ಟಾರ್ಗೆಟ್ ಇಲ್ಯಾಸ್ ಹತ್ಯೆ: ಇಬ್ಬರು ಶಂಕಿತ ಆರೋಪಿಗಳ ಬಂಧನ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಟಾರ್ಗೆಟ್ ಹೆಸರಿನ ಗುಂಪು ಕಟ್ಟಿಕೊಂಡು ಹಲವೆಡೆ ಸುಲಿಗೆ, ಕೊಲೆಯತ್ನ, ಅತ್ಯಾಚಾರದಂತಹ ಕೃತ್ಯಗಳನ್ನು ಎಸಗುತ್ತಿದ್ದ ರೌಡಿಶೀಟರ್ ಟಾರ್ಗೆಟ್‌ ಇಲ್ಯಾಸ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಉಳ್ಳಾಲ ಅಬ್ಬಕ್ಕ ವೃತ್ತದ ಸಲಫಿ ಮಸೀದಿ ಬಳಿಯ ನಿವಾಸಿ ಮಹಮ್ಮದ್ ಸಮೀರ್‌ ಅಲಿಯಾಸ್‌ ರೋಬರ್ಟ್‌ (27) ಹಾಗೂ ಕಾಸರಗೋಡು ಜಿಲ್ಲೆ ಮಂಜೇಶ್ವರ ಸಮೀಪದ ಪಾವೂರು ಗೇರುಕಟ್ಟೆ ನಿವಾಸಿ ನಮೀರ್ ಹಂಝ (34) ಬಂಧಿತ ಆರೋಪಿಗಳು.

ಸಮೀರ್‌ ವಿರುದ್ಧ ಟಾರ್ಗೆಟ್‌ ಗುಂಪಿನ ಸುರ್ಮಾ ಇಮ್ರಾನ್‌ ಎಂಬಾತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉಳ್ಳಾಲ ಠಾಣೆಯಲ್ಲಿ ಪ್ರಕರಣಗಳಿವೆ.

ನಮೀರ್‌ ಹಂಝ ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆಯತ್ನ, ಸುರತ್ಕಲ್ ಠಾಣೆ ಮತ್ತು ಮಂಗಳೂರು ಉತ್ತರ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಒಂದು ದರೋಡೆ ಪ್ರಕರಣ ಮತ್ತು ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಒಂದು ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ.

ತನಿಖಾ ತಂಡಕ್ಕೆ ಸಿಕ್ಕ ಮಹತ್ವದ ಮಾಹಿತಿಯಲ್ಲಿ ಕೇರಳಕ್ಕೆ ಹೋದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ಕೊಲೆಯ ಆರೋಪಿಗಳಿಗೆ ಸಹಕಾರ ನೀಡಿದವರನ್ನು ವಶಕ್ಕೆ ಪಡೆದು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಒಂದೆರಡು ದಿನಗಳಲ್ಲಿ ಕೊಲೆ ಹಿಂದಿರುವ ಆರೋಪಿಗಳ ಸ್ಪಷ್ಟ ಸುಳಿವು ಸಿಗಲಿದ್ದು, ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ತಿಳಿಸಿದ್ದಾರೆ.

ಉಳ್ಳಾಲದ ಟಾರ್ಗೆಟ್ ಗ್ರೂಪ್ ರೂವಾರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಇಲಿಯಾಸ್, ಮಂಗಳೂರಿನ ಇಲ್ಯಾಸ್ ಫ್ಲಾಟ್‍ನಲ್ಲಿ ಮಲಗಿದ್ದ ಸಮಯದಲ್ಲಿ ಮುಂಜಾನೆ ಇಬ್ಬರು ಆಗಂತುಕರು ಮನೆಗೆ ನುಗ್ಗಿ ಕೊಚ್ಚಿ ಕೊಲೆಗೈದಿದ್ದರು.

ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಒಂದೂವರೆ ತಿಂಗಳ ಹಿಂದೆಯಷ್ಟೆ ಜೈಲು ಸೇರಿದ್ದ ಇಲಿಯಾಸ್, 2 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ. ಹೀಗಾಗಿ ಆತ ಮನೆಯಲ್ಲಿ ಒಬ್ಬನೇ ಇರುವುದರ ಮಾಹಿತಿ ಪಡೆದು ಆಗಂತುಕರು ಈ ಕೃತ್ಯ ಎಸಗಿದ್ದರು.

ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಇನ್‌ಸ್ಪೆಕ್ಟರ್‌ ಕೆ.ಯು.ಬೆಳ್ಳಿಯಪ್ಪ ಮತ್ತು ಸಿಸಿಬಿ ಇನ್‌ಸ್ಪೆಕ್ಟರ್ ಶಾಂತಾರಾಂ ನೇತೃತ್ವದ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಪತ್ನಿಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ. 1.25 ಲಕ್ಷ ರೂ. ದಂಡ:
http://bit.ly/2EfLhtW
►►ಮಠ, ಮಂದಿರ ಸ್ವಾಧೀನಪಡಿಸಿಕೊಳ್ಳುವ ಉದ್ದೇಶವಿಲ್ಲ: ಸಿದ್ದರಾಮಯ್ಯ: http://bit.ly/2sk4Gs0
►►ದೊಡ್ಡಪ್ಪನಿಂದಲೇ ಅತ್ಯಾಚಾರ: ಶಾಲಾ ಬಾಲಕಿಯಿಂದ ಪೊಲೀಸರಿಗೆ ದೂರು: http://bit.ly/2siwg91
►►ಕುಂದಾಪುರ: ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ. ಹತ್ಯೆ ಶಂಕೆ: http://bit.ly/2Ed0dwZ
►►ಸಚಿನ್ ಪುತ್ರಿ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ: ಟೆಕಿ ಅರೆಸ್ಟ್: http://bit.ly/2FZ0orX
►►ಕುವೈಟ್‌ನಿಂದ ಗಡಿಪಾರಾದವರು ಊರಿನಲ್ಲಿ ಗಾರೆ ಕೆಲಸ ಹಿಡಿದರು!: http://bit.ly/2FXf8r8
►►ಫೆಬ್ರವರಿ 18 ರಿಂದ 20 ರವರೆಗೆ ಅಮಿತ್ ಶಾ ಕರಾವಳಿ ಭೇಟಿ: http://bit.ly/2EpVlDH

Related Tags: Mangaluru, Target Group, Ilyas Murder, Two Accused Arrested, Muhammed Sameer, Nameer Hamza, Target Group Ilyas, Murder, Mangalore, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ