ಅಂಡರ್ 19 ವಿಶ್ವಕಪ್. ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಫೈನಲ್‌ಗೆ ಭಾರತ

ಕರಾವಳಿ ಕರ್ನಾಟಕ ವರದಿ

ನ್ಯೂಜಿಲೆಂಡ್‌:
19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಭರ್ಜರಿ 203 ರನ್‌ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.

273 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತದ ವೇಗಿ ಇಶಾನ್ ಪೊರೆಲ್ ಮಾರಕವಾದರು. ಆರಂಭದ ನಾಲ್ಕು ವಿಕೆಟ್‌ಗಳನ್ನು ಕಿತ್ತ ಇಶಾನ್ ಅವರು ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಇಶಾನ್ 6 ಓವರ್‌ಗಳಲ್ಲಿ 17ರನ್ನಿತ್ತು 4 ವಿಕೆಟ್ ಕಿತ್ತರೆ, ಸ್ಪಿನ್ನರ್ ಶಿವ ಸಿಂಗ್ ಹಾಗೂ ರಿಯಾನ್ ಪರಾಗ್ ತಲಾ 2 ವಿಕೆಟ್ ಪಡೆದರು. ವೇಗಿಗಳಾದ ಶಿವಂ ಮಾವಿ ಹಾಗೂ ಕಮಲೇಶ್ ನಾಗರ್ ಕೋಟಿ ರನ್ ನಿಯಂತ್ರಿಸಿದರು.

ಇದಕ್ಕೂ ಮುನ್ನ ಟಾಸ್‌ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಪ್ರಥ್ವಿ ಶಾ ಪಡೆ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 272 ರನ್‌ ಗಳಿಸಿತು.

ನಾಯಕ ಶಾ ಮತ್ತು ಮನ್‌ಜೋತ್‌ ಕಾಲ್ರಾ ಭದ್ರ ಆರಂಭ ಒದಗಿಸಿಕೊಟ್ಟರು. ಶಾ 41 ಮತ್ತು ಕಾಲ್ರಾ 47 ರನ್‌ಗಳಿಸಿ ಔಟಾದರು.


ಆ ಬಳಿಕ ಬಂದ ಶುಭಂ ಗಿಲ್ಲ್‌ ಭರ್ಜರಿ ಶತಕ ಸಿಡಿಸಿದರು. 102 ರನ್‌ ಗಳಿಸಿದ ಗಿಲ್‌ ಅಜೇಯರಾಗಿ ಉಳಿದರು. ಹಾರ್ವಿಕ್‌ ದೇಸಾಯಿ 20, ಅನುಕೂಲ್‌ ಸುಧಾಕರ್‌ ರಾಯ್‌ 33 ರನ್‌ ಕೊಡುಗೆ ಸಲ್ಲಿಸಿದರು.

ಮೂರು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ಪೃಥ್ವಿ ಶಾ ನಾಯಕತ್ವದಲ್ಲಿ ಇಲ್ಲಿಯವರೆಗೆ ಅತ್ಯುತ್ತಮ ಆಟ ಆಡಿದ್ದು, ಲೀಗ್ ಹಂತದ ಮೂರು ಪಂದ್ಯಗಳು ಮತ್ತು ಬಾಂಗ್ಲಾದೇಶ ವಿರುದ್ಧದ ಕ್ವಾಟರ್ ಫೈನಲ್ ಪಂದ್ಯದಲ್ಲಿಯೂ ಏಕಪಕ್ಷೀಯ ಜಯ ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಗೌರಿಯನ್ನು ನಾವು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ: 'ಗೌರಿ ದಿನ'ದಲ್ಲಿ ಪ್ರಕಾಶ್ ರೈ:
http://bit.ly/2EhavIV
►►ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ: ಅಸೋಡಿನಲ್ಲಿ ಎರಡು ಬೂತ್ ಸಮಿತಿ!: http://bit.ly/2nleCvy
►►ಇದು ನವ ಭಾರತದ ಉದಯಕ್ಕೆ ಕನಸು ಕಾಣುವ ವರ್ಷ: ರಾಷ್ಟ್ರಪತಿ: http://bit.ly/2nnygad
►►ಅಕ್ರಮ ಸ್ಪಿರಿಟ್ ಸಾಗಣೆ: ಲಾರಿ ಚಾಲಕ ವಶಕ್ಕೆ: http://bit.ly/2FnA9LG
►►ತೀರರಕ್ಷಕ ನೌಕೆಯಲ್ಲಿ ವಿರೂಪಗೊಂಡ ರಾಷ್ಟ್ರ ಧ್ವಜ ಹಾರಾಟ: http://bit.ly/2rLYatJ

Related Tags: India vs Pakistan, ICC Under-19 Cricket World Cup 2018, IND Thrash PAK by 203 Runs, Reach Final, Sports News, Cricket News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ