ಕುವೈಟ್ ಸರಕಾರದಿಂದ ಆಮ್ನೆಸ್ಟಿ ಘೋಷಣೆ: ಭಾರತೀಯರು ನಿರಾಳ

ಕರಾವಳಿ ಕರ್ನಾಟಕ ವರದಿ

ಕುವೈಟ್:
ವೇತನ ಪಾವತಿಯಾಗದ ಕಾರಣಕ್ಕೆ ಕುವೈಟ್‌ನಲ್ಲಿ ಅಕ್ರಮವಾಗಿ ವಾಸಿಸುವ ಪರಿಸ್ಥಿತಿಗೆ ಸಿಲುಕಿದ್ದ ಭಾರತೀಯ ಕಾರ್ಮಿಕರಿಗೆ ಕುವೈಟ್ ಸರಕಾರ ದಂಡ ವಿಧಿಸುವುದಿಲ್ಲ ಎಂದು ಘೋಷಿಸಿದೆ.

ಜನವರಿ 29ರಿಂದ ಫೆಬ್ರವರಿ 22ರ ತನಕ ರಾಜಕೀಯ ಅಪರಾಧಗಳಿಗೆ ಶಿಕ್ಷೆಗೊಳಪಟ್ಟವರಿಗೆ ನೀಡಲಾಗುವ ಕ್ಷಮೆ(ಆಮ್ನೆಸ್ಟಿ)ಯನ್ನು ಸರಕಾರ ಘೋಷಿಸಿದೆ. ಇದರಿಂದಾಗಿ ವೇತನ ಪಾವತಿಯಾಗದೇ, ಊರಿಗೆ ತೆರಳಲೂ ಸಾಧ್ಯವಾಗದೆ ಅತಂತ್ರರಾಗಿ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಭಾರತೀಯ ಕಾರ್ಮಿಕರು ನಿಟ್ಟುಸಿರು ಚೆಲ್ಲಿದ್ದಾರೆ.

ವಿದೇಶಿ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ಕುವೈಟ್ ಭೇಟಿ ಹಿನ್ನೆಲೆಯಲ್ಲಿ ಕುವೈಟ್ ಸರಕಾರ ಆಮ್ನೆಸ್ಟಿ ಘೋಷಿಸಿದೆ.

ಜನರಲ್ ವಿ.ಕೆ.ಸಿಂಗ್ ಅವರು ಖರೀಫಿ ನ್ಯಾಷನಲ್ ಕಂಪೆನಿ ಬಾಕಿ ಇರಿಸಿರುವ ಭಾರತೀಯ ನೌಕರರ ವೇತನದ ಬಗ್ಗೆ ಸರಕಾರದ ಗಮನ ಸೆಳೆದಿದ್ದರು. ನೌಕರರ ಮೇಲಿನ ದಂಡ ಕೈಬಿಡಲು ಕೋರಿದ್ದರು.

ಇದರಿಂದಾಗಿ ಆಮ್ನೆಸ್ಟಿ ಅನ್ವಯ ಕುವೈಟ್‌ನಿಂದ ಭಾರತಕ್ಕೆ ಅಥವಾ ತಮ್ಮ ದೇಶಗಳಿಗೆ ಮರಳುವ ನೌಕರರು ಪುನಃ ಕುವೈಟ್ ದೇಶಕ್ಕೆ ಉದ್ಯೋಗಕ್ಕೆ ಮರಳಲು ತೊಂದರೆ ಇಲ್ಲ. ಕುವೈಟ್ ದೇಶದಲ್ಲಿ ಅವಧಿ ಮೀರಿ ವಾಸವಾಗಿರುವವರಿಗೆ ಎರಡು ಕುವೈಟಿ ದಿನಾರ್ ದಂಡ ವಿಧಿಸಲಾಗುತ್ತದೆ.

ವೇತನ ಕೈಗೆ ಸಿಗದೆ ಕಳೆದ ಕೆಲ ತಿಂಗಳುಗಳಿಂದ ವಾಸಿಸುತ್ತಿರುವ ಬಡಪಾಯಿ ಭಾರತೀಯ ಕಾರ್ಮಿಕರಿಗೆ ಈ ಮೊತ್ತ ಭರಿಸುವ ಆರ್ಥಿಕತೆ ಕೂಡ ಇಲ್ಲದೇ ಕಷ್ಟದಲ್ಲಿದ್ದರು.

ಕಳೆದ ಹತ್ತು ತಿಂಗಳಿಂದ ವೇತನ ಬಾಕಿ ಇರಿಸಿರುವ ಖರೀಫಿ ನ್ಯಾಶನಲ್ ಬಾಕಿ ಇರಿಸಿರುವ ಮೊತ್ತದಲ್ಲಿ ಶೇ. 25ರಿಂದ ಶೇ. 33 ಬಾಕಿ ವೇತನ ನೀಡುವುದಾಗಿ ಹೇಳಿದೆ. ಆದರೆ ಈ ಬಗ್ಗೆ ಇನ್ನೂ ಸಂಸ್ಥೆಯ ದೃಢ ನಿರ್ಧಾರ ಅರಿಯದ ಕಾರಣ ನೌಕರ ವೃಂದ ಪ್ರತಿಕ್ರಿಯಿಸಿಲ್ಲ.

ಕಂಪೆನಿಯು ವೀಸಾ ನವೀಕರಣಕ್ಕೆ ನಿರಾಕರಿಸಿದುದರಿಂದ ಅಕ್ರಮವಾಗಿ ನೌಕರರು ಕುವೈಟ್‌ನಲ್ಲಿ ನೆಲೆಸುವಂತಾಗಿತ್ತು. ಈಗ ಕೆಲವರು ಆಮ್ನೆಸ್ಟಿಯ ಅನ್ವಯ ಭಾರತಕ್ಕೆ ಮರಳಲು ಯೋಚಿಸಿದ್ದಾರೆ.

ಸಚಿವ ವಿ.ಕೆ.ಸಿಂಗ್ ಭೇಟಿಯ ತನಕವೂ ಸಂತ್ರಸ್ತ ನೌಕರರಿಗೆ ಅಮ್ನೆಸ್ಟಿ ನೀಡುವ ಯೋಚನೆ ಕುವೈಟ್ ಮಾಡಿರಲಿಲ್ಲ. ಹಿಂದೆ ಕೂಡ ಇದೇ ರೀತಿ ಆಮ್ನೆಸ್ಟಿ ಘೋಷಿಸಿದಾಗಲೂ ನಿರೀಕ್ಷಿತ ಬೆಳವಣಿಗೆ ಇರಲಿಲ್ಲ ಎಂಬುದು ಈ ಬಗ್ಗೆ ಕುವೈಟ್ ಮೀನಾ ಮೀಷ ಎಣಿಸಲು ಕಾರಣವಾಗಿತ್ತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕೋಮುಪ್ರಚೋದನೆ ಪೋಸ್ಟ್: ರಾಮಸೇನೆ ಕಾರ್ಯಕರ್ತ ಸೆರೆ:
http://bit.ly/2Dwufae
►►ಬಂಟ್ವಾಳ ಚುನಾವಣೆ ಕುರಿತು ವಿವಾದಾತ್ಮಕ ಹೇಳಿಕೆ: ಸುನಿಲ್ ಕುಮಾರ್ ವಿರುದ್ಧ ದೂರು: http://bit.ly/2n7dWKW
►►ಆತ್ಮಹತ್ಯೆ ಭಾಗ್ಯ ಕೊಟ್ಟ ಯಡಿಯೂರಪ್ಪನಂಥ ಸಿಎಂ ಬೇಕಾ: ಡಿವಿಎಸ್ ಎಡವಟ್ಟು: http://bit.ly/2F9lAez
►►ಬಿಜೆಪಿ ಮೈತ್ರಿ ಮುರಿದ ಶಿವಸೇನೆ: 2019ರಲ್ಲಿ ಸ್ವತಂತ್ರ ಸ್ಪರ್ಧೆ: http://bit.ly/2F9d7rs
►►ಮಿಡಿವ ಹೃದಯ ಇರೆ ಮಾತೇಕೆ? ಪ್ರೀತಿಸಿ ಮದುವೆಯಾದರು ಮೂಕ ಹಕ್ಕಿಗಳು: http://bit.ly/2n2Nt1f
►►ಬೇಡವಾದರೆ ವೀಕ್ಷಿಸಬೇಡಿ. 'ಪದ್ಮಾವತ್' ಪ್ರದರ್ಶನಕ್ಕೆ ನಿಷೇಧ ಹೇರುವುದಿಲ್ಲ: ಸುಪ್ರೀಂ ಕೋರ್ಟ್‌: http://bit.ly/2BlnHt6
►►ಈ ಬಾರಿ ಬಂಟ್ವಾಳದಲ್ಲಿ ಅಲ್ಲಾಹ್ ಮತ್ತು ರಾಮನ ಸಮರ: ಸುನೀಲ್ ಕುಮಾರ್: http://bit.ly/2BkQKx1

Related Tags: Kuwait Announces ''Amnesty'', Residency Violators, Karavali Karnataka, Latest News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ