ಸುತ್ತೋಲೆ ತಿದ್ದುಪಡಿ: 'ಮುಗ್ಧ ಜನರ' ಮೇಲಿನ ಪ್ರಕರಣ ವಾಪಸ್

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಮುಗ್ಧ ಅಲ್ಪಸಂಖ್ಯಾತರ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆಯಲು ಹೊರಡಿಸಿದ್ದ ಸುತ್ತೋಲೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಎಲ್ಲಾ ಸಮುದಾಯದ ಮುಗ್ಧರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲಾಗುವುದು ಎಂದಿದೆ.

ಈಗಾಗಲೇ ಹೊರಡಿಸಿದ್ದ ಸುತ್ತೋಲೆ ವಾಪಸ್ ಪಡೆದಿರುವ ರಾಜ್ಯ ಸರ್ಕಾರ ಅಲ್ಪಸಂಖ್ಯಾತರು ಎಂಬ ಶಬ್ದ ತೆಗೆದುಹಾಕಿ ಕೇವಲ ಮುಗ್ಧರ ವಿರುದ್ಧದ ಪ್ರಕರಣ ವಾಪಸ್ ಪಡೆಯುವ ಕುರಿತಂತೆ ಪೊಲೀಸ್ ಇಲಾಖೆಯಿಂದ ಅಭಿಪ್ರಾಯ ಕೋರಿ ಸುತ್ತೋಲೆ ಹೊರಡಿಸಿದೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಈ ಹಿಂದೆ ಕಣ್ತಪ್ಪಿನಿಂದಾಗಿ ಹೊರಡಿಸಿದ ಸುತ್ತೋಲೆಯನ್ನು ರಾಜ್ಯ ಸರಕಾರ ವಾಪಾಸ್‌ ಪಡೆಯಲು ನಿರ್ಧರಿಸಿದೆ.

ಪರಿಷ್ಕೃತ ಸುತ್ತೋಲೆಯನ್ನು ಡಿಜಿಪಿ ಹಾಗೂ ಅಭಿಯೋಗ ಇಲಾಖೆಗೆ ಕಳುಹಿಸಲಾಗಿದೆ. ಈ ಹಿಂದೆ 2017 ಡಿಸೆಂಬರ್‌ 22ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿದ್ದ "ಕೋಮು ಗಲಭೆಗಳಲ್ಲಿ ಮತ್ತು ಇತರೆ ಪ್ರಕರಣಗಳಲ್ಲಿ ಮುಗ್ಧ ಅಲ್ಪಸಂಖ್ಯಾತ ಸಮುದಾಯದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ" ಎಂದಿದ್ದ ವಾಕ್ಯವನ್ನು "ಕೋಮು ಗಲಭೆಗಳಲ್ಲಿ ಮತ್ತು ಇತರ ಪ್ರಕರಣಗಳಲ್ಲಿ ಮುಗ್ಧ ಜನರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ" ಎಂದು ಬದಲಾಯಿಸಿ ಹೊಸದಾಗಿ ಶನಿವಾರ ಸುತ್ತೋಲೆ ಹೊರಡಿಸಲಾಗಿದೆ ಎಂದರು.

ರೈತ ಚಳವಳಿ, ವಿದ್ಯಾರ್ಥಿ ಚಳವಳಿ, ಕನ್ನಡ ಹೋರಾಟ ಸಂದರ್ಭದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಾಪಸ್‌ ಪಡೆಯಲು ಸರಕಾರ ಸಿದ್ಧ ಎಂದು ತಿಳಿಸಿದರು.

ಚಳವಳಿಗಳ ಸಂಬಂಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ದಾಖಲೆ ಹಾಗೂ ಅಭಿಪ್ರಾಯ ನೀಡುವಂತೆ ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಸಂಸದೆ ಶೋಭಾ ಕರಾಂದ್ಲಾಜೆಯಿಂದ ಜೀವ ಬೆದರಿಕೆ: ಕೆಜೆಪಿ ಸಂಸ್ಥಾಪಕನ ಕಣ್ಣೀರು:
http://bit.ly/2rNhSFw
►►ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಬಿಡುಗಡೆ: http://bit.ly/2EeDRYF
►►ಬಹಿರಂಗವಾಗಿ ದಾಖಲೆಗಳನ್ನು ಬಿಡುಗಡೆ ಮಾಡಿ: ಶಾಸಕ ಸೈಲ್ ಸವಾಲು: http://bit.ly/2EdL1MF
►►ಕಾಂಗ್ರೆಸ್ ಸರ್ಕಾರ ಕೊಲೆಗಡುಕ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ: ಶೋಭಾ ಆರೋಪ: http://bit.ly/2FnQXlz
►►ನೇರ ಮಾತುಗಳನ್ನು ಒಪ್ಪಿಕೊಳ್ಳದೆ ವಿವಾದ ಸೃಷ್ಟಿಸುತ್ತಾರೆ: ಸಚಿವ ಹೆಗಡೆ ಕಿಡಿ: http://bit.ly/2rJhyaQ
►►ನನ್ನ ಬದುಕಿನ ಎಲ್ಲವನ್ನೂ ಈ ಆತ್ಮಕಥೆಯೇ ಹೇಳುತ್ತದೆ: ಜನಾರ್ದನ ಪೂಜಾರಿ: http://bit.ly/2DGjruu

Related Tags: Minister Ramalinga Reddy, Minorities Case Withdrawal, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ