ಕುಡಿದು ತೂರಾಡಿದ ಲೇಡಿ ಪೈಲಟ್: ಸ್ಪೈಸ್ ಜೆಟ್ ಯಾನ ಐದು ತಾಸು ವಿಳಂಬ

ಕರಾವಳಿ ಕರ್ನಾಟಕ ವರದಿ

ಮಂಗಳೂರು
: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ 180 ಮಂದಿ ಪ್ರಯಾಣಿಕರನ್ನು ಹೊತ್ತು ದುಬೈಗೆ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನದ ಮುಖ್ಯ ಮಹಿಳಾ ಪೈಲಟ್ (35ವರ್ಷ)ವಿಪರೀತ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕಳವಳಕಾರಿ ಘಟನೆ ವರದಿಯಾಗಿದೆ. ಇದರ ಪರಿಣಾಮ ಐದು ತಾಸು ತಡವಾಗಿ ವಿಮಾನ ಟೇಕ್ ಆಫ್ ಆಗಿದ್ದರಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

ಮಂಗಳೂರು-ದುಬೈ ವಿಮಾನದಲ್ಲಿದ್ದ ಪ್ರಯಾಣಿಕರು ಮಂಗಳವಾರ ಮಧ್ಯರಾತ್ರಿಯಿಂದ ಬೆಳಗಾಗುವ ತನಕ ನಿಲ್ದಾಣದಲ್ಲೇ ಕುಳಿತು ಕೊಂಡಿದ್ದು, ಐದು ಗಂಟೆಗಳ ಅನಂತರ ಬದಲಿ ಪೈಲಟ್ ವ್ಯವಸ್ಥೆಯೊಂದಿಗೆ ವಿಮಾನ ಗಗನಕ್ಕೆ ಹಾರಿದೆ.

ಪ್ರಯಾಣಿಕರು ಬೋರ್ಡಿಂಗ್ ಆಗುವುದಕ್ಕೂ ಎರಡು ತಾಸು ಮೊದಲು ಈ ವಿಮಾನ ಚಾಲನೆ ಮಾಡಬೇಕಿದ್ದ ಟರ್ಕಿ ದೇಶದ ಮುಖ್ಯ ಮಹಿಳಾ ಪೈಲಟ್ ಅವರನ್ನು ನಿಯಮಾನುಸಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಆಗ ಅವರು ವಿಪರೀತ ಮದ್ಯಸೇವಿಸಿರುವ ಸಂಗತಿ ಬಯಲಾಗಿದೆ. ತಕ್ಷಣ ವಿಮಾನ ಯಾನವನ್ನು ರದ್ದುಗೊಳಿಸಿದ್ದು, ಸಂಭಾವ್ಯ ದುರಂತ ತಪ್ಪಿದೆ.

ತಾಂತ್ರಿಕ ದೋಷವಿರುವುದರಿಂದ ವಿಮಾನ ಹಾರಾಟ ವಿಳಂಬವಾಗಿರುವುದಾಗಿ ಅಧಿಕೃತ ಘೋಷಣೆ ಮಾಡಲಾಗಿತ್ತು.

ಈ ವಿಮಾನದ ಬಹುತೇಕ ಸಿಬಂದಿ ಟರ್ಕಿ ದೇಶದವರೇ ಆಗಿದ್ದರೂ ಪೈಲಟ್ ಮದ್ಯಸೇವನೆ ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದ ಕೂಡಲೇ ವಿಮಾನ ಯಾನ ರದ್ದುಗೊಳಿಸಿದ್ದರಿಂದ ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಮಂಗಳೂರು-ದುಬೈ ಸ್ಪೈಸ್ ವಿಮಾನ ಒಂದು ವರ್ಷದಿಂದ ಮಂಗಳೂರಿನಿಂದ ಹಾರಾಟ ನಡೆಸುತ್ತಿದೆ. ವಿಮಾನವು ಟರ್ಕಿ ದೇಶದ ಕಾರ್ಡೊಲ್ ಸಂಸ್ಥೆಯದ್ದಾಗಿದ್ದು, ಸ್ಪೈಸ್ ಜೆಟ್ ಕಂಪೆನಿಯೊಂದಿಗೆ ಒಪ್ಪಂದದ ಅನ್ವಯ ಭಾರತದಲ್ಲಿ ವಿಮಾನ ಹಾರಾಟ ನಡೆಸುತ್ತಿದೆ.
 

ಇಂದು ಹೆಚ್ಚು ಓದಿದ ಸುದ್ದಿ
►►ಹಿರಿಯ ನಟ, ನಿರ್ದೇಶಕ ಕೊಟೇಶ್ವರದ ಕಾಶಿನಾಥ್ ಇನ್ನಿಲ್ಲ:
http://bit.ly/2mLkNJh
►►ಸರ್ವಜ್ಞ ಪೀಠಾಹೋರಣ ಮಾಡಿದ ವಿದ್ಯಾಧೀಶ ಸ್ವಾಮೀಜಿ: ಪಲಿಮಾರು ಪರ್ಯಾಯ ಆರಂಭ
http://bit.ly/2DpL1uT
►►ತಾಯಿಯ ಸಾವಿನ ಸುದ್ದಿ: ಮಗ ಆತ್ಮಹತ್ಯೆ: http://bit.ly/2EK6dsw
►►ನಾನೆಲ್ಲಿಗೆ ಹೋದರೂ ಶುದ್ಧಮಾಡುತ್ತೀರಾ? ಪ್ರಕಾಶ್ ರೈ ಲೇವಡಿ: http://bit.ly/2mJl9AS
►►ಬೈಕ್‌ಗೆ ಬೆಂಕಿ ಪ್ರಕರಣ. ಬಂಧಿತ ಆರೋಪಿ ಅಮಾಯಕನೆಂದು ಬಿಜೆಪಿ ವಾದ: http://bit.ly/2mCzEp2
►►ಹಜ್ ಯಾತ್ರೆ ಸಹಾಯಧನ ರದ್ದು: ಮುಕ್ತಾರ್ ಅಬ್ಬಾಸ್ ನಖ್ವಿ: http://bit.ly/2DjEnX3
►►ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಸಂಚು: ತೊಗಾಡಿಯಾ ಆರೋಪ: http://bit.ly/2B4o9fr
►►ಇವ ‘ನಮ್ಮವ’, ‘ಮೊಹಮ್ಮದ್’ ಎಂದು ಗುರುತಿಸಿಕೊಂಡಿದ್ದ ದೀಪಕ್: http://bit.ly/2EKHd4w
►►ಅಪಘಾತದ ಸ್ಥಳಕ್ಕೆ ನೆರವಿಗೆ ಧಾವಿಸಿದ್ದ ಕಾಲೇಜು ವಿದ್ಯಾರ್ಥಿಯೇ ಅಪಘಾತಕ್ಕೆ ಬಲಿ: http://bit.ly/2D8LFtu
►►ಬೈಂದೂರು: ಬಸ್ ಅಪಘಾತಕ್ಕೆ ಫಾದರ್ ಅಬ್ರಹಾಂ ಬಲಿ: http://bit.ly/2DhSBsj
►►ಪ್ರಕಾಶ್ ರೈ ಮಾತಾಡಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದ ಬಿಜೆಪಿ: http://bit.ly/2EJPy8x
►►‘ಅಚ್ಛೇ ದಿನ್’: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: http://bit.ly/2DChax1

Related Tags: Mangaluru, Dubai , Turkish pilot, Drunken pilot, SpiceJet, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ