'ದೇಶದ ನಂ.1 ರಾಜ್ಯಕ್ಕೆ ಸ್ವಾಗತ': ಪ್ರಧಾನಿಗೆ ಸಿಎಂ ಟಾಂಗ್

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾವೇಶ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ ಮೂಲಕ ಸ್ವಾಗತ ಕೋರಿದ್ದಾರೆ.

'ದೇಶದ ನಂಬರ್ 1 ರಾಜ್ಯಕ್ಕೆ ಸ್ವಾಗತ' ಎನ್ನುವ ಮೂಲಕ ಸಿಎಂ ಸಿದ್ಧರಾಮಯ್ಯ ಭಾವ ಚಿತ್ರವಿರುವ ಹೋಲ್ಡಿಂಗ್ಸ್ ಹಾಕುವ ಮೂಲಕ ಸ್ವಾಗತ ಕೋರಲಾಗಿದೆ.

ವಾರ್ತಾ ಇಲಾಖೆಯ ಜಾಹೀರಾತು ಸ್ಥಳದಲ್ಲಿ ಬೇರೆ ಬ್ಯಾನರ್ ಹಾಕಲು ಸಾಧ್ಯವಿರದ ಕಾರಣ ಸುತ್ತಲಿನ ಬಿಜೆಪಿ ಬ್ಯಾನರ್‌ಗಳಿಗೆ ಸಿಎಂ ಸಿದ್ದರಾಮಯ್ಯ ಹೋಲ್ಡಿಂಗ್ಸ್‌ನಿಂದ ಟಾಂಗ್ ನೀಡಲಾಗಿದೆ.

ಅಲ್ಲದೇ ನಮ್ಮ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ. ಹಲವು ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕ ಅಭಿವೃದ್ಧಿ, ಹೂಡಿಕೆ, ಆವಿಷ್ಕಾರದಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿಯವರ ಕಾಲೆಳೆದಿದ್ದಾರೆ.

ನಮ್ಮ ರಾಜ್ಯದ ಯಶಸ್ಸು ದೇಶವನ್ನೇ ಹೆಮ್ಮೆ ಪಡುವಂತೆ ಮಾಡುತ್ತದೆ. ನಮ್ಮ ಜನರ ನೀರಿನ ಬವಣೆಯನ್ನು ನೀಗಿಸಲು ಸಮಯ ಕೊಡಿ ಹಾಗೂ ಮಹಾದಾಯಿ ವಿವಾದವನ್ನು ಬಗೆಹರಿಸುವಂತೆ ನಮ್ಮ ಜನರ ಪರವಾಗಿ ನಿಮ್ಮಲ್ಲಿ ಕೇಳಿಕೊಳ್ಳತ್ತೇನೆಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿಗೆ ಸ್ವಾಗತ ಕೋರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್​ಗೆ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ. ನಂ.1 ರಾಜ್ಯಕ್ಕೆ ಸ್ವಾಗತ ಎನ್ನುವ ಬದಲು, ಭ್ರಷ್ಟಾಚಾರದಲ್ಲಿ ನಂ. 1 ರಾಜ್ಯಕ್ಕೆ ಸ್ವಾಗತ ಎಂದು ಹೇಳಿ ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ. ಅಲ್ಲದೇ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯಕ್ಕೆ ಸ್ವಾಗತ ಎಂದು ಹೇಳಿ ಎಂದು ಸಿಎಂ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಕುಂದಾಪುರ: ಮದುವೆ ನಿಗದಿಯಾಗಿದ್ದ ಪೊಲೀಸ್ ಪೇದೆ ಆತ್ಮಹತ್ಯೆ:
http://bit.ly/2Eg4U88
►►ಕುಂದಾಪುರ: ಫ್ಯಾನ್ಸಿ ಅಂಗಡಿ ಬೆಂಕಿಗಾಹುತಿ. ಅಪಾರ ಹಾನಿ: http://bit.ly/2E2UCsU
►►ಪರಿವರ್ತನಾ ರ‍್ಯಾಲಿ ಸಮಾರೋಪಕ್ಕೆ ಪ್ರಧಾನಿ ಮೋದಿ: ಬಿಗಿ ಬಂದೋಬಸ್ತ್: http://bit.ly/2GGZLo1
►►ಸುರತ್ಕಲ್ ಇಂದಿರಾ ಗಾಂಧಿ ಚಿತ್ರಕ್ಕೆ ಮಸಿ: ಡಿವೈಎಫ್ಐ ಖಂಡನೆ: http://bit.ly/2E0waZi
►►ಉಡುಪಿ ಕೃಷ್ಣನಿಗೆ 1 ಗ್ರಾಂ. ಚಿನ್ನದ ತುಳಸಿ ಕೊಡಿ: ಪಲಿಮಾರು ಮಠಾಧೀಶ: http://bit.ly/2EA27ob
►►ಬಿಜೆಪಿ ಸೇರಿದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಖಾಸ್‌ಬಾತ್…: http://bit.ly/2GHpPzo

Related Tags: Karnataka Chief Minister Siddaramaiah, Mahadayi Dispute, Prime Minister Narendra Modi, Twitter, The No. 1 State, Investments, Innovation, Progressive Policies, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ