ಕುವೈಟ್‌ನಿಂದ ಗಡಿಪಾರಾದವರು ಊರಿನಲ್ಲಿ ಗಾರೆ ಕೆಲಸ ಹಿಡಿದರು!

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಕುವೈಟ್‌ನಲ್ಲಿ ಸತ್ಯನಾರಾಯಣ ಪೂಜೆ ನಡೆಸಿ, ಅಲ್ಲಿನ ಕಾನೂನಿಗೆ ಬೆಲೆ ಕೊಡದ ಆರೋಪದಲ್ಲಿ ಗಡೀಪಾರಾಗಿದ್ದ ಎಲ್ಲಾ 11 ಮಂದಿ ಭಾರತೀಯರನ್ನು ಮತ್ತೆ ಕುವೈಟ್‌ಗೆ ತೆರಳಿ ಹಳೆಯ ಕೆಲಸ ಮುಂದುವರಿಸಲು ಶೀಘ್ರ ಅವಕಾಶ ಮಾಡಿಕೊಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದ ನೆನಪು ನಿಮಗಿರಬಹುದು.

‘ನವಚೇತನ ವೆಲ್ಫೇರ್ ಅಸೋಸಿಯೇಶನ್’ ನಡೆಸಿದ ಪೂಜೆ
ಕುವೈಟ್ ದೇಶದಲ್ಲಿ ಜೀವನೋಪಾಯಕ್ಕಾಗಿ ಕ್ಯಾಟರಿಂಗ್ ನಡೆಸಿಕೊಂಡಿದ್ದು, ‘ನವಚೇತನ ವೆಲ್ಫೇರ್ ಅಸೋಸಿಯೇಶನ್’ ಎಂಬ ಸಂಸ್ಥೆ ಕಟ್ಟಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಿ ನೆಮ್ಮದಿಯಾಗಿದ್ದ ವ್ಯಕ್ತಿಯೊಬ್ಬರು ಈಗ ಏನು ಮಾಡುತ್ತಿದ್ದಾರೆ ಎಂಬ ಕುತೂಹಲವೆ? ಕಿನ್ನಿಗೋಳಿ ಸಮೀಪದ ಏಳಿಂಜೆಯ ಯಾದವ ಸನಿಲ್ ಅವರು ಏಳಿಂಜೆಯಲ್ಲಿ ಗಾರೆ ಕೆಲಸದ ಜತೆಗೆ ರಿಂಗ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.

15 ವರ್ಷ ಕುವೈಟ್‌ನಲ್ಲಿ ಕ್ಯಾಟರಿಂಗ್ ವೃತ್ತಿ, ಸತ್ಯನಾರಾಯಣ ಪೂಜೆ
15 ವರ್ಷಗಳ ದೀರ್ಘ ಅವಧಿಗೆ ಕುವೈಟ್ ದೇಶದಲ್ಲಿ ಕ್ಯಾಟರಿಂಗ್ ವೃತ್ತಿ ನಡೆಸುತ್ತಾ ಪ್ರತಿ ವರ್ಷವೂ ಸತ್ಯನಾರಾಯಣ ಪೂಜೆ, ದಸರಾ, ಅಯ್ಯಪ್ಪ ಪೂಜೆಗಳನ್ನು ನಡೆಸುತ್ತಿದ್ದ ಯಾದವ ಮತ್ತು ಅವರ ಗೆಳೆಯರ ಬದುಕಲ್ಲಿ ಎರಡು ವರ್ಷಗಳ ಹಿಂದೆ ಅಲ್ಲಿ ನಡೆಸಿದ ಸತ್ಯನಾರಾಯಣ ಪೂಜೆಯ ಬಳಿಕ ತಾವು ಕನಸಲ್ಲೂ ಊಹಿಸದ ಘಟನೆಗಳು ನಡೆದುಹೋದವು.

ನವಚೇತನ ವೆಲ್ಫೇರ್ ಅಸೋಸಿಯೇಶನ್ ಕುವೈಟ್ ರಾಯಭಾರಿ ಕಚೇರಿಯಲ್ಲಿ ನೋಂದಣಿಯಾಗಿದ್ದು, ಅ. 16, 2015ರಂದು ಸತ್ಯನಾರಾಯಣ ಪೂಜೆ ನಡೆಸಲಾಗಿತ್ತು. ಕುವೈಟ್ ಪೊಲೀಸ್ ಅಧಿಕಾರಿಗಳು ಸಂಘದ ಅಧ್ಯಕ್ಷ ಅಶೋಕ್ ಕಡಿಕಲ್ ಮತ್ತು ಪೂಜೆಯಲ್ಲಿ ಪಾಲ್ಗೊಂಡ 11 ಮಂದಿಯ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿ ಬಂಧನದಲ್ಲಿರಿಸಿದ್ದರು.

ಪಾಸ್‍ಪೋರ್ಟ್ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡು ಕುವೈಟ್ ನೆಲದ ಕಾನೂನಿನಂತೆ ಕ್ಷಿಪ್ರ ತನಿಖೆ ನಡೆಸಿ ಇವರನ್ನೆಲ್ಲ ಭಾರತಕ್ಕೆ ವಾಪಸ್ ಕಳಿಸಿದ್ದರು. 'ನಿನ್ನ ಪೂಜೆ ಏನಿದ್ದರೂ ಭಾರತಕ್ಕೆ ಹೋಗಿ ಮಾಡು' ಎಂದರಂತೆ
ಓರ್ವ ಅಧಿಕಾರಿ 'ನಿನ್ನ ಪೂಜೆ ಏನಿದ್ದರೂ ಭಾರತಕ್ಕೆ ಹೋಗಿ ಮಾಡು' ಎಂದಿದ್ದು ಬಿಟ್ಟರೆ ಯಾವ ಕಾರಣಕ್ಕೆ ತಮ್ಮನ್ನು ಭಾರತಕ್ಕೆ ಕಳಿಸಲಾಯಿತು? ಎಂಬ ಬಗ್ಗೆ ಇಂದಿಗೂ ಯಾದವ ಸನಿಲ್ ಅವರಿಗೆ ನಿಖರವಾಗಿ ತಿಳಿದಿಲ್ಲ. ನಡೆದಿರುವುದು ಕನಸೋ ವಾಸ್ತವವೋ ಎಂಬುದೇ ಅರಿಯದಂತಾಗಿದೆ.

ನವಚೇತನ ವೆಲ್ಫೇರ್ ಅಸೋಸಿಯೇಶನ್ ಮೂಲಕ ಮತಾಂತರ ಮಾಡುವ ಆರೋಪ ಇದೆ ಎಂದು ಅವರಿಗೆ ಊರಿಗೆ ಬಂದ ಮೇಲೆ ಯಾರಿಂದಲೋ ಮಾಹಿತಿ ಸಿಕ್ಕಿದರೂ ಸರಿಯಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಸಾರ್ವಜನಿಕವಾಗಿ ಪೂಜೆ ನಡೆಸಲು ಕುವೈಟ್ ಅನುಮತಿ ಇಲ್ಲ
ಕುವೈಟ್‌ನಲ್ಲಿ ಸಾರ್ವಜನಿಕವಾಗಿ ಪೂಜೆ ನಡೆಸುವುದಕ್ಕೆ ಅನುಮತಿ ಇಲ್ಲದಿರುವುದರಿಂದ ಜನವಸತಿ ಕಟ್ಟಡದ ನೆಲಮಾಳಿಗೆಯ ಮುಚ್ಚಿದ ಬಾಗಿಲಿನ ಒಳಗೆ ಪೂಜೆ ನಡೆಸಲಾಗಿತ್ತು. ಇದಕ್ಕೆ ಅನುಮತಿಯ ಅವಶ್ಯಕತೆ ಇಲ್ಲ. ಅಲ್ಲದೇ ನೆಲ ಮಾಳಿಗೆಯ ಹಾಲ್‌ಗೆ ಕುವೈಟ್ ಸ್ಥಳೀಯಾಡಳಿತದಿಂದ ಪರವಾನಿಗೆ ಕೂಡ ಇತ್ತು. ತಮ್ಮ ವಿರುದ್ಧ ಯಾರೋ ಷಡ್ಯಂತ್ರ ನಡೆಸಿ ಕುವೈಟ್ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕುವೈಟ್ ‘ನವಚೇತನ ವೆಲ್ಫೇರ್ ಅಸೋಸಿಯೇಶನ್’ ಸದಸ್ಯರ ಅನುಮಾನವಾಗಿದೆ.

ಬಾಲ್ಯದ ಬಡತನದ ಕುವೈಟ್ ದಾರಿ ತೋರಿಸಿತ್ತು
ಯಾದವ ಸನಿಲ್ ಅವರದು ಬಾಲ್ಯದಿಂದಲೂ ಬಡತನದಲೇ ಜೀವನಕ್ಕಾಗಿ ಹೋರಾಟ. 8ನೇ ತರಗತಿ ಬಳಿಕ ಮುಂಬಯಿ ತಲುಪಿ ಅಲ್ಲಿ ಸ್ವಲ್ಪ ಕಾಲ ದುಡಿದರು. ಅವಕಾಶ ಸಿಕ್ಕಿದಾಗ 2001ರಲ್ಲಿ ಕುವೈಟ್‌ಗೆ ತೆರಳಿದ್ದರು. ಕುವೈಟ್ ತಲುಪಿದ ಬಳಿಕ ಅವರು ತಾವು ಊರಲ್ಲಿ ಮಾಡುತ್ತಿದ್ದ ಸತ್ಯನಾರಾಯಣ ಪೂಜೆ ಮತ್ತಿತರ ಧಾರ್ಮಿಕ ಹಬ್ಬಗಳನ್ನು ಅಲ್ಲಿನ ಸಮಾನ ಮನಸ್ಕ ಸ್ನೇಹಿತರು ನಡೆಸುವಾಗ ಅವರ ಹೆಗಲಿಗೆ ಹೆಗಲುಕೊಟ್ಟು ಜವಾಬ್ದಾರಿ ಹಂಚಿಕೊಂಡವರು.

15 ವರ್ಷ ಕಾಲ ಕೆಲಸದ ಬಳಿಕ ಬಿಡುವಿನ ಸಮಯದಲ್ಲೂ ಇತರ ಸಣ್ಣ ಕೆಲಸಗಳನ್ನು ನಡೆಸುತ್ತಿದ್ದ ಶ್ರಮಜೀವಿಯಾಗಿದ್ದರು. 15 ವರ್ಷದ ಸರ್ವಿಸ್ ಹಣದಲ್ಲಿ ಊರಲ್ಲೇ ಏನಾದರೂ ಸ್ವ ಉದ್ಯೋಗ ಮಾಡುವ ಕನಸನ್ನು ಕುವೈಟ್ ದೇಶದಲ್ಲಿ ದುಡಿಯುವ ಸಂದರ್ಭ ಕಂಡಿದ್ದ ಯಾದವ ಅವರಿಗೆ ತಾವು ಬಯಸಿದಂತೆ ಏನನ್ನೂ ಮಾಡಲು ಇಲ್ಲಿ ಬಂದ ಬಳಿಕ ಸಾಧ್ಯವಾಗಿಲ್ಲ.

ಕುಟುಂಬ ನಿರ್ವಹಣೆಯೊಂದಿಗೆ ಐವರು ಮಕ್ಕಳ ಶಿಕ್ಷಣದ ಜವಾಬ್ದಾರಿ
ಹೆಂಡತಿ, ಇಬ್ಬರು ಮಕ್ಕಳ ಜೊತೆ ಸಹೋದರಿಯ ಮೂವರು ಮಕ್ಕಳೊಂದಿಗೆ ವಾಸಿಸುತ್ತಿರುವ ಯಾದವ ಅವರಿಗೆ 5 ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯೂ ಇದೆ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಯಾದವ ಸನಿಲ್ ಅವರು ಇನ್ನೂ ನ್ಯಾಯದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಊರಿಗೆ ಬಂದ ಮೇಲೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸುಷ್ಮಾ ಸ್ವರಾಜ್ ಬಳಿ ಕರೆದುಕೊಂಡು ಹೋಗಿ ಇವರಿಗೆ ನ್ಯಾಯ ಸಿಗುವಂತೆ ಪ್ರಯತ್ನಿಸಿದ್ದರು. ಆದರೆ ಪ್ರಯೋಜನವಾಗಲಿಲ್ಲ. ನ್ಯಾಯ ಸಿಗಲಿಲ್ಲ. ನ್ಯಾಯದ ನಿರೀಕ್ಷೆ ಇನ್ನೂ ಯಾದವ ಅವರಲ್ಲಿ ಇದೆ.

ಯಾದವ ಅವರ ಕಷ್ಟಕ್ಕೆ ಸ್ಪಂದಿಸಿದ ಮುಸ್ಲಿಂ ಗೆಳೆಯರು
ಯಾದವ ಅವರಿಗೆ ಕುವೈಟ್ ದೇಶದಲ್ಲಿ ಇವರಂತೆಯೇ ದುಡಿಯುತ್ತಿರುವ ಊರಿನ ಮುಸ್ಲಿಮರು ಸೇರಿ ಸಹಕಾರ ನೀಡಿದ್ದಾರೆ. ಮುಸ್ಲಿಂ ಗೆಳೆಯರು ಅಲ್ಲಿಂದ 10 ಸಾವಿರ ರೂ. ಕಳುಹಿಸಿಕೊಟ್ಟಿದ್ದಾರೆ. ಜಾತಿ-ಧರ್ಮ ಎಂದು ಕರಾವಳಿಯ ಜನ ಕಚ್ಚಾಡುತ್ತಿರುವ ಸಂದರ್ಭ ಕುವೈಟ್‌ನಲ್ಲಿರುವ ಭಾರತೀಯ ಮುಸ್ಲಿಮರ ಈ ಅಳಿಲು ಕಾಣಿಕೆ ಗಮನಾರ್ಹವಾಗಿದೆ.

ಇದನ್ನೂ ಓದಿ:
►►ಕುವೈಟ್‌‌ನಿಂದ ಗಡಿಪಾರಾದವರಿಗೆ ಕೆಲಸ: ಸುಷ್ಮಾ:
http://bit.ly/2pnCvGt
►►ಕುವೈಟ್‌ನಲ್ಲಿ ಪೂಜೆ: ಕರಾವಳಿಯ 9 ಮಂದಿ ಗಡಿಪಾರು: http://bit.ly/1MOuF8j

ಇಂದು ಓದಿದ ಹೆಚ್ಚು ಸುದ್ದಿಗಳು
►►ಫೆಬ್ರವರಿ 18 ರಿಂದ 20 ರವರೆಗೆ ಅಮಿತ್ ಶಾ ಕರಾವಳಿ ಭೇಟಿ:
http://bit.ly/2EpVlDH
►►ಟ್ಯಾಂಕರ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ: http://bit.ly/2GZZ2P8
►►ಹಂದಾಡಿ ಅಕ್ರಮ ಮರಳು ಅಡ್ಡೆಗೆ ದಾಳಿ: ದೋಣಿ, ಟಿಪ್ಪರ್, ಕಾರ್ಮಿಕರು ವಶಕ್ಕೆ: http://bit.ly/2FQTsNB
►►ನಕಲಿ ಖಾತೆ ತೆರೆಯುವ ವಿಡಿಯೊ: ಸ್ಪಷ್ಟನೆ ನೀಡಿದ ರಮ್ಯಾ: http://bit.ly/2BgqBTX
►►ಕುಂದಾಪುರ: ಮೋಡ ಕವಿದ ವಾತಾವರಣ. ಅಲ್ಲಲ್ಲಿ ತುಂತುರು ಮಳೆ: http://bit.ly/2C15jq0

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ