ಗುಂಡೂರಾವ್ ಅಯೋಗ್ಯ ಎನ್ನುವುದು ಸಾಬೀತು: ಬಿಎಸ್ ಯಡಿಯೂರಪ್ಪ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದು ಅದರ ಕರ್ತವ್ಯವನ್ನು ಅದು ನಿರ್ವಹಿಸುತ್ತಿದೆ. ಐಟಿ, ಇಡಿ ದಾಳಿಗಳ ಹಿಂದೆ ಬಿಜೆಪಿಯ ಕೈವಾಡವಿದೆ ಎಂಬ ದಿನೇಶ್‌ ಗುಂಡೂರಾವ್‌ ಹೇಳಿಕೆ ಖಂಡನೀಯ. ತಾವು ಅಯೋಗ್ಯ ಎನ್ನುವುದನ್ನು ಅವರೇ ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಐಟಿ ದಾಳಿಯ ಹಿಂದೆ ನಮ್ಮ ಕೈವಾಡವನ್ನು ಶಂಕಿಸುವುದು ಹೊಣೆಗೇಡಿತನ. ಜನಪ್ರತಿನಿಧಿಗಳಾದ ಅವರು ಕನಿಷ್ಠ ಜವಾಬ್ದಾರಿಯಿಂದ ವರ್ತಿಸುವುದನ್ನು ಬಿಟ್ಟು ಈ ರೀತಿ ಅಪ್ರಬುದ್ಧರಂತೆ ಬಾಲಿಶ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಯಡಿಯೂರಪ್ಪ, ದಿನೇಶ್ ಗುಂಡೂರಾವ್ ಸ್ವಲ್ಪ ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಲಿ ಎಂದರು.

ರಾಜ್ಯಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷರನ್ನು ಖುಷಿಪಡಿಸಲು ಹೀಗೆ ಮನಬಂದಂತೆ ಮಾತನಾಡುವ ಮೊದಲು ದಿನೇಶ್‌ ಗುಂಡೂರಾವ್‌ ತಮ್ಮ ಆರೋಪಗಳಿಗೆ ದಾಖಲೆ ನೀಡಲಿ ಎಂದು ಯಡಿಯೂರಪ್ಪ ಸವಾಲು ಹಾಕಿದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ಮೂವರಿಗೆ ಗಾಯ:
http://bit.ly/2BkL7CI
►►ಅರೆಬೆಂದ ಶವದ ಗುರುತು ಪತ್ತೆ: ಗುರುತು ಹಿಡಿಯಲು ನೆರವಾದ ಮುರಿದ ಹಲ್ಲು: http://bit.ly/2Egio4Q
►►ದುಬೈ ನಗರಿಯನ್ನು ಮಂತ್ರಮುಗ್ದಗೊಳಿಸಿದ ಎಚ್‌ಎಮ್‌ಸಿ ಯುನೈಟೆಡ್ ಪೀಸ್ ಅವಾರ್ಡ್ಸ್: http://bit.ly/2EdzDU7
►►ಆತ್ಮಚರಿತ್ರೆಯಲ್ಲ. ಅದು ಪೂಜಾರಿಯ ಪಾಪದ ಕೊಡ: ಶಾಸಕ ಮಧು ಬಂಗಾರಪ್ಪ: http://bit.ly/2EwB8wc
►►ಟಾರ್ಗೆಟ್ ಇಲ್ಯಾಸ್ ಹತ್ಯೆ: ಇಬ್ಬರು ಶಂಕಿತ ಆರೋಪಿಗಳ ಬಂಧನ: http://bit.ly/2BNVmjT
►►ಪತ್ನಿಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ. 1.25 ಲಕ್ಷ ರೂ. ದಂಡ: http://bit.ly/2EfLhtW

Related Tags: Yediyurappa, Dinesh Gundu Rao, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ