ಗಾಂಜಾ ಮಾರಾಟಕ್ಕೆ ವಿರೋಧ: ಬಿಜೆಪಿ ಕಾರ್ಯಕರ್ತನ ಕೊಲೆ
ಕಾಂಗ್ರೆಸ್ ಮುಖಂಡನ ಮಗನ ಬಂಧನ. ಜ. 30ರಂದು ಹುಟ್ಟುಹಬ್ಬ ಆಚರಿಸಿದ್ದ ಯುವಕ ಗಾಂಜಾ ಮಾಫಿಯಾಕ್ಕೆ ಬಲಿ.

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಬಿಜೆಪಿ ಕಾರ್ಯಕರ್ತ, ಚಿನ್ನಪ್ಪ ಗಾರ್ಡನ್ ನಿವಾಸಿ ಸಂತೋಷ(28)ಎಂಬವರನ್ನು ಜೆ.ಸಿ.ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬುಧವಾರ ಕೊಲೆಗೈಯಲಾಗಿದೆ.

ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮೃತನ ಸಂಬಂಧಿಕರು ಹಾಗೂ ಸ್ಥಳೀಯರು ಜೆ.ಸಿ.ನಗರ ಠಾಣೆ ಎದುರು ಬುಧವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಜೆ.ಸಿ.ನಗರ ಬ್ಲಾಕ್ ಅಧ್ಯಕ್ಷ ಖಾದರ್ ಅವರ ಮಗ ವಾಸೀಂ ಹಾಗೂ ಫಿಲಿಫ್ಸ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇರ್ಫಾನ್ ಹಾಗೂ ಉಮ್ಮರ್ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ.

ಸಂಜೆ 6 ಗಂಟೆಯ ಸುಮಾರಿಗೆ ಬೇಕರಿಯೊಂದರ ಬಳಿ ಸಂತೋಷ್ ನಿಂತಿದ್ದರು. ವಾಸೀಂ, ಫಿಲಿಪ್ಸ್, ಇರ್ಫಾನ್ ಹಾಗೂ ಉಮ್ಮರ್ ಎಂಬವರು ಸಂತೋಷ್ ಜತೆ ಜಗಳವಾಡಿ ಮಾರಕಾಸ್ತ್ರಗಳಿಂದ ಹಲ್ಲೆಗೈದಿದ್ದರು.

ಗಂಭೀರ ಗಾಯಗೊಂಡ ಸಂತೋಷ್ ಅವರನ್ನು ಜೈನ್ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯದಲ್ಲಿಯೇ ಅವರು ಸಾವಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು.

ಗಾರ್ಡನ್‌ನಲ್ಲಿ ಜ. 29ರಂದು ಕೆಲವರು ಗಾಂಜಾ ಮಾರಾಟ ಮಾಡುತ್ತಿದ್ದಾಗ ಸಂತೋಷ್, ಗಾಂಜಾ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಗಾಂಜಾ ಮಾರಾಟ ತಡೆದ ಹಿನ್ನೆಲೆಯಲ್ಲಿ ಆರೋಪಿಗಳು ಸಂತೋಷ್ ಮೇಲೆ ದ್ವೇಷದಿಂದ ಮಾರಕ ಹಲ್ಲೆಗೈದಿದ್ದಾರೆ ಎನ್ನಲಾಗಿದೆ.

ಜ. 30ರಂದು ಸಂತೋಷ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವರ ಸಹೋದರಿಗೂ ಅದೇ ದಿನ ಮಗು ಹುಟ್ಟಿತ್ತು. ಕೇವಲ ಒಂಬತ್ತು ತಿಂಗಳ ಹಿಂದಷ್ಟೇ ಸಂತೋಷ್ ಮದುವೆ ಆಗಿತ್ತು.  ಅವರ ಕೊಲೆಯಿಂದ ಕುಟುಂಬಕ್ಕೆ ದಿಕ್ಕುತೋಚದಂತಾಗಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ದಂಧೆ ಚೆಸ್ ಆಟವಿದ್ದಂತೆ: ಉಡುಪಿ ಎಸ್‌ಪಿ ಲಕ್ಷ್ಮಣ್ ನಿಂಬರ್ಗಿ:
http://bit.ly/2DS7BO4
►►ಕುಂದಾಪುರ ಕ್ಷೇತ್ರವನ್ನು ಮತ್ತೆ ಅನಾಥವಾಗಿಸಿದ ಹಾಲಾಡಿ: ರಾಕೇಶ್ ಮಲ್ಲಿ: http://bit.ly/2ErWuIG
►►ಶಾಸಕರ ರಾಜೀನಾಮೆ ವಿರೋಧಿಸಿ ಪ್ರತಿಭಟನೆ: http://bit.ly/2nv2RCN
►►ಹಳಿ ದಾಟುವಾಗ ರೈಲು ಢಿಕ್ಕಿ: ಮಗು, ಇಬ್ಬರು ಮಹಿಳೆಯರ ಸಾವು: http://bit.ly/2BFUxoS
►►ಕಲ್ಲಡ್ಕ ಭಟ್ ಕುದ್ರೋಳಿಗೆ ಭೇಟಿ ನಾರಾಯಣ ಗುರುಗಳಿಗೆ ಅವಮಾನ: http://bit.ly/2EtVbJi

Related Tags: Ganja, Youth Killed, Kannada News, Karnataka News, Karavali Karnataka, Latest Kannada News, ಗಾಂಜಾ ಮಾಫಿಯಾ, ಯುವಕನ ಕೊಲೆ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ