ಸಚಿನ್ ಪುತ್ರಿ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ: ಟೆಕಿ ಅರೆಸ್ಟ್

ಕರಾವಳಿ ಕರ್ನಾಟಕ ವರದಿ

ಮುಂಬೈ:
ಮಾಸ್ಟರ್ ಬ್ಲಾಸ್ಟರ್, ಭಾರತ ರತ್ನ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆದಿದ್ದ ಟೆಕಿಯನ್ನು ಮುಂಬೈ ಪೊಲೀಸರು ಅಂಧೇರಿಯಲ್ಲಿ ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ.

ನಿತಿನ್ ಶಿಶೋಡೆ (39) ಸಾರಾ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದ ಟೆಕಿ. ಬಂಧಿತನ ಬಳಿಯಿದ್ದ ಲ್ಯಾಪ್‌ಟಾಪ್, ಎರಡು ಮೊಬೈಲ್, ರೂಟರ್, ಕಂಪ್ಯೂಟರ್ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ನಿತಿನ್ ಮೇಲೆ ಐಪಿಸಿ ಸೆಕ್ಷನ್ 419, 420, 500, 66ಸಿ ಹಾಗೂ 66ಡಿ ಅಡಿಯಲ್ಲಿ ಕೇಸ್ ದಾಖಲಿಸಲಾಗಿದ್ದು, ಫೆಬ್ರವರಿ 9ರ ವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಾರಾ ಹೆಸರಲ್ಲಿ ನಕಲಿ ಟ್ವಿಟರ್‌ ಖಾತೆಯನ್ನು ತೆರದ ಆರೋಪಿ ಟೆಕಿ ಶಿಶೋಡೆ ಅದರಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ವಿರುದ್ಧ ಆಕ್ಷೇಪಾರ್ಹ ಪೋಸ್ಟಿಂಗ್‌ಗಳನ್ನು ಹಾಕುತ್ತಿದ್ದನು.

ನಂತರ ಸಚಿನ್ ಅವರು ತಮ್ಮ ಸಹಾಯಕರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮುಂಬಯಿ ಪೊಲೀಸರು ನಗರದ ಅಂಧೇರಿ ಪ್ರದೇಶದಲ್ಲಿ ಆರೋಪಿ ನಿತಿನ್‌ ಶಿಶೋಡೆಯನ್ನು ಬಂಧಿಸಿದರು.

ತಿಂಗಳ ಹಿಂದೆ ಸಾರಾ ತೆಂಡೂಲ್ಕರ್‌ಗೆ ಪೋನಿನಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ 32ರ ಹರೆಯದ ವ್ಯಕ್ತಿಯನ್ನು ಪಶ್ಚಿಮ ಬಂಗಾಲದಲ್ಲಿ ಬಂಧಿಸಲಾಗಿತ್ತು. ಆತನನ್ನು ಮುಂಬಯಿ ಪೊಲೀಸರು ಮತ್ತು ಪಶ್ಚಿಮ ಬಂಗಾಲ ಪೊಲೀಸರ ಜಂಟಿ ತಂಡ ಪೂರ್ವ ಮಿಡ್ನಾಪುರ ಜಿಲ್ಲೆಯ ಮಹಿಸದಾಲ್‌ ಎಂಬಲ್ಲಿ ಬಂಧಿಸಿತ್ತು.

ಇಂದು ಓದಿದ ಹೆಚ್ಚು ಸುದ್ದಿಗಳು
►►ಕುವೈಟ್‌ನಿಂದ ಗಡಿಪಾರಾದವರು ಊರಿನಲ್ಲಿ ಗಾರೆ ಕೆಲಸ ಹಿಡಿದರು!:
http://bit.ly/2FXf8r8
►►ಫೆಬ್ರವರಿ 18 ರಿಂದ 20 ರವರೆಗೆ ಅಮಿತ್ ಶಾ ಕರಾವಳಿ ಭೇಟಿ: http://bit.ly/2EpVlDH
►►ಟ್ಯಾಂಕರ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ: http://bit.ly/2GZZ2P8
►►ಹಂದಾಡಿ ಅಕ್ರಮ ಮರಳು ಅಡ್ಡೆಗೆ ದಾಳಿ: ದೋಣಿ, ಟಿಪ್ಪರ್, ಕಾರ್ಮಿಕರು ವಶಕ್ಕೆ: http://bit.ly/2FQTsNB
►►ನಕಲಿ ಖಾತೆ ತೆರೆಯುವ ವಿಡಿಯೊ: ಸ್ಪಷ್ಟನೆ ನೀಡಿದ ರಮ್ಯಾ: http://bit.ly/2BgqBTX
►►ಕುಂದಾಪುರ: ಮೋಡ ಕವಿದ ವಾತಾವರಣ. ಅಲ್ಲಲ್ಲಿ ತುಂತುರು ಮಳೆ: http://bit.ly/2C15jq0

Related Tags: Techie Arrested, Fake Twitter ID, Sachin’s Daughter, Sara Tendulkar, Sharad Pawar, Nitin Shishode, Andheri, Kannada News, Karavaliarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ