ಅಪಘಾತದ ಸ್ಥಳಕ್ಕೆ ನೆರವಿಗೆ ಧಾವಿಸಿದ್ದ ಕಾಲೇಜು ವಿದ್ಯಾರ್ಥಿಯೇ ಅಪಘಾತಕ್ಕೆ ಬಲಿ

ಶ್ರೀಕಾಂತ ಹೆಮ್ಮಾಡಿ/ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಅಪಘಾತಕ್ಕೀಡಾದ ಕಾರಿನಲ್ಲಿದ್ದವರನ್ನು ರಕ್ಷಿಸಲು ಧಾವಿಸಿದ ಕಾಲೇಜು ವಿದ್ಯಾರ್ಥಿಯೋರ್ವನಿಗೆ ಓಮ್ನಿ ಢಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದಾರುಣ ಘಟನೆ ಇಲ್ಲಿನ ಬಸ್ರೂರು ರಸ್ತೆಯ ಕಾರಂತರ ಮನೆಯ ಎದುರುಗಡೆ ವರದಿಯಾಗಿದೆ.

ಬೆಟ್ಟಾಗರ ನಿವಾಸಿ ಸಂಜೀವ ಮತ್ತು ರೇವತಿ ದಂಪತಿಗಳ ಏಕೈಕ ಪುತ್ರ ನಿತಿನ್ ಪೂಜಾರಿ (21) ಮೃತ ವಿದ್ಯಾರ್ಥಿ.

ರಕ್ಷಣೆಗೆ ಧಾವಿಸಿದಾತ ಕೊನೆಯುಸಿರೆಳೆದ
ಸೋಮವಾರ ರಾತ್ರಿ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ ಕಾರಂತರ ಮನೆಯ ಸಮೀಪ ಖಾಸಗಿ ಬಸ್ ಹಾಗೂ ಸ್ಯಾಂಟ್ರೋ ಕಾರಿನ ನಡುವೆ ಅಪಘಾತ ಸಂಭಿವಿಸಿತ್ತು.

ಅಪಘಾತದ ಶಬ್ದ ಕೇಳಿ ಮನೆಯಿಂದ ಧಾವಿಸಿ ಬಂದು ಕಾರಿನಲ್ಲಿದ್ದವರ ರಕ್ಷಣೆಗೆ ವಿದ್ಯಾರ್ಥಿ ನಿತಿನ್ ಹಾಗೂ ಗಾರೆ ಕಾರ್ಮಿಕ ಅನಿಲ್ ಮುಂದಾಗಿದ್ದರು. ಈ ವೇಳೆಯಲ್ಲಿ ಕುಂದಾಪುರದಿಂದ ಬಸ್ರೂರು ಕಡೆಗೆ ವೇಗವಾಗಿ ಬಂದ ಓಮ್ನಿ ನಿತಿನ್ ಹಾಗೂ ಅನಿಲ್‌ಗೆ ಗುದ್ದಿತ್ತು.

ಢಿಕ್ಕಿಯ ರಭಸಕ್ಕೆ ನಿತಿನ್ ರಸ್ತೆ ಸಮೀಪದ ಗದ್ದೆಗೆ ಅಪ್ಪಳಿಸಿದ ಪರಿಣಾಮ ತಲೆ ಹಾಗೂ ಮುಖ ಭಾಗಗಳಿಗೆ ಗಂಭೀರ ಗಾಯಗಳಾಗಿತ್ತು.

ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿತಿನ್ ಕೊನೆಯುಸಿರೆಳೆದಿದ್ದಾರೆ. ಇನ್ನು ಅಪಘಾತದ ವೇಳೆ ಗಾಯಗೊಂಡಿರುವ ಅನಿಲ್ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲಿಕೆಯಲ್ಲಿ ಮುಂದಿದ್ದ ನಿತಿನ್ ಪೂಜಾರಿ
ಕಲಿಕೆಯಲ್ಲಿ ಮುಂದಿದ್ದ ನಿತಿನ್ ಪೂಜಾರಿ ಭಂಡಾರ್ಕಾರ್ಸ್ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದನು. ಸಂಜೀವ ರೇವತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಕಿರಿಯ ಮಗಳು ವಿಕಲಚೇತನಳಾಗಿದ್ದು, ನಿತಿನ್ ಹಿರಿಯ ಮಗನಾಗಿದ್ದನು.

ತಂದೆ ಸಂಜೀವ ಕುಂದಾಪುರ ಹೆಂಚಿನ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಮನೆಯ ಜವಾಬ್ದಾರಿಗಳನ್ನು ಸಾಕಷ್ಟು ಕಷ್ಟದಿಂದಲೇ ನಿಭಾಯಿಸುತ್ತಿದ್ದರು. ಇನ್ನು ಸ್ವಲ್ಪ ಸಮಯದರಲ್ಲೇ ವಿದ್ಯಾಭ್ಯಾಸ ಮುಗಿದು ಕೆಲಸಕ್ಕೆ ಸೇರಿ ಮನೆಯ ಜವಾಬ್ದಾರಿಗಳಿಗೆ ಹೆಗಲು ಕೊಡಬೇಕಿದ್ದ ವಿದ್ಯಾರ್ಥಿ ನಿತಿನ್ ಸಾವು ಅವರ ಕುಟುಂಬ ವರ್ಗಕ್ಕೆ ಆಘಾತ ನೀಡಿದೆ.

ನಿತಿನ್ ಸಾವಿಗೆ ವಿದ್ಯಾರ್ಥಿಗಳ ಕಂಬನಿ
ನಿತಿನ್ ಸಾವಿಗೆ ಇಡೀ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಸಮುದಾಯ ಹಾಗೂ ಅವರ ಆಪ್ತ ವಲಯ ಕಂಬನಿ ಮಿಡಿದಿದೆ. ಇಂದು ಬೆಳಗ್ಗೆ ಕಾಲೇಜಿನಲ್ಲಿ ನಿತಿನ್‌ಗೆ ಶ್ರದ್ದಾಂಜಲಿ ಅರ್ಪಿಸಿ ರಜೆ ಸಾರಲಾಗಿದೆ.

ಸದ್ಯ ನಿತಿನ್ ಮೃತದೇಹ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಕುಟುಂಬಸ್ಥರು ಜಮಾಯಿಸಿ ಕಂಬನಿ ಮಿಡಿಯುತ್ತಿರುವ ದೃಶ್ಯ ಕರುಣಾಜನಕವಾಗಿದೆ.

ಇಂದು ಹೆಚ್ಚು ಓದಿದ ಸುದ್ದಿ
►►ಬೈಂದೂರು: ಬಸ್ ಅಪಘಾತಕ್ಕೆ ಫಾದರ್ ಅಬ್ರಹಾಂ ಬಲಿ:
http://bit.ly/2DhSBsj
►►ಪ್ರಕಾಶ್ ರೈ ಮಾತಾಡಿದ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿದ ಬಿಜೆಪಿ: http://bit.ly/2EJPy8x
►►‘ಅಚ್ಛೇ ದಿನ್’: ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: http://bit.ly/2DChax1
►►ನಾಪತ್ತೆಯಾಗಿದ್ದಾರೆ ಎಂದು ಸುದ್ದಿಯಾದ ತೊಗಾಡಿಯಾ ಆಸ್ಪತ್ರೆಯಲ್ಲಿ ಪತ್ತೆ: http://bit.ly/2ram81E
►►ಬಶೀರ್ ಕೊಲೆ ಪ್ರಕರಣ. ಮತ್ತಿಬ್ಬರ ಬಂಧನ. ಬಂಧಿತರ ಸಂಖ್ಯೆ ಆರಕ್ಕೆ: http://bit.ly/2EKIhFp
►►ಬಿಜೆಪಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್‌ಗೆ: http://bit.ly/2DbAswi
►►ದಕ್ಷಿಣ ಆಫ್ರಿಕಾದ ನೆಲದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ: http://bit.ly/2mF8wXj
►►ಪಟಾಕಿ ಸ್ಪೋಟ: ಬಾಲಕ ಸ್ಥಳದಲ್ಲೇ ದಾರುಣ ಮೃತ್ಯು: http://bit.ly/2EI5xnB

Related Tags: Kundapur, Degree Student Death, Accident, Omni Accident, Karanth House at Koni, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ