ಕೊಹ್ಲಿ ಭರ್ಜರಿ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸತತ ಮೂರನೆ ಜಯ

ಕರಾವಳಿ ಕರ್ನಾಟಕ ವರದಿ

ಕೇಪ್‌ಟೌನ್‌:
ಭಾರತ ರನ್ ಮಷಿನ್ ಖ್ಯಾತಿಯ ನಾಯಕ ವಿರಾಟ್‌ ಕೊಹ್ಲಿ ಅವರ ಅಮೋಘ 34ನೇ ಶತಕದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 3ನೇ ಪಂದ್ಯದಲ್ಲೂ 124ರನ್‌ಗಳಿಂದ ಸೋಲಿಸಿದ ಭಾರತ ತಂಡ 3-0 ಮುನ್ನಡೆಯೊಂದಿಗೆ ಸರಣಿ ಜಯದತ್ತ ಮುನ್ನುಗ್ಗಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಆಫ್ರಿಕಾ ಭಾರತ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಅಹ್ವಾನಿಸಿತು. ಭಾರತ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ (0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತಾದರೂ 2ನೇ ವಿಕೆಟ್‌ಗೆ ಶಿಖರ್ ಧವನ್ (76) ಹಾಗೂ ಕೊಹ್ಲಿ 140 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು.

ಖಾತೆ ತೆರೆಯುವ ಮೊದಲೇ ಕೊಹ್ಲಿಗೆ ಜೀವದಾನ ದೊರೆಯಿತು. ಡಿಆರ್‌ಎಸ್ ಸಹಾಯದಿಂದ ಕೊಹ್ಲಿ ಕ್ರೀಸ್‌ನಲ್ಲಿ ಉಳಿದರು.

ಧವನ್ ಔಟಾದ ಬಳಿಕ ಕೊಹ್ಲಿ ಏಕಾಂಗಿ ಹೋರಾಟ ಪ್ರದರ್ಶಿಸಿದ್ದು, ರಹಾನೆ ಸೇರಿ ಮಧ್ಯಮ ಕ್ರಮಾಂಕ ವೈಫಲ್ಯ ಅನುಭವಿಸಿತು. 7ನೇ ವಿಕೆಟ್‌ಗೆ ಭುವನೇಶ್ವರ್ ಜೊತೆ ಕೊಹ್ಲಿ 67 ರನ್ ಜೊತೆಯಾಟವಾಡಿ ತಂಡವನ್ನು 300ರ ಗಡಿ ದಾಟಿಸಿದರು.

159 ಎಸೆತಗಳಲ್ಲಿ ಅಮೋಘ 160 ರನ್  12 ಬೌಂಡರಿ, 2 ಸಿಕ್ಸರ್ ಸಿಡಿಸಿದ ಕೊಹ್ಲಿ ಏಕದಿನದಲ್ಲಿ 34ನೇ ಶತಕ ದಾಖಲಿಸಿದರು. ಜೊತೆಗೆ ಭಾರತೀಯ ನಾಯಕನಾಗಿ ಅತಿಹೆಚ್ಚು ಶತಕಗಳ ದಾಖಲೆ ಬರೆದರು. ಏಕದಿನದಲ್ಲಿ ಕೊಹ್ಲಿಗಿದು 12ನೇ ಶತಕ. ಇದರೊಂದಿಗೆ ಸೌರವ್ ಗಂಗೂಲಿಯ 11 ಶತಕಗಳ ದಾಖಲೆ ಮುರಿದರು.ಭಾರತ ನೀಡಿದ 304 ರನ್‌ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಫ್ರಿಕಾ ತಂಡ 40 ಓವರ್‌ಗಳಲ್ಲಿ ಕೇವಲ 179 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಭಾರತದ ವಿರುದ್ಧ 124 ರನ್‌ಗಳ ಹೀನಾಯ ಸೋಲು ಕಂಡಿತು.

6 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 3-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆಫ್ರಿಕಾಗೆ ಸರಣಿ ಜೀವಂತವಾಗಿರಿಸಿಕೊಳ್ಳಲು ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಟ್ಯಾಂಕರ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ: ನಾಲ್ವರ ದುರ್ಮರಣ:
http://bit.ly/2GZZ2P8
►►ಹಂದಾಡಿ ಅಕ್ರಮ ಮರಳು ಅಡ್ಡೆಗೆ ದಾಳಿ: ದೋಣಿ, ಟಿಪ್ಪರ್, ಕಾರ್ಮಿಕರು ವಶಕ್ಕೆ: http://bit.ly/2FQTsNB
►►ನಕಲಿ ಖಾತೆ ತೆರೆಯುವ ವಿಡಿಯೊ: ಸ್ಪಷ್ಟನೆ ನೀಡಿದ ರಮ್ಯಾ: http://bit.ly/2BgqBTX
►►ಕುಂದಾಪುರ: ಮೋಡ ಕವಿದ ವಾತಾವರಣ. ಅಲ್ಲಲ್ಲಿ ತುಂತುರು ಮಳೆ: http://bit.ly/2C15jq0
►►ಪಟೇಲ್ ಪ್ರಧಾನಿಯಾಗಿದ್ದರೆ ಇಡೀ ಕಾಶ್ಮೀರ ನಮ್ಮದಾಗುತ್ತಿತ್ತು: ಪ್ರಧಾನಿ ಮೋದಿ: http://bit.ly/2E9lXd7
►►ಜಾತ್ರೆಯಲ್ಲಿ ಚಿರತೆ ಉಗುರು ಮಾರಾಟ: ಇಬ್ಬರು ಆರೋಪಿಗಳು ಸೆರೆ: http://bit.ly/2nOu3wp
►►ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್‌ ಕಾರು ಅಪಘಾತ: http://bit.ly/2sbTldB

Related Tags: India vs South Africa, Third ODI, Kohli Century, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ