ಗೌರಿಯನ್ನು ನಾವು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ: 'ಗೌರಿ ದಿನ'ದಲ್ಲಿ ಪ್ರಕಾಶ್ ರೈ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಸಮಾಜದ ಸಮಾಜದ ಒಳಿತಿಗಾಗಿ ಧ್ವನಿ ಎತ್ತುವವರು ಸಾವನ್ನಪ್ಪಿದಾಗ ಸಮಾಧಿ ಮಾಡುವುದಿಲ್ಲ. ಅಂತೆಯೇ ಗೌರಿಯನ್ನು ನಾವು ಸಮಾಧಿ ಮಾಡಿಲ್ಲ. ಬದಲಾಗಿ ಬಿತ್ತಿದ್ದೇವೆ. ಅದು ಮತ್ತೆ ಮೊಳಕೆಯೊಡೆದು ಹಲವು ಮರಗಳಾಗಿ ಹಲವು ಧ್ವನಿಗಳಾಗುತ್ತದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ಇಲ್ಲಿ ನೆರೆದಿರುವ ಹಾಗೂ ಎಲ್ಲರೊಳಗೆ ಅಡಗಿರುವ ಗೌರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮಾತು ಆರಂಭಿಸಿದ ರೈ, ಕೆಲವು ಮರಣಗಳೇ ಹಾಗೇ ಸಾಯುವುದಿಲ್ಲ. ಹಲವು ದಲಿತರನ್ನು ಕೊಲೆ ಮಾಡಿದಾಗ ಜಿಗ್ನೇಶ್ ಮೇವಾನಿ ಧ್ವನಿಯಾದರು. ಗೌರಿಯ ಸಾವಿನ ನಂತರ ನಾನು ಧ್ವನಿಯಾದೆ. ಈ ಧ್ವನಿ ಇನ್ನೂ ಹೆಚ್ಚಾಗುತ್ತದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ದುಷ್ಕರ್ಮಿಗಳಿಂದ ಗುಂಡೇಟಿಗೆ ಬಲಿಯಾದ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಜನ್ಮ ದಿನಾಚರಣೆ ಕಾರ್ಯಕ್ರಮ 'ಗೌರಿ ದಿನ'ದಲ್ಲಿ ಅವರು ಮಾತನಾಡಿದರು.

ಗೌರಿ ಆಕ್ಟಿವಿಸ್ಟ್ ಪತ್ರಕರ್ತೆಯಾಗಿದ್ದರು: ಮಟ್ಟು
ಲಂಕೇಶ್ ಗಿಂತಲೂ ಗೌರಿ ಅಪಾರ ಹೆಸರು ಮಾಡಿದ್ದರು. ಗುಬ್ಬಚ್ಚಿಯಂತಹ ಪುಟ್ಟ ಜೀವದಲ್ಲಿ ವಿಶಾಲ ಪ್ರೀತಿ ಇತ್ತು. ಅಲ್ಲದೇ ಆಕ್ಟಿವಿಸ್ಟ್ ಪತ್ರಕರ್ತೆಯಾಗಿದ್ದ ಅವರು ಕಾಂಗ್ರೆಸ್ ವಿರೋಧಿ ಅಲೆಗೂ ಕಾರಣವಾಗಿದ್ದರು ಎಂದು ಹೇಳಿದ್ದಾರೆ. ಇಂದು ಉಣ್ಣುವ ಅನ್ನ ವಿಷವಾಗಿದೆ. ನಮ್ಮ ನೆರಳನ್ನೇ ನಂಬದ ಕಾಲ ಬಂದಿದೆ ಎಂದು ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.

ಸಿಬಿಐ ತನಿಖೆಗಾಗಿ ಹೈಕೋರ್ಟ್ ಮೊರೆ ಹೋಗುತ್ತೇನೆ: ಇಂದ್ರಜಿತ್ ಲಂಕೇಶ್
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಗೌರಿ ಹತ್ಯೆಯಾಗಿ 5 ತಿಂಗಳು ಸಮೀಪಿಸುತ್ತಿದ್ದರೂ ತನಿಖೆಯು ನಿಂತ ನೀರಾಗಿದೆ. ರಾಜಕೀಯವಾಗಿ ಒಂದೇ ಕೋನದಿಂದ ತನಿಖೆಯಾಗುತ್ತಿದೆ ಎಂದು ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮ ಸಲಹೆಗಾರರ ಮೂಲಕ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ಮಾಡಿ ಕೇಂದ್ರ ಸರ್ಕಾರವನ್ನು ಬೈಯುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಶ್ನೆ ಮಾಡೋದನ್ನು ಬಿಟ್ಟು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೌರಿ ದಿನಕ್ಕೆ ಸರ್ಕಾರ ಪ್ರಾಯೋಜಕತ್ವ ನೀಡಿಲ್ಲ: ಕವಿತಾ ಲಂಕೇಶ್
ಗೌರಿ ಲಂಕೇಶ್‍ಗೆ ಜನ್ಮದಿನ ಪ್ರಯುಕ್ತ ಆಚರಿಸಲಾಗಿದ್ದ `ಗೌರಿ ದಿನ' ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಪ್ರಯೋಜಕತ್ವ ನೀಡಿಲ್ಲ ಎಂದು ಗೌರಿ ಸಹೋದರಿ ಕವಿತಾ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮವನ್ನು ಗೌರಿಹಬ್ಬ ಎಂದು ರಾಜ್ಯಾದ್ಯಂತ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಗೌರಿ ಹತ್ಯೆ ಆರೋಪಿಗಳನ್ನು ಬಂಧಿಸದ ಕಾರಣ ನಾವು ಇಂದು ವಿಚಾರ ಸಂಕೀರ್ಣವನ್ನು ಮಾತ್ರ ನಡೆಸುತ್ತಿದ್ದೇವೆ ಎಂದಿದ್ದಾರೆ.

ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಮ್ಮ ಸಹೋದರನ ಚಿಂತನೆ, ಅಭಿಪ್ರಾಯ ಭಿನ್ನವಾಗಿದೆ ಅಷ್ಟೇ. ಆದರೆ ನಾವೆಲ್ಲರೂ ಹತ್ಯೆ ಮಾಡಿದವರ ವಿರುದ್ಧ ಹೋರಾಟ ನಡೆಸಿದ್ದೇವೆ. ನಾನು ಮತ್ತು ನಮ್ಮ ಸಹೋದರ ಇಬ್ಬರೂ ಟ್ರಸ್ಟ್ ನಲ್ಲಿ ಇಲ್ಲ. ಕಾರ್ಯಕ್ರಮಕ್ಕೆ ಖರ್ಚು ಮಾಡಿದ ವಿವರಗಳನ್ನು ಟ್ರಸ್ಟ್ ವತಿಯಿಂದ ಪಡೆಯಬಹುದು. ಮೇವಾನಿ ಹಾಗೂ ಕನ್ಹಯ್ಯಾರನ್ನು ಗೌರಿ ಮಕ್ಕಳಂತೆ ಭಾವಿಸಿದ್ದಳು. ಅದೇ ಪ್ರೀತಿಗಾಗಿ ಅವರು ಬಂದಿದ್ದಾರೆ ಎಂದಿದ್ದಾರೆ.

ಸಿಬಿಐ ಮೇಲೆ ನಂಬಿಕೆ ಇಲ್ಲ. ಎಸ್ಐಟಿ ತನಿಖೆ ತೃಪ್ತಿ ನೀಡಿದೆ
ಕಳೆದ ಹಲವು ವರ್ಷಗಳಲ್ಲಿ ಸಿಬಿಐಗೆ ವಹಿಸಿದ್ದ 14 ಪ್ರಕರಣಣಗಳಲ್ಲಿ ಇದುವರೆಗೂ ಯಾವುದೇ ಫಲಿತಾಂಶ ಲಭಿಸಿಲ್ಲ. ವಿಶೇಷ ತನಿಖಾ ದಳದ ವಿಚಾರಣೆ ಹಂತಿಮ ಹಂತದಲ್ಲಿದ್ದು, ಶೀಘ್ರವೇ ಹಂತಕರನ್ನು ಬಂಧಿಸುವ ವಿಶ್ವಾಸವಿದೆ. ಪ್ರಕರಣವನ್ನು ಮತ್ತೆ ಸಿಬಿಐಗೆ ವಹಿಸುವುದರಿಂದ ವಿಚಾರಣೆ ಮತ್ತೆ ಒಂದು ವರ್ಷ ಹಿಂದುಳಿಯುವ ಸಂಭವವಿದೆ ಎಂದು ಹೇಳಿದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ: ಅಸೋಡಿನಲ್ಲಿ ಎರಡು ಬೂತ್ ಸಮಿತಿ!:
http://bit.ly/2nleCvy
►►ಇದು ನವ ಭಾರತದ ಉದಯಕ್ಕೆ ಕನಸು ಕಾಣುವ ವರ್ಷ: ರಾಷ್ಟ್ರಪತಿ: http://bit.ly/2nnygad
►►ಅಕ್ರಮ ಸ್ಪಿರಿಟ್ ಸಾಗಣೆ: ಲಾರಿ ಚಾಲಕ ವಶಕ್ಕೆ: http://bit.ly/2FnA9LG
►►ತೀರರಕ್ಷಕ ನೌಕೆಯಲ್ಲಿ ವಿರೂಪಗೊಂಡ ರಾಷ್ಟ್ರ ಧ್ವಜ ಹಾರಾಟ: http://bit.ly/2rLYatJ
►►ಗ್ರ್ಯಾಂಡ್ ಫಿನಾಲೆ: ರ‍್ಯಾಪರ್ ಚಂದನ್ ಶೆಟ್ಟಿಗೆ 'ಬಿಗ್ ಬಾಸ್' ಟ್ರೋಫಿ: http://bit.ly/2BzLQwp
►►ಬಶೀರ್ ಹತ್ಯೆಯಾಗಿದ್ದಕ್ಕೆ ನಮಗೇನೂ ಬೇಜಾರಿಲ್ಲ: ವಿಹಿಂಪ ಅಧ್ಯಕ್ಷ ಶೇಣವ: http://bit.ly/2BBve7n
►►ಜ. 30ರಂದು ‘ಸೌಹಾರ್ದತೆಗಾಗಿ ಮಾನವ ಸರಪಳಿ’: ಮುನೀರ್ ಕಾಟಿಪಳ್ಳ: http://bit.ly/2DGO3Ic
►►ಎಚ್‌ಎಮ್‌ಸಿ ಯುನೈಟೆಡ್ ಶಾಂತಿ ಪ್ರಶಸ್ತಿ 2018. ಸಜ್ಜುಗೊಳ್ಳುತ್ತಿದೆ ದುಬೈ: http://bit.ly/2DHCi47
►►ಸುತ್ತೋಲೆ ತಿದ್ದುಪಡಿ: 'ಮುಗ್ಧ ಜನರ' ಮೇಲಿನ ಪ್ರಕರಣ ವಾಪಸ್: http://bit.ly/2DKDdoR
►►ಸಂಸದೆ ಶೋಭಾ ಕರಾಂದ್ಲಾಜೆಯಿಂದ ಜೀವ ಬೆದರಿಕೆ: ಕೆಜೆಪಿ ಸಂಸ್ಥಾಪಕನ ಕಣ್ಣೀರು: http://bit.ly/2rNhSFw

Related Tags: Journalist Gauri Lankesh Murder, Gauri Day, January 29, Bangalore, Prakash Rai, Jignesh Mevani, Kavitha Lankesh, Indrajith Lankesh, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ