ಕೊಲೆಗಡುಕ ಮುಸ್ಲಿಮರು ಕಾಂಗ್ರೆಸ್ ಜೊತೆಗಿದ್ದಾರೆ: ಈಶ್ವರಪ್ಪ

ಕರಾವಳಿ ಕರ್ನಾಟಕ ವರದಿ

ತುಮಕೂರು:
ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಿದ ಮುಸ್ಲಿಮರು ಕಾಂಗ್ರೆಸ್ ಜೊತೆಗಿದ್ದಾರೆ, ಒಳ್ಳೆಯ ಮುಸ್ಲಿಮರೆಲ್ಲಾ ಬಿಜೆಪಿಯೊಂದಿಗಿದ್ದಾರೆ ಎನ್ನುವ ಮೂಲಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಎಸ್ ಈಶ್ವರಪ್ಪ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಕರ್ನಾಟಕದಲ್ಲಿ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ಮಾಡಲು ಪಿಎಫ್ಐ ಮತ್ತು ಎಸ್ಡಿಪಿಐಗೆ ರಾಜ್ಯ ಕಾಂಗ್ರೆಸ್ ಸರಕಾರ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದ್ದು, ಇದರ ಮುಂದುವರಿದ ಭಾಗವಾಗಿ ಈಶ್ವರಪ್ಪ ಈ ಹೇಳಿಕೆಯನ್ನು ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಇದೇ ವೇಳೆ ಎಐಎಂಐಎಂ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕು ಎಂದರು.

ಕರ್ನಾಟಕದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಲು ಅರ್ಹತೆ ಇಲ್ಲದ ಕಾಂಗ್ರೆಸ್ ಸಮಾಜ ಒಡೆಯುವ ರಾಜಕಾರಣ ಮಾಡುತ್ತಿದೆ.

ಓವೈಸಿ ಜೊತೆ ಬಿಜೆಪಿ ಪರೋಕ್ಷವಾಗಿ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಗೃಹ ಸಚಿವರು ಹೇಳಿದ್ದರು. ಒಂದೊಮ್ಮೆ ಈ ಹೇಳಿಕೆಗೆ ದಾಖಲೆ ಒದಗಿಸಲು ಸಾಧ್ಯವಾಗದಿದ್ದಲ್ಲಿ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಭಾರತ ಕೊಲೆಗಳ ನಾಡಾಗಲು ಹಿಂದುತ್ವ ಕಾರಣ: ಜಿ. ರಾಜಶೇಖರ್:
http://bit.ly/2DOBnPw
►►ದಂಧೆ ಚೆಸ್ ಆಟವಿದ್ದಂತೆ: ಉಡುಪಿ ಎಸ್‌ಪಿ ಲಕ್ಷ್ಮಣ್ ನಿಂಬರ್ಗಿ: http://bit.ly/2DS7BO4
►►ಕುಂದಾಪುರ ಕ್ಷೇತ್ರವನ್ನು ಮತ್ತೆ ಅನಾಥವಾಗಿಸಿದ ಹಾಲಾಡಿ: ರಾಕೇಶ್ ಮಲ್ಲಿ: http://bit.ly/2ErWuIG
►►ಶಾಸಕರ ರಾಜೀನಾಮೆ ವಿರೋಧಿಸಿ ಪ್ರತಿಭಟನೆ: http://bit.ly/2nv2RCN
►►ಹಳಿ ದಾಟುವಾಗ ರೈಲು ಢಿಕ್ಕಿ: ಮಗು, ಇಬ್ಬರು ಮಹಿಳೆಯರ ಸಾವು: http://bit.ly/2BFUxoS
►►ಕಲ್ಲಡ್ಕ ಭಟ್ ಕುದ್ರೋಳಿಗೆ ಭೇಟಿ ನಾರಾಯಣ ಗುರುಗಳಿಗೆ ಅವಮಾನ: http://bit.ly/2EtVbJi

Related Tags: Good Muslims With BJP, Killers Muslim With Congress, Eshwarappa, Kannada News, Karnataka News, Latest Kannada News, ಈಶ್ವರಪ್ಪ, ಒಳ್ಳೆಯ ಮುಸ್ಲಿಮರು, ಕೊಲೆಗಡುಕ ಮುಸ್ಲಿಮರು, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ