ಸೆರ್‌ಲ್ಯಾಕ್‌ ಗಂಟಲಲ್ಲಿ ಸಿಲುಕಿ ಮೂರು ತಿಂಗಳ ಮಗು ಸಾವು

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಸೆರ್‌ಲ್ಯಾಕ್‌ ತಿನ್ನಿಸುವಾಗ ಗಂಟಲಲ್ಲಿ ಸಿಲುಕಿ ಮೂರು ತಿಂಗಳ ಮಗುವೊಂದು ಮೃತಪಟ್ಟ ದಾರುಣ ಘಟನೆ ಇಲ್ಲಿನ ಮಾಗಡಿ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ.

ಮಂಜುನಾಥ್-ಧನಲಕ್ಷ್ಮಿ ದಂಪತಿಯ ಹೆಣ್ಣು‌ ಮಗು ಸಾವನ್ನಪ್ಪಿದ್ದಾಳೆ. 

ಕಳೆದ 15 ದಿನದಿಂದ ಮಗುವಿಗೆ ತಾಯಿ ಸೆರ್‌ಲ್ಯಾಕ್‌ ತಿನ್ನಿಸುತ್ತಿದ್ದರು. ಎಂದಿನಂತೆ ಬೆಳಗ್ಗೆ ಮಗುವಿಗೆ ತಾಯಿ ಸೆರ್‌ಲ್ಯಾಕ್‌ ತಿನ್ನಿಸುತ್ತಿದ್ದ ವೇಳೆ ಗಂಟಲಿಗೆ ಸಿಲುಕಿತ್ತು. ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

ಮಗುವಿಗೆ ಉಸಿರಾಟದ ಸಮಸ್ಯೆಯುಂಟಾಗಿ ಮೃತಪಟ್ಟಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:
ಭೀಭತ್ಸ ಕೃತ್ಯ! 8 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ
ದೆಹಲಿ: 8 ತಿಂಗಳ ಹೆಣ್ಣು ಮಗುವಿನ ಮೇಲೆ ಸಂಬಂಧಿಯಿಂದಲೇ ಅತ್ಯಾಚಾರ ನಡೆದಿರುವ ಭೀಭತ್ಸ ಕೃತ್ಯ ನಗರದ ಶಾಲಿಮಾರ್ ಬಾಗ್‌ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಮಗುವಿನ ಪೋಷಕರು ಕೂಲಿ ಕೆಲಸಕ್ಕೆ ಹೊರಗಡೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ಆರೋಪಿ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಕೆಲಸ ಮುಗಿಸಿಕೊಂಡು ತಾಯಿ ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ.

ಕೂಡಲೇ ಮಗುವನ್ನು ಸಮೀಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ಪೊಲೀಸರು ವಶಕ್ಕ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಕುಡಿದ ಮತ್ತಿನಲ್ಲಿ ಕೃತ್ಯವೆಸಗಿರುವ ಕುರಿತು ಬಾಯ್ಬಿಟ್ಟಿದ್ದಾನೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಬಿಜೆಪಿ ನಿರ್ಧರಿಸುತ್ತದೆ: ಹಾಲಾಡಿ:
http://bit.ly/2FvC013
►►ಗಾಂಧೀಜಿಯ ಆಶಯ ಈಡೇರಿಸೋಣ: ಕುಂದಾಪುರದಲ್ಲಿ ವೈದೇಹಿ: http://bit.ly/2DOFhb0
►►ಮತೀಯದ್ವೇಷ ಸಂದರ್ಭ ಮಾನವೀಯತೆ: 50 ಸಾವಿರ ನೀಡಿದ ನ್ಯಾಯವಾದಿ: http://bit.ly/2DPOAaH
►►ಅಪಹರಣಕಾರನ ಕಾಲಿಗೆ ಗುಂಡಿಕ್ಕಿ ಬಾಲಕನ ರಕ್ಷಣೆ: http://bit.ly/2ntMHtp
►►ಕಿತ್ತಳೆ ಪಾಸ್‌ಪೋರ್ಟ್: ಹಿಂಜರಿದ ಕೇಂದ್ರ ಸರಕಾರ: http://bit.ly/2DOvQbH
►►ರಾಜೀನಾಮೆ ನೀಡಲು ತೆರಳಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ: http://bit.ly/2DQ2IF1
►►ಪ್ರಕಾಶ್ ಪಡುಕೋಣೆಗೆ 'ಜೀವಮಾನ ಶ್ರೇಷ್ಠ ಸಾಧನೆ' ಪ್ರಶಸ್ತಿ: http://bit.ly/2Fv9soq

Related Tags: 3 Month Old Baby, Death, Cerelac, Magadi, Bangalore, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ