಲು ಹೋಗಿ ತನ್ನ ಇಡೀ ಕುಟುಂಬ ನರಳಾಟ ಅನುಭವಿಸುವ ಸ್ಥಿತಿಗೆ ಬಂದಿರುವುನ್ನು ನೆನೆದು ನಿರ್ಮಲಾ ಕಣ್ಣೀರು ಹಾಕುತ್ತಿದ್ದಾರೆ.

ಆರೋಗ್ಯ ವಿಚಾರಿಸದ ಸಂಸದೆ ಶೋಭಾ
ಒಟ್ಟಾರೆಯಾಗಿ ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ತನ್ನ ಕಾರ್ಯಕರ್ತರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವುದನ್ನು ಕೇಳಿದ್ದೇವೆ. ಇದೇನಾ ನಿಮ್ಮ ಪಕ್ಷದ ಕಾರ್ಯಕರ್ತರಿಗೆ ನೀವು ತೋರುವ ಗೌರವ, ಕಾಳಜಿ ಅಂತಾ ಬೀರೂರಿನ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಕೂಡಾ ಆರೋಗ್ಯ ವಿಚಾರಿಸುವ ಕೆಲಸ ಮಾಡಿಲ್ಲ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ನೋವನ್ನು ಪಕ್ಷವೂ ಮಾಡದಿರುವುದು ದುರಂತವೇ ಸರಿ.

'ಚಿಕಿತ್ಸೆಗಾಗಿ ಹಣದ ಸಹಾಯ ಮಾಡುವ ಅವಶ್ಯಕತೆ ನಮಗಿಲ್ಲ. ತನ್ನ ಹೆಂಡತಿಯ ಚಿಕಿತ್ಸೆ ನಾನೇ ಮಾಡಿಸುತ್ತಿದ್ದೇನೆ. ಆದರೆ ಬಿಜೆಪಿಯ ಯಾವ ನಾಯಕರು ನಮ್ಮ ಕುಟುಂದ ಕಣ್ಣೀರು ಒರೆಸುವ ಒಂದು ಸಣ್ಣ ಪ್ರಯತ್ನ ಕೂಡ ಮಾಡದಿರುವುದು ನಮಗೆ ಸಂಕಟ ತಂದಿದೆ'
-ರಾಜಶೇಖರ್, ನಿರ್ಮಲಾ ಪತಿ
 

ಇಂದು ಓದಿದ ಹೆಚ್ಚು ಸುದ್ದಿಗಳು
►►ಕೊಳವೆ ಬಾವಿ ಸಾಲ: ನೇಣಿಗೆ ಕೊರಳೊಡ್ಡಿದ ರೈತ:
http://bit.ly/2H2JutR
►►ರಾಘವೇಶ್ವರ ಶ್ರೀ ಮೇಲಿನ ಆರೋಪ ಪ್ರಕರಣ: ಏಳು ಮಂದಿಗೆ ಸಮನ್ಸ್: http://bit.ly/2EUbjUC
►►ಗುಂಡೂರಾವ್ ಅಯೋಗ್ಯ ಎನ್ನುವುದು ಸಾಬೀತು: ಬಿಎಸ್ ಯಡಿಯೂರಪ್ಪ: http://bit.ly/2EgPkpG
►►ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ಮೂವರಿಗೆ ಗಾಯ: http://bit.ly/2BkL7CI
►►ಅರೆಬೆಂದ ಶವದ ಗುರುತು ಪತ್ತೆ: ಗುರುತು ಹಿಡಿಯಲು ನೆರವಾದ ಮುರಿದ ಹಲ್ಲು: http://bit.ly/2Egio4Q
►►ದುಬೈ ನಗರಿಯನ್ನು ಮಂತ್ರಮುಗ್ದಗೊಳಿಸಿದ ಎಚ್‌ಎಮ್‌ಸಿ ಯುನೈಟೆಡ್ ಪೀಸ್ ಅವಾರ್ಡ್ಸ್: http://bit.ly/2EdzDU7

Related Tags: Modi Dharmasthala Visit, Kaduru BJP, Birur Purasabha Vice President, Nirmala, Accident, Injuired, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ