ಇವ ‘ನಮ್ಮವ’, ‘ಮೊಹಮ್ಮದ್’ ಎಂದು ಗುರುತಿಸಿಕೊಂಡಿದ್ದ ದೀಪಕ್

ಕರಾವಳಿ ಕರ್ನಾಟಕ ವರದಿ

ಮಂಗಳೂರು:
"ಇವನ್ಯಾರವ ಇವನ್ಯಾರವ ಎಂದೆನಿಸಿದಿರಯ್ಯ ಇವ ನಮ್ಮವ, ಇವ ನಮ್ಮವ, ನಮ್ಮ ಮನೆ ಮಗನೇಂದೇನಿಸಯ್ಯ ಕೂಡಲ ಸಂಗಮದೇವಯ್ಯ" ಎಂಬ ಬಸವಣ್ಣನವರ ವಚನ ನೆನಪಿಸುವಂತಿದೆ ಕಾಟಿಪಳ್ಳದಲ್ಲಿ ಕೊಲೆಯಾದ ದೀಪಕ್ ರಾವ್ ಅವರು ಬದುಕಿದ ಪರಿ ಎಂದರೆ ಅತಿಶಯೋಕ್ತಿಯಲ್ಲ.

ದೀಪಕ್ ಅವರು ಬ್ಯಾರಿ ಭಾಷೆಯನ್ನು ಬ್ಯಾರಿ ಮುಸ್ಲಿಮರಂತೆಯೇ ಮಾತನಾಡುತ್ತಿದ್ದುದರಿಂದ ಅವರಿಗೆ ಸ್ಥಳೀಯ ಮುಸ್ಲಿಮರು ‘ಮೊಹ್ಮದ್’ ಎಂಬ ಹೆಸರಿನಿಂದ ಗುರುತಿಸುತ್ತಿದ್ದರಲ್ಲದೇ, ಈ ಹುಡುಗ ‘ನಮ್ಮವ’ ಎಂಬ ಆತ್ಮೀಯತೆ ಹೊಂದಿದ್ದರು ಎಂಬ ಅಪರೂಪದ ಸಂಗತಿ ವರದಿಯಾಗಿದೆ.

ಅಬ್ದುಲ್ ಮಜೀದ್ ಎಂಬವರ ಮೊಬೈಲ್ ಸಿಮ್ ಕಾರ್ಡ್ ಮತ್ತು ಕರೆನ್ಸಿ ವಿತರಣಾ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಬಜರಂಗ ದಳದ ಮೂಲಕ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರೂ ಮುಸ್ಲಿಮರೊಂದಿಗಿನ ಆತ್ಮೀಯತೆಗೆ ಸ್ಥಳೀಯವಾಗಿ ಯಾವುದೇ ತೊಂದರೆ ಇರಲಿಲ್ಲ.

ಮಜೀದ್ ಅವರ ವ್ಯವಹಾರ ಹೆಚ್ಚಾಗಿ ಮುಸ್ಲಿಮರ ಅಂಗಡಿಗಳೊಂದಿಗೆ ಇತ್ತು. ಈ ಮುಸ್ಲಿಮ್ ಅಂಗಡಿಯವರು ದೀಪಕ್ ಅವರು ತಮ್ಮಂತೆಯೇ ಬ್ಯಾರಿ ಭಾಷೆಯನ್ನು ಮಾತನಾಡುತ್ತಿದ್ದರಿಂದ ಅವರು ಮುಸ್ಲಿಮ್ ಇರಬೇಕೇಂದೇ ತಿಳಿದಿದ್ದರು. ಹೆಸರು ಹೇಳಿದ ಮೇಲೆಯೇ ಅವರಿಗೆ ದೀಪಕ್ ಹಿಂದೂ ಎಂಬುದು ತಿಳಿದು ಅಚ್ಚರಿ ಪಡುತ್ತಿದ್ದರು. ಅಬ್ದುಲ್ ಮಜಿದ್ ಅವರು ದೀಪಕ್ ಬಳಿ ವ್ಯವಹಾರ ಮಾಡಿ ಎಂದರೆ ಯಾರು ದೀಪಕ್? ಇಲ್ಲಿ ‘ನಮ್ಮವ’ ಬಂದಿದ್ದಾನಲ್ಲ ಎಂದು ಅಂಗಡಿಯವರು ಹೇಳುತ್ತಿದ್ದರು. ಆಗ ಆತ ‘ನಮ್ಮವನೇ’, ನಮ್ಮ ದೀಪಕ್’ ಎಂದು ಮಜೀದ್ ಅವರು ಹೇಳಿದಾಗಲೇ ಅವರಿಗೆ ದೀಪಕ್ ಮುಸ್ಲಿಂ ಅಲ್ಲ ಎಂದು ಗೊತ್ತಾಗುತ್ತಿತ್ತು.

ದೀಪಕ್ ಬಜರಂಗ ದಳದೊಂದಿಗೆ ಗುರುತಿಸಿಕೊಂಡಿದ್ದರೂ ಕಟ್ಟರ್ ಕೋಮುವಾದಿಯಂತೆ ಎಂದೂ ನಡೆದುಕೊಳ್ಳುತ್ತಿರಲಿಲ್ಲ. ಮಾಲಕ ಅಬ್ದುಲ್ ಮಜೀದ್ ಅವರ ತಂದೆಯ ಶುಕ್ರವಾರ ಮಸೀದಿಗೆ ನಮಾಜ್ ಗೆಂದು ನಡೆದು ಹೊರಟರೆ ದೀಪಕ್ ಅವರನ್ನು ತನ್ನ ಬೈಕ್ ನಲ್ಲಿ ಮಸೀದಿ ಬಳಿ ಬಿಡುತ್ತಿದ್ದರು.

ಮಜೀದ್ ಅವರಿಗೆ ದೀಪಕ್ ಮೇಲೆ ಮತ್ತು ದೀಪಕ್ ಅವರಿಗೆ ಮಜಿದರ ಮೇಲೆ ಎಷ್ಟು ವಿಶ್ವಾಸ ಇತ್ತೆಂದರೆ ವ್ಯವಹಾರ ತೊಂದರೆಗೆ ಸಿಲುಕಿದಾಗ ತನ್ನ ಅಂಗಡಿಯಲ್ಲಿದ್ದ ಮುಸ್ಲಿಮ್ ಯುವಕನಿಗೆ ಬೇರೆ ಉದ್ಯೋಗ ನೋಡಿಕೊಳ್ಳುವಂತೆ ತಿಳಿಸಿದ್ದ ಮಜೀದ್ ಅವರು ದೀಪಕ್ ಅವರನ್ನು ಮಾತ್ರ ಉದ್ಯೋಗದಿಂದ ತೆಗೆದಿರಲಿಲ್ಲ. ಮಜಿದ್ ಅವರಿಗೆ ವ್ಯವಹಾರಕ್ಕೆ ಹಣ ಹೊಂದಿಸಲು ಕಷ್ಟವಾದಾಗ ಬೇರೆಯವರಿಂದ ಹಣ ಹೊಂದಿಸುತ್ತಿದ್ದ ದೀಪಕ್ ಆಮೇಲೆ ಅದನ್ನು ಅವರಿಂದ ಪಡೆಯುತ್ತಿದ್ದರು. ತಿಂಗಳಿಗೆ ಹನ್ನೆರಡು ಸಾವಿರ ಸಂಬಳ ಪಡೆಯುತ್ತಿದ್ದ ದೀಪಕ್ ಅವರು ಮಾಲಕರು ಕಷ್ಟದಲ್ಲಿದ್ದಾರೆ ಎಂದು ಅರಿವಾದಾಗ ನಿಧಾನವಾಗಿ ಸಂಬಳ ನೀಡಲು ಹೇಳುತ್ತಿದ್ದರಂತೆ.

ಇತ್ತೀಚೆಗೆ ಮಜೀದ್ ಅವರ ವ್ಯವಹಾರ ಮೊದಲಿನಂತೆ ಸಾಗದಿದ್ದಾಗ, ಬೇರೆ ವ್ಯವಹಾರ ಶುರು ಮಾಡುವಂತೆಯೂ ದೀಪಕ್ ಪ್ರೀತಿಯಿಂದ ಒತ್ತಾಯಿಸುತ್ತಿದ್ದರು ಆದರೆ, ಮಜೀದ್ ಅವರ ಕೆಲಸ ಬಿಟ್ಟು ಹೋಗುವ ಇರಾದೆಯೇ ಅವರಲ್ಲಿರಲಿಲ್ಲ.

ಸಂಬಂಧಿತ ಸುದ್ದಿಗಳ ಲಿಂಕ್ ಇಲ್ಲಿದೆ
►►ಬಶೀರ್ ಕೊಲೆ ಪ್ರಕರಣ. ಮತ್ತಿಬ್ಬರ ಬಂಧನ. ಬಂಧಿತರ ಸಂಖ್ಯೆ ಆರಕ್ಕೆ:
http://bit.ly/2EKIhFp
►►ಬಶೀರ್ ಹತ್ಯೆ: ಮಾರಕಾಸ್ತೃಗಳಿಗಾಗಿ ನೇತ್ರಾವತಿ ನದಿಯಲ್ಲಿ ಶೋಧ: http://bit.ly/2CZlQ3d
►►ಹಿಂಜಾವೇ ನಾಯಕನ ಮೇಲೆ ಹಲ್ಲೆಯ ಕಟ್ಟುಕತೆ ಬಯಲು ಮಾಡಿದ ಪೊಲೀಸರು: http://bit.ly/2AJPfYV
►►ಹಲ್ಲೆ ಯತ್ನ: ಹಿಂಜಾವೇ ನಾಯಕನ ದೂರಿನ ಕುರಿತು ಪೊಲೀಸರಿಗೆ ಸಂಶಯ: http://bit.ly/2CHiMV9
►►ದೀಪಕ್, ಬಶೀರ್ ಮನೆಗೆ ತೆರಳಿ ಸಾಂತ್ವನ ಹೇಳಿದ ಸಿದ್ದರಾಮಯ್ಯ: http://bit.ly/2CQ2YDD
►►ಬಜರಂಗಿಗಳಿಂದ ಪ್ರತೀಕಾರದ ಹಲ್ಲೆ. ಕೊನೆಗೂ ಬದುಕಲಿಲ್ಲ ಅಮಾಯಕ ಬಶೀರ್: http://bit.ly/2D1z3VR
►►ದೀಪಕ್ ಕೊಲೆಗೆ ಪ್ರತೀಕಾರಕ್ಕಾಗಿ ಬಶೀರ್ ಮೇಲೆ ಹಲ್ಲೆ: ನಾಲ್ವರ ಬಂಧನ: http://bit.ly/2qAP7LQ
►►ಅಂತಃಕರಣಕ್ಕೆ ಧರ್ಮವಿಲ್ಲ: ದೀಪಕ್ ತಾಯಿಯ ಜೊತೆ ಕಣ್ಣೀರಾದ ಮಜೀದ್ ಪತ್ನಿ. ಫೋಟೊ ವೈರಲ್: http://bit.ly/2m5nypg
►►ಸಾವು ಬದುಕಿನ ನಡುವೆ ಬಷೀರ್ ಹೋರಾಟ: ಚಿಕಿತ್ಸೆಗೆ ಸರ್ಕಾರದ ನೆರವು: http://bit.ly/2m4mjqg
►►ಪಿಎಫ್ಐ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ: ಸುಬ್ರಹ್ಮಣ್ಯ ಹೊಳ್ಳ ಆರೋಪ: http://bit.ly/2Cuw9rE
►►ಪಿಎಫ್ಐ ನಿಷೇಧಕ್ಕೆ ಆಗ್ರಹಿಸಿ ಸಂಘಪರಿವಾರದಿಂದ ರಾಸ್ತಾ ರೋಕೊ: http://bit.ly/2lWY6B6
►►ಕಾರ್ಕಳ: ಮಾರಕಾಸ್ತ್ರಗಳಿಂದ ಹಲ್ಲೆಗೈದ ಬಜರಂಗಿ ಪಡೆ: http://bit.ly/2CwdtI1
►►ಕಿಲ್ಲರ್‌ ಕಾಂಗ್ರೆಸ್‌: ಟ್ವಿಟರ್‌ನಲ್ಲಿ ಸಚಿವ ಹೆಗಡೆ ಕಿಡಿ: http://bit.ly/2AuTO9k
►►ವಿದೇಶಕ್ಕೆ ಹೋಗಿದ್ದರೆ ಬದುಕಿರುತ್ತಿದ್ದ. ನಾನೇ ಬೇಡ ಅಂದಿದ್ದೆ: ದೀಪಕ್ ತಾಯಿ: http://bit.ly/2lSvQzG
►►ಪಿಎಫ್ಐ ಜೊತೆ ಬಿಜೆಪಿಗೆ ನಿಕಟ ಸಂಪರ್ಕವಿದೆ: ಗೃಹ ಸಚಿವ ತಿರುಗೇಟು: http://bit.ly/2lUABtd
►►ದೀಪಕ್ ಕೊಲೆ: ಸಿದ್ದರಾಮಯ್ಯ ವಿರುದ್ದ ಕಲ್ಲಡ್ಕ ಪ್ರಭಾಕರ ಭಟ್ ಕಿಡಿ: http://bit.ly/2lTWOXF
►►ಕಾಟಿಪಳ್ಳ ಹಿಂದೂ ರುದ್ರಭೂಮಿಯಲ್ಲಿ ದೀಪಕ್ ಅಂತ್ಯಕ್ರಿಯೆ: http://bit.ly/2qj0sA0
►►ದೀಪಕ್ ರಾವ್‌ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ: ಅಂತ್ಯ ಸಂಸ್ಕಾರಕ್ಕೆ ಮನವೊಲಿಸಿದ ಡಿಸಿ: http://bit.ly/2lTvw4J
►►ಕೊಲೆ ಆರೋಪಿಗಳನ್ನು ಬೆಂಬತ್ತಿದ ಸಾಹಸಿ ಕಾರು ಚಾಲಕ: http://bit.ly/2CmanX1
►►ಇನ್ನೊಂದು ಅಗ್ನಿ ದುರಂತ: ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತ್ಯು: http://bit.ly/2lUxrVw
►►ಗುಪ್ತವಾಗಿ ದೀಪಕ್ ರಾವ್ ಶವ ಮನೆಗೆ ರವಾನೆ. ಸ್ಥಳೀಯರ ಆಕ್ರೋಶ: http://bit.ly/2CCCfJQ
►►ಮಂಗಳೂರು: ಬಿಜೆಪಿಗನ ಕೊಲೆ ಬೆನ್ನಲ್ಲೇ ಇಬ್ಬರಿಗೆ ತಲವಾರ್ ಹಲ್ಲೆ: http://bit.ly/2E7fIm3
►►ಕಾಟಿಪಳ್ಳ ಬಜರಂಗದಳ ಕಾರ್ಯಕರ್ತನ ಕೊಲೆ: ನಾಲ್ವರ ಸೆರೆ  http://bit.ly/2ERME2k

ಇಂದು ಹೆಚ್ಚು ಓದಿದ ಸುದ್ದಿ
►►ಅಪಘಾತದ ಸ್ಥಳಕ್ಕೆ ನೆರವಿಗೆ ಧಾವಿಸಿದ್ದ ಕಾಲೇಜು ವಿದ್ಯಾರ್ಥಿಯೇ ಅಪಘಾತಕ್ಕೆ ಬಲಿ:
http://bit.ly/2D8LFtu
►►ಬೈಂದೂರು: ಬಸ್ ಅಪಘಾತಕ್ಕೆ ಫಾದರ್ ಅಬ್ರಹಾಂ ಬಲಿ: http://bit.ly/2DhSBsj
►►ಪ್ರಕಾಶ್ ರೈ ಮಾತಾಡಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದ ಬಿಜೆಪಿ: http://bit.ly/2EJPy8x
►►‘ಅಚ್ಛೇ ದಿನ್’: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: http://bit.ly/2DChax1
►►ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾದ ತೊಗಾಡಿಯಾ ಆಸ್ಪತ್ರೆಯಲ್ಲಿ ಪತ್ತೆ: http://bit.ly/2ram81E
►►ಬಶೀರ್ ಕೊಲೆ ಪ್ರಕರಣ. ಮತ್ತಿಬ್ಬರ ಬಂಧನ. ಬಂಧಿತರ ಸಂಖ್ಯೆ ಆರಕ್ಕೆ: http://bit.ly/2EKIhFp
►►ಬಿಜೆಪಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್‌ಗೆ: http://bit.ly/2DbAswi
►►ದಕ್ಷಿಣ ಆಫ್ರಿಕಾದ ನೆಲದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ: http://bit.ly/2mF8wXj
►►ಪಟಾಕಿ ಸ್ಪೋಟ: ಬಾಲಕ ಸ್ಥಳದಲ್ಲೇ ದಾರುಣ ಮೃತ್ಯು: http://bit.ly/2EI5xnB

Related Tags: Katipalla, Deepak Rao, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ