ನಾನೆಲ್ಲಿಗೆ ಹೋದರೂ ಶುದ್ಧಮಾಡುತ್ತೀರಾ? ಪ್ರಕಾಶ್ ರೈ ಲೇವಡಿ

ಕರಾವಳಿ ಕರ್ನಾಟಕ ವರದಿ

ಕಾರವಾರ:
BJP workers cleaning and purifying the stage ..from where I spoke in Sirsi town ...by sprinkling cow urine (divine gomoothra)......will you continue this cleaning and purification service where ever I go..... #justasking

ನಾನು ಶಿರಸಿ ನಗರದಲ್ಲಿ ಮಾತಾಡಿದ ಸ್ಥಳದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ದನದ ಮೂತ್ರ(ದೈವಿಕ ಗೋಮೂತ್ರ) ಸಿಂಪಡಿಸಿ ಸ್ವಚ್ಛಗೊಳಿಸಿ ಶುದ್ಧೀಕರಿಸುತ್ತಿದ್ದಾರೆ. ನಾನು ಎಲ್ಲಿಗೇ ಹೋದರೂ ಈ ಶುದ್ಧೀಕರಣ ಮತ್ತು ಸ್ವಚ್ಛತೆ ಸೇವೆಯನ್ನು ನೀವು ಮುಂದುವರಿಸುವಿರಾ ಎಂದು ನಟ ಪ್ರಕಾಶ್ ರೈ ಟ್ವಿಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

‘ಪ್ರೀತಿ ಪದಗಳ ಪಯಣ’ಶಿರಸಿಯ ರಾಘವೇಂದ್ರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಕಾರ್ಯಕ್ರಮ ಉದ್ಘಾಟಿಸಿದ್ದ ಬಹುಭಾಷಾ ನಟ ಪ್ರಕಾಶ್ ರೈ ಅವರು ಮಾತನಾಡಿದ್ದ ವೇದಿಕೆ ಹಾಗೂ ಮಠದ ಆವರಣವನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸೋಮವಾರ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದರು.

ಬಿಜೆಪಿಯವರು ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ಗೊಳಿಸಿರುವುದನ್ನು ಟ್ವೀಟ್ ಮೂಲಕ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:
ಪ್ರಕಾಶ್ ರೈ ಮಾತಾಡಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದ ಬಿಜೆಪಿ
ಕಾರವಾರ: ಬಹುಭಾಷಾ ನಟ ಪ್ರಕಾಶ್ ರೈ ಅವರು ಶನಿವಾರ ಶಿರಸಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ ಘಟನೆ ವರದಿಯಾಗಿದೆ.

‘ಪ್ರೀತಿ ಪದಗಳ ಪಯಣ’ ರಾಘವೇಂದ್ರ ಮಠದಲ್ಲಿ ಶನಿವಾರ ಆಯೋಜಿಸಿದ್ದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಕಾರ್ಯಕ್ರಮ ಉದ್ಘಾಟಿಸಿದ್ದ ಪ್ರಕಾಶ್ ರೈ, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆವರನ್ನು ಟೀಕಿಸಿದ್ದರು.


ಪ್ರಕಾಶ್ ರೈ ಅವರನ್ನು ಸಮಾಜ ಕ್ಷಮಿಸದು. ಆದ್ದರಿಂದ ಕಾರ್ಯಕ್ರಮ ನಡೆದ ಧಾರ್ಮಿಕ ಕ್ಷೇತ್ರವನ್ನು ಶುದ್ಧಗೊಳಿಸಿದ್ದೇವೆ ಎಂದು ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ ಹೇಳಿದ್ದಾರೆ.

ಗೋಮಾಂಸ ತಿನ್ನುವ ಹಾಗೂ ಹಿಂದೂ ದೇವತೆಗಳನ್ನು ಅವಮಾನಿಸುವ ವ್ಯಕ್ತಿಗಳ ಭೇಟಿಯಿಂದ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಸೋಗಲಾಡಿ ಬುದ್ಧಿಜೀವಿಗಳು, ಸ್ವಯಂ ಘೋಷಿತ ಬುದ್ಧಿಜೀವಿಗಳು, ಎಡಬಿಡಂಗಿಗಳು ಕಾರ್ಯಕ್ರಮ ಮಾಡಿದ್ದರಿಂದ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾರೆ. ಆದ್ದರಿಂದ ಶುದ್ಧೀಕರಣ ಕಾರ್ಯ ಮಾಡಲಾಗಿದೆ ಎಂದು ಮರಾಠೆ ಹೇಳಿದ್ದಾರೆ.

ಗಣಪತಿ ನಾಯ್ಕ, ನಂದನ ಸಾಗರ, ರೇಖಾ ಹೆಗಡೆ, ವೀಣಾ ಭಟ್ಟ, ಸುರೇಶ ಶೆಟ್ಟಿ, ರವೀಶ ಹೆಗಡೆ, ಸುದರ್ಶನ ವೈದ್ಯ ಮುಂತಾದವರೊಂದಿಗೆ ಅವರು ಮಠದ ಆವರಣದಲ್ಲಿ ಸೋಮವಾರ ಗೋಮೂತ್ರ ಸಿಂಪಡಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿ
►►ಬೈಕ್‌ಗೆ ಬೆಂಕಿ ಪ್ರಕರಣ. ಬಂಧಿತ ಆರೋಪಿ ಅಮಾಯಕನೆಂದು ಬಿಜೆಪಿ ವಾದ:
http://bit.ly/2mCzEp2
►►ಹಜ್ ಯಾತ್ರೆ ಸಹಾಯಧನ ರದ್ದು: ಮುಕ್ತಾರ್ ಅಬ್ಬಾಸ್ ನಖ್ವಿ: http://bit.ly/2DjEnX3
►►ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಸಂಚು: ತೊಗಾಡಿಯಾ ಆರೋಪ: http://bit.ly/2B4o9fr
►►ಇವ ‘ನಮ್ಮವ’, ‘ಮೊಹಮ್ಮದ್’ ಎಂದು ಗುರುತಿಸಿಕೊಂಡಿದ್ದ ದೀಪಕ್: http://bit.ly/2EKHd4w
►►ಅಪಘಾತದ ಸ್ಥಳಕ್ಕೆ ನೆರವಿಗೆ ಧಾವಿಸಿದ್ದ ಕಾಲೇಜು ವಿದ್ಯಾರ್ಥಿಯೇ ಅಪಘಾತಕ್ಕೆ ಬಲಿ: http://bit.ly/2D8LFtu
►►ಬೈಂದೂರು: ಬಸ್ ಅಪಘಾತಕ್ಕೆ ಫಾದರ್ ಅಬ್ರಹಾಂ ಬಲಿ: http://bit.ly/2DhSBsj
►►ಪ್ರಕಾಶ್ ರೈ ಮಾತಾಡಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದ ಬಿಜೆಪಿ: http://bit.ly/2EJPy8x
►►‘ಅಚ್ಛೇ ದಿನ್’: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: http://bit.ly/2DChax1
►►ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾದ ತೊಗಾಡಿಯಾ ಆಸ್ಪತ್ರೆಯಲ್ಲಿ ಪತ್ತೆ: http://bit.ly/2ram81E

Related Tags: Prakash Rai, Gomoothra, Just Asking, Bjp, Cow Urine, Kannada News, Karnataka News, Coastal Karnataka News, Karavali News, Karavali Karnataka, Latest Kannada, ಪ್ರಕಾಶ್ ರೈ, ಬಿಜೆಪಿ, ಗೋಮೂತ್ರ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ