ಮಠ, ಮಂದಿರ ಸ್ವಾಧೀನಪಡಿಸಿಕೊಳ್ಳುವ ಉದ್ದೇಶವಿಲ್ಲ: ಸಿದ್ದರಾಮಯ್ಯ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಮಠ, ಮಂದಿರಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದರ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಹೊರಡಿಸಿರುವ ಸುತ್ತೋಲೆಯನ್ನು ವಾಪಾಸ್ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ಬಿಜೆಪಿ ಸರಕಾರದ ವಿರುದ್ಧ ಗುರುವಾರ ನಿಲುವಳಿ ಸೂಚನೆ ಮಂಡನೆಗೆ ಮುಂದಾಗುತ್ತಿದ್ದಂತೆಯೆ, ಹಿಂದೂ ಮಠಗಳನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಸರಕಾರಕ್ಕೆ ಇಲ್ಲ. ಮುಜರಾಯಿ ಇಲಾಖೆಯು ಸಲಹೆ ಸೂಚನೆ ಕೋರಿ ಪ್ರಕಟಣೆ ಹೊರಡಿಸಿತ್ತೇ ಹೊರತು ಸುತ್ತೋಲೆ ಅಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ವಿವಾದಕ್ಕೆ ತೆರೆ ಎಳೆದಿದ್ದಾರೆ.

ಮಠ ಮಾನ್ಯಗಳ ವಿಚಾರದಲ್ಲಿ ಸರಕಾರಕ್ಕೆ ಅಪಾರ ಗೌರವ ಇದೆ. ಇವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಉಸಾಬರಿ ನಮಗಿಲ್ಲ. ಹಿಂದೊಮ್ಮೆ ಕೋರ್ಟ್‌ ಹೇಳಿದ್ದಂತೆ ಸಾರ್ವಜನಿಕ ಅಭಿಪ್ರಾಯ ಪಡೆಯಲು ಪ್ರಕಟಣೆ ಹೊರಡಿಸಲಾಗಿದೆ. ಇದನ್ನು ಸುತ್ತೋಲೆ ಎಂದು ತಿಳಿದು ಅಪಾರ್ಥ ಬರುವ ರೀತಿ ಬಿಂಬಿಸಿದ್ದು ಸರಿಯಲ್ಲ. ಯಾವುದೇ ಕಾರಣಕ್ಕೂ ಮಠಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಇಚ್ಛೆ ಸರಕಾರಕ್ಕೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಮಠಗಳನ್ನು ಮಾತ್ರ ಸರ್ಕಾರ ನೋಡಿಕೊಳ್ಳುತ್ತದೆ. 2006 ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ ಆದೇಶದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಪ್ರಕಟಣೆ ಹೊರಡಿಸಿದ್ದಾರೆ. ಆ ರೀತಿಯ ಅಭಿಪ್ರಾಯ ಕೇಳಿರುವುದು ಸರಿಯಲ್ಲ ಎಂದು ವಾಪಸ್‌ ಪಡೆಯಲು ಸೂಚಿಸಿದ್ದೇನೆ ಎಂದು ತಿಳಿಸಿದರು.

2007 ಮಾರ್ಚ್‌ 1 ರಂದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೋರ್ಟ್‌ ಆದೇಶದಂತೆ ನ್ಯಾಯಮೂರ್ತಿ ರಾಮಾಜೋಯಿಸ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಂದರ್ಭದಲ್ಲಿಯೂ ಇದೇ ರೀತಿ ಸಾರ್ವಜನಿಕರ ಅಭಿಪ್ರಾಯ ಕೇಳಲಾಗಿತ್ತು. ಆವಾಗ ಯಾವ ಮಠಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದೀರಿ ಎಂದು ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿಯವರೇನು ಹಿಂದೂಗಳ ಗುತ್ತಿಗೆ ಪಡೆದುಕೊಂಡಿದ್ದಾರಾ ಎಂದು ತಿರುಗೇಟು ನೀಡಿದರು.

ಧಾರ್ಮಿಕ ದತ್ತಿ ಕಾಯಿದೆಯಡಿ ಹಿಂದೂ ಮಠ ಮಾನ್ಯಗಳನ್ನು ತರಲು ಹೊರಟಿದ್ದ ರಾಜ್ಯ ಸರಕಾರದ ನಡೆಗೆ ನಾನಾ ಮಠಾಧೀಶರು, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.

ಇಂದು ಓದಿದ ಹೆಚ್ಚು ಸುದ್ದಿಗಳು
►►ದೊಡ್ಡಪ್ಪನಿಂದಲೇ ಅತ್ಯಾಚಾರ: ಶಾಲಾ ಬಾಲಕಿಯಿಂದ ಪೊಲೀಸರಿಗೆ ದೂರು:
http://bit.ly/2siwg91
►►ಕುಂದಾಪುರ: ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ. ಹತ್ಯೆ ಶಂಕೆ: http://bit.ly/2Ed0dwZ
►►ಸಚಿನ್ ಪುತ್ರಿ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ: ಟೆಕಿ ಅರೆಸ್ಟ್: http://bit.ly/2FZ0orX
►►ಕುವೈಟ್‌ನಿಂದ ಗಡಿಪಾರಾದವರು ಊರಿನಲ್ಲಿ ಗಾರೆ ಕೆಲಸ ಹಿಡಿದರು!: http://bit.ly/2FXf8r8
►►ಫೆಬ್ರವರಿ 18 ರಿಂದ 20 ರವರೆಗೆ ಅಮಿತ್ ಶಾ ಕರಾವಳಿ ಭೇಟಿ: http://bit.ly/2EpVlDH
►►ಟ್ಯಾಂಕರ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ: http://bit.ly/2GZZ2P8

Related Tags: Karnataka Government, Withdraws, Control Of Mutt, Religious Endowment Department, Chief minister Siddaramaiah, K S Eshwarappa, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ