ತಾಯಿಯ ಸಾವಿನ ಸುದ್ದಿ: ಮಗ ಆತ್ಮಹತ್ಯೆ
ಎರಡೂವರೆ ಗಂಟೆಗಳ ಕಾಲದ ವಿಡಿಯೋ ಮಾಡಿ ಅದರಲ್ಲಿ ತನ್ನ ಸಾವಿಗೆ ಕಾರಣ ತಿಳಿಸಿ, ನೇಣು ಹಾಕಿಕೊಂಡು ಆತ್ಮಹತ್ಮೆಗೈದ ಯುವಕ.

ಕರಾವಳಿ ಕರ್ನಾಟಕ ವರದಿ

ಮೈಸೂರು:
ತಾಯಿ ಸಾವಿನ ಸುದ್ದಿ ಕೇಳಿದೊಡನೆ ತೀವ್ರವಾಗಿ ಖಿನ್ನನಾದ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಖೇದಕರ ಘಟನೆ ತಾಲ್ಲೂಕಿನ ವಾಜಮಂಗಲದಲ್ಲಿ ವರದಿಯಾಗಿದೆ. ಸತೀಶ್ (29) ಆತ್ಮಹತ್ಯೆ ಮಾಡಿಕೊಂಡವರು.

ಸತೀಶ್ ಅವರ ತಾಯಿ ರತ್ನಮ್ಮ (45) ಅನಾರೋಗ್ಯದಿಂದ ಸೋಮವಾರ ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸುದ್ದಿ ಕೇಳಿದೊಡನೆ ದು:ಖಿತನಾದ ಸತೀಶ್ ಅವರು ಎರಡೂವರೆ ಗಂಟೆಗಳ ಕಾಲದ ವಿಡಿಯೋ ಮಾಡಿ ಅದರಲ್ಲಿ ತನ್ನ ಸಾವಿಗೆ ಕಾರಣ ತಿಳಿಸಿ ನೇಣು ಹಾಕಿಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಸತೀಶ್ ಅವರ ತಂದೆ ಸಹ ಮೃತಪಟ್ಟಿದ್ದರು.

ಸತೀಶ್ ಅವರ ವಿಡಿಯೊದಲ್ಲಿ….
ಎಲ್ಲಾ ನನ್ನ ಸ್ನೇಹಿತರಿಗೆ ಕಡೆಯ ನಮಸ್ಕಾರಗಳು..... ನನ್ನ ತಾಯಿ ತೀರಿಕೊಂಡಿದ್ದಾರೆ ಅದಕ್ಕೋಸ್ಕರ ನಾನು ತಾಯಿ ಜೊತೆ ಹೋಗಬೇಕು ಎಂದು ತೀರ್ಮಾನಿಸಿದ್ದೇನೆ. ಏನಕ್ಕೆ ನಾನು ಈ ವಿಡಿಯೋ ಮಾಡ್ತೀದ್ದೀನಿ ಅಂದರೆ ನನ್ನ ಸ್ನೇಹಿತರು ನನ್ನ ಮೇಲೆ ಇಟ್ಟಿರೋ ಪ್ರೀತಿಯಿಂದ.. ನಿಮ್ಮೆಲ್ಲರಿಗೂ ನಾನು ಮೋಸ ಮಾಡಿ ಹೋಗುತ್ತಿದ್ದೇನೆ. ನಾನು ನನ್ನ ತಾಯಿ ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ. ನನ್ನ ಪ್ರೀತಿಸೊ ಎಲ್ಲರಿಗೂ ಕಡೆಯ ನಮಸ್ಕಾರಗಳು.

ನನ್ನ ಪ್ರೀತಿಯ ಕುಮಾರಣ್ಣನಿಗೆ ನಿಮ್ಮ ಸತೀಶನ ಕಡೆಯ ನಮಸ್ಕಾರ. ವಿನು, ಜೀತು, ಗಿರೀಶ್, ವಿನೋದ್ ಆಲನಹಳ್ಳಿ ಯೋಗೇಶ್ಗೆ ಇನ್ನಿತರ ಎಲ್ಲಾ ಸ್ನೇಹಿತರಿಗೆ ನಿಮ್ಮ ಸ್ನೇಹಿತನ ಕಡೆಯ ನಮಸ್ಕಾರ. ನಮ್ಮ ತಾಯಿ ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತಿದ್ದೆ. ಏನಕ್ಕೆ ಈ ವಿಡಿಯೋ ಮಾಡ್ತಿದ್ದೀನಿ ಅಂದರೆ ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ.

ಅದು ಏನು ಅಂತಾ ಬಾಯಿ ಬಿಟ್ಟು ಹೇಳೋಕೆ ಆಗುತ್ತಿಲ್ಲ ಕ್ಷಮಿಸಿ. ಎಲ್ಲಾ ನನ್ನ ವಾಜಮಂಗಲದ ಜನತೆಗೆ ನನ್ನ ಕಡೆ ಸಮಸ್ಕಾರ ಎಂಬ ಮಾತುಗಳು ವಿಡಿಯೋದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿ
►►ನಾನೆಲ್ಲಿಗೆ ಹೋದರೂ ಶುದ್ಧಮಾಡುತ್ತೀರಾ? ಪ್ರಕಾಶ್ ರೈ ಲೇವಡಿ:
http://bit.ly/2mJl9AS
►►ಬೈಕ್‌ಗೆ ಬೆಂಕಿ ಪ್ರಕರಣ. ಬಂಧಿತ ಆರೋಪಿ ಅಮಾಯಕನೆಂದು ಬಿಜೆಪಿ ವಾದ: http://bit.ly/2mCzEp2
►►ಹಜ್ ಯಾತ್ರೆ ಸಹಾಯಧನ ರದ್ದು: ಮುಕ್ತಾರ್ ಅಬ್ಬಾಸ್ ನಖ್ವಿ: http://bit.ly/2DjEnX3
►►ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಸಂಚು: ತೊಗಾಡಿಯಾ ಆರೋಪ: http://bit.ly/2B4o9fr
►►ಇವ ‘ನಮ್ಮವ’, ‘ಮೊಹಮ್ಮದ್’ ಎಂದು ಗುರುತಿಸಿಕೊಂಡಿದ್ದ ದೀಪಕ್: http://bit.ly/2EKHd4w
►►ಅಪಘಾತದ ಸ್ಥಳಕ್ಕೆ ನೆರವಿಗೆ ಧಾವಿಸಿದ್ದ ಕಾಲೇಜು ವಿದ್ಯಾರ್ಥಿಯೇ ಅಪಘಾತಕ್ಕೆ ಬಲಿ: http://bit.ly/2D8LFtu
►►ಬೈಂದೂರು: ಬಸ್ ಅಪಘಾತಕ್ಕೆ ಫಾದರ್ ಅಬ್ರಹಾಂ ಬಲಿ: http://bit.ly/2DhSBsj
►►ಪ್ರಕಾಶ್ ರೈ ಮಾತಾಡಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದ ಬಿಜೆಪಿ: http://bit.ly/2EJPy8x
►►‘ಅಚ್ಛೇ ದಿನ್’: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: http://bit.ly/2DChax1
►►ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾದ ತೊಗಾಡಿಯಾ ಆಸ್ಪತ್ರೆಯಲ್ಲಿ ಪತ್ತೆ: http://bit.ly/2ram81E

Related Tags: Son Commits Suicide, Mother Death, Satish Mysore, Kannada News, Karnataka News, Latest Kannada News, ತಾಯಿಯ ಸಾವಿನ ಸುದ್ದಿ, ಮಗ ಆತ್ಮಹತ್ಯೆ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ