ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ಮೂವರಿಗೆ ಗಾಯ

ಕರಾವಳಿ ಕರ್ನಾಟಕ ವರದಿ

ಜಮ್ಮು:
ಗಡಿಯಲ್ಲಿ ಉಗ್ರರು ಅಟ್ಟಹಾಸ ಮೆರದಿದ್ದು, ಇಲ್ಲಿನ ಸುಂಜ್ವಾನ ಬಳಿಯ ಸೇನಾ ಶಿಬಿರದ ಮೇಲೆ ಬೆಳಗಿನ ಜಾವ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಭಾರತೀಯ ಸೇನೆ ಯೋಧ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

ಮೂವರಿಂದ ನಾಲ್ವರು ಉಗ್ರರು ಅಡಗಿರುವ ಸಾಧ್ಯತೆಗಳಿದ್ದು ಕ್ಷಿಪ್ರ ಕಾರ್ಯಾಚರಣೆ ಪಡೆಗಳು ಉಗ್ರರಿಗಾಗಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಶಸ್ತ್ರಾಸ್ತ್ರಧಾರಿ ಉಗ್ರರು ಸೇನಾ ಪ್ರದೇಶದ ಒಳನುಗ್ಗಲು ಗುಂಡಿನ ದಾಳಿ ನಡೆಸಿದ್ದು, ಗ್ರೆನೇಡ್‍ಗಳನ್ನ ಎಸೆದಿದ್ದಾರೆ. ಸೇನೆ ಯೋಧ ಮತ್ತು ಅವರ ಪುತ್ರಿಗೆ ಗಾಯಗಳಾಗಿವೆ. ಕೂಡಲೇ ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೈನಿಕರು ಕಾರ್ಯಾಚರಣೆ ಆರಂಭಿಸಿದ್ದಾರೆ.

2006ರಲ್ಲಿ ಕೂಡ ಇದೇ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆಗ 12 ಯೋಧರು ಹುತಾತ್ಮರಾಗಿ, 7 ಯೋಧರು ಗಾಯಗೊಂಡಿದ್ದರು. ಆತ್ಮಾಹುತಿ ದಾಳಿ ನಡೆಸಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿದ ದಿನವಾದ ಫೆಬ್ರವರಿ 9 ರಂದು ಪ್ರತೀಕಾರವಾಗಿ ದಾಳಿಗೆ ಸಂಚು ನಡೆಸಲಾಗಿದೆ ಎಂದು ಹೇಳಲಾಗಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಅರೆಬೆಂದ ಶವದ ಗುರುತು ಪತ್ತೆ: ಗುರುತು ಹಿಡಿಯಲು ನೆರವಾದ ಮುರಿದ ಹಲ್ಲು:
http://bit.ly/2Egio4Q
►►ದುಬೈ ನಗರಿಯನ್ನು ಮಂತ್ರಮುಗ್ದಗೊಳಿಸಿದ ಎಚ್‌ಎಮ್‌ಸಿ ಯುನೈಟೆಡ್ ಪೀಸ್ ಅವಾರ್ಡ್ಸ್: http://bit.ly/2EdzDU7
►►ಆತ್ಮಚರಿತ್ರೆಯಲ್ಲ. ಅದು ಪೂಜಾರಿಯ ಪಾಪದ ಕೊಡ: ಶಾಸಕ ಮಧು ಬಂಗಾರಪ್ಪ: http://bit.ly/2EwB8wc
►►ಟಾರ್ಗೆಟ್ ಇಲ್ಯಾಸ್ ಹತ್ಯೆ: ಇಬ್ಬರು ಶಂಕಿತ ಆರೋಪಿಗಳ ಬಂಧನ: http://bit.ly/2BNVmjT
►►ಪತ್ನಿಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ. 1.25 ಲಕ್ಷ ರೂ. ದಂಡ: http://bit.ly/2EfLhtW
►►ಮಠ, ಮಂದಿರ ಸ್ವಾಧೀನಪಡಿಸಿಕೊಳ್ಳುವ ಉದ್ದೇಶವಿಲ್ಲ: ಸಿದ್ದರಾಮಯ್ಯ: http://bit.ly/2sk4Gs0
►►ದೊಡ್ಡಪ್ಪನಿಂದಲೇ ಅತ್ಯಾಚಾರ: ಶಾಲಾ ಬಾಲಕಿಯಿಂದ ಪೊಲೀಸರಿಗೆ ದೂರು: http://bit.ly/2siwg91

Related Tags: Jammu and Kashmir, Militants Attack, Family Quarters, Army Camp, Sunjwan, Injured, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ