ಪರಿವರ್ತನಾ ಯಾತ್ರೆ ಸಮಾರೋಪ: ಮಹಾದಾಯಿ ಬಗ್ಗೆ ಮೌನ ಮುರಿಯದ ಮೋದಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಕರ್ನಾಟಕದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕ ಸರ್ಕಾರ `ಈಸ್ ಆಫ್ ಡೂಯಿಂಗ್ ಮರ್ಡರ್’ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆಗಳು ನಡೆಯುತ್ತಿದ್ದು, ಇದರಿಂದ ಎಲ್ಲರ ಮನದಲ್ಲಿ ಗಾಯವಾಗಿದೆ. ಹಾಗಾಗಿ ನಿಮಗಾದ ಗಾಯಕ್ಕೆ ಓಟಿನಿಂದಲೇ ಉತ್ತರ ನೀಡಬೇಕಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವ ದಿನ ಬಹಳ ದಿನ ಉಳಿದಿಲ್ಲ. ಕರ್ನಾಟಕ ಅಪರಾಧಿಗಳ ಸ್ವರ್ಗವಾಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ಅಪರಾಧ ಮತ್ತು ಭ್ರಷ್ಟಾಚಾರ ಮುಕ್ತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾರತ್‌ ಮಾತಾ ಕೀ ಜೈ ಎಂದು ಭಾಷಣ ಆರಂಭಿಸಿದ ಪ್ರಧಾನಿ ಮೋದಿ 'ಕರ್ನಾಟಕದ ನನ್ನ ಪ್ರೀತಿಯ ಬಂಧು ಭಗಿನಿಯರೆ ನಿಮಗೆಲ್ಲಾ ನನ್ನ ನಮಸ್ಕಾರಗಳು. ನಾಡಪ್ರಭು ಕೆಂಪೇಗೌಡ, ಮಹಾತ್ಮ ಬಸವೇಶ್ವರ, ಶರಣ ಮಾದಾರ ಚೆನ್ನಯ್ಯ, ವೀರ ರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸರ್‌.ಎಂ.ವಿಶ್ವೇಶ್ವರಯ್ಯ ಅವರಂತಹ ಮಹಾನ್‌ ನಾಡು ಕರ್ನಾಟಕ. ನವ ಕರ್ನಾಟಕ ನಿರ್ಮಾಣದಲ್ಲಿ ಪರಿವರ್ತನೆ ಮಾಡಿ ಬಿಜೆಪಿ ಗೆಲ್ಲಿಸಿ' ಎಂದು ಕನ್ನಡದಲ್ಲೇ ಮಾತನಾಡಿದ್ದು, ಸಾವಿರಾರು ಕಾರ್ಯಕರ್ತರ ಕರತಾಡನ ಮುಗಿಲು ಮುಟ್ಟಿತು.

ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಪ್ರಧಾನಿ, ದೇಶದ ಬದಲು ಪಕ್ಷದ ಬಗ್ಗೆ ಯೋಚಿಸುವ ಕಾಂಗ್ರೆಸ್‌ ಸಂಸ್ಕೃತಿ ಇನ್ನು ಮುಂದೆ ದೇಶಕ್ಕೆ ಬೇಕಾಗಿಲ್ಲ. ಶ್ರೀಮಂತರಿಗೆ ಎಲ್ಲಾ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ. ಆದರೆ ಬಡವರು ಜೀವನ ಪೂರ್ತಿ ಇದಕ್ಕಾಗಿ ಶ್ರಮಿಸಬೇಕಾಗುತ್ತದೆ.

ಕೇಂದ್ರ ಸರ್ಕಾರ ಕಳೆದ ಮೂರುವರೆ ವರ್ಷಗಳಲ್ಲಿ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ನಿಮಗೆ ತಲುಪಿಸಿಲ್ಲ. ಅನುದಾನ ಬಳಕೆಯಾಗಿರುವ ಬಗ್ಗೆ ಯಾವುದಾದರೂ ಸಾಕ್ಷ್ಯ ಇದೆಯಾ ಎಂದರು.

ಅದೆಷ್ಟೋ ಜನರು ಜೀವನದಲ್ಲಿ ಬೆಳಕನ್ನೇ ಕಾಣದೆ ಹೋಗಿದ್ದಾರೆ. ಅಂತಹವರ ಜೀವನದಲ್ಲಿ ಬೆಳಕು ತುಂಬುವ ಕೆಲಸದಲ್ಲಿ ಸರ್ಕಾರ ನಿರತವಾಗಿದೆ.ಮೊದಲ ಸರ್ಕಾರಗಳು ದೇಶದ ರೈತರಿಗೆ ಯೂರಿಯಾಗಾಗಿ ಲಾಠಿ ಏಟು ತಿನ್ನಬೇಕಾಗಿತ್ತು, ಪರದಾಡಬೇಕಾಗಿತ್ತು. ನಮ್ಮ ಸರ್ಕಾರ ರೈತರನ್ನು ಸಂಕಷ್ಟದಿಂದ ದೂರ ಮಾಡಲು 'ಪ್ರಧಾನಮಂತ್ರಿ ಫ‌ಸಲ್‌ ಭಿಮಾ ಯೋಜನಾ' ಆರಂಭಿಸಿದೆವು. 'ಪ್ರಧಾನ್‌ ಮಂತ್ರಿ ಸಿಂಚಾಯಿ' ಯೋಜನೆ ತಂದೆವು. ರೈತರ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದರು.

ಮಹಾದಾಯಿ ಬಗ್ಗೆ ಪ್ರಧಾನಿ ಮೋದಿ ಮೌನ
ತಮ್ಮ ಭಾಷಣದಲ್ಲಿ ನಿರಂತರವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಮೋದಿ, ಮಹದಾಯಿ ಬಗ್ಗೆ ಏನೂ ಮಾತನಾಡಲಿಲ್ಲ. ಮೋದಿ ಆಗಮನಕ್ಕೂ ಮುನ್ನ ಕನ್ನಡ ಪರ ಸಂಘಟನೆಗಳು ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಮಧ್ಯಸ್ಥಿಕೆ ವಹಿಸುವಂತೆ ಧರಣಿ ನಡೆಸಿರುವುದರಿಂದ ಯಾವುದೇ ಫಲಪ್ರದವಾಗಿಲ್ಲ.

ಮೋದಿ ಅವರು ಬೆಂಗಳೂರು ಬರುತ್ತಿದ್ದಂತೆಯೇ ಇತ್ತ ಮಹದಾಯಿ ಹೋರಾಟಗಾರರು ಮೋದಿಯವರ ಫೋಟೋಗೆ ಹೂ ಹಾಕಿದ್ದರು. `ಗೆಟ್ ವೆಲ್ ಸೂನ್ ಮೋದಿ ಜಿ' ಎಂದು ಭಾವಚಿತ್ರದ ಮೇಲೆ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ಮೋದಿಯವರು ಮಹದಾಯಿ ವಿಚಾರ ಸಂಬಂಧಿಸಿದಂತೆ ತುಟಿ ಬಿಚ್ಚದೇ ಇರುವುದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು
►►ಪಡುಕೋಣೆ ಡಿಫಿ ಮುಖಂಡ ಸುಬ್ರಹ್ಮಣ್ಯ ಆಚಾರ್ ಕಾಂಗ್ರೆಸ್ ಸೇರ್ಪಡೆ:
http://bit.ly/2DZeWLE
►►ಕಾರ್ಕಳ: ದಂಪತಿಗೆ ಮಾರಕಾಸ್ತೃಗಳಿಂದ ಹಲ್ಲೆಗೈದು ದರೋಡೆ: http://bit.ly/2E1X42U
►►ಕೊಲ್ಲೂರು ಪೇದೆ ಆತ್ಮಹತ್ಯೆ ಬೆನ್ನಲ್ಲೇ ಮಹಿಳಾ ಪೇದೆ ಆತ್ಮಹತ್ಯೆ ಯತ್ನ: http://bit.ly/2ECseuy
►►ಮದುವೆ ನಿಗದಿಯಾಗಿದ್ದ ಪೊಲೀಸ್ ಪೇದೆ ಆತ್ಮಹತ್ಯೆ http://bit.ly/2Eg4U88
►►'ದೇಶದ ನಂ.1 ರಾಜ್ಯಕ್ಕೆ ಸ್ವಾಗತ': ಪ್ರಧಾನಿಗೆ ಸಿಎಂ ಟಾಂಗ್: http://bit.ly/2Ebvf7v
►►ಕುಂದಾಪುರ: ಫ್ಯಾನ್ಸಿ ಅಂಗಡಿ ಬೆಂಕಿಗಾಹುತಿ. ಅಪಾರ ಹಾನಿ: http://bit.ly/2E2UCsU
►►ಪರಿವರ್ತನಾ ರ್ಯಾಲಿ ಸಮಾರೋಪಕ್ಕೆ ಪ್ರಧಾನಿ ಮೋದಿ: ಬಿಗಿ ಬಂದೋಬಸ್ತ್: http://bit.ly/2GGZLo1

Related Tags: Bengaluru, PM Modi, Prime Minister Narendra Modi, Parivartan Rally, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ