ದಕ್ಷಿಣ ಆಫ್ರಿಕಾದ ನೆಲದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ

ಕರಾವಳಿ ಕರ್ನಾಟಕ ವರದಿ

ಸೆಂಚೂರಿಯನ್:
ದಕ್ಷಿಣ ಆಫ್ರಿಕಾದ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಹೊಡೆದ ಎರಡನೇ ನಾಯಕ ಎಂಬ ಖ್ಯಾತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಎರಡನೇ ಟೆಸ್ಟ್‌ ಪಂದ್ಯದ ಇಂದಿನ ಮೂರನೇ ದಿನದಾಟದ ಭೋಜನ ವಿರಾಮದ ವೇಳೆಗೆ ಭಾರತ, ನಾಯಕ ವಿರಾಟ್‌ ಕೊಹ್ಲಿ ಅವರ ಅಜೇಯ 141 ರನ್‌ಗಳ ನೆರವಿನೊಂದಿಗೆ, ಎಂಟು ವಿಕೆಟ್‌ ನಷ್ಟಕ್ಕೆ 287 ರನ್‌ ಗಳಿಸಿದೆ.

ಆತಿಥೇಯ ದಕ್ಷಿಣ ಆಫ್ರಿಕ ತಂಡದ ಮೊದಲ ಇನ್ನಿಂಗ್ಸ್‌ ಮೊತ್ತದಿಂದ (335 ರನ್‌) ಭಾರತ ಈಗ ಕೇವಲ 48 ರನ್‌ ಹಿಂದಿದೆ.

ನಿನ್ನೆಯ ಎರಡನೇ ದಿನದಾಟದ ಅಂತ್ಯಕ್ಕೆ ವಿರಾಟ್‌ ಕೊಹ್ಲಿ ಅವರ 85 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ಇಂದು ಅವರು ತಮ್ಮ 21ನೇ ಟೆಸ್ಟ್‌ ಶತಕವನ್ನು ಪೂರೈಸಿ. ಲಂಚ್‌ ವೇಳೆಗೆ ಕೊಹ್ಲಿ ಔಟಾಗದೇ 141 ರನ್‌ಗಳೊಂದಿಗೆ ಆಡುತ್ತಿದ್ದರು.

ದಕ್ಷಿಣ ಆಫ್ರಿಕ ಇಂದು ಬೆಳಗ್ಗಿನ ಆಟದಲ್ಲಿ ರವಿಚಂದ್ರನ್‌ ಅಶ್ವಿ‌ನ್‌ ಮತ್ತು ಮೊಹಮ್ಮದ್‌ ಶಮಿ ಅವರ ವಿಕೆಟ್‌ ಕೀಳುವಲ್ಲಿ ಸಫ‌ಲವಾಯಿತು. ಆದರೆ ಕೊಹ್ಲಿ ದೃಢವಾಗಿ ನಿಂತು ಅತ್ಯಂತ ಸಹನೆಯ ಮತ್ತು ಕೆಚ್ಚಿನ ಆಟವನ್ನು ಪ್ರದರ್ಶಿಸಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು.

1996–97ರ ಅವಧಿಯಲ್ಲಿ ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ 169 ರನ್ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ಈ ಬಾರಿ ಕೊಹ್ಲಿ ಅವರು 146 ಎಸೆತಕ್ಕೆ 100 ರನ್ ಗಳಿಸಿದ ಕೊಹ್ಲಿ ಈ ಸಾಧನೆ ಮಾಡಿದ್ದು, ಈ ಮೂಲಕ 21 ಶತಕ ಸಿಡಿಸಿದಂತಾಗಿದೆ.

ಈ ಶತಕದ ನೆರವಿನಿಂದ ಕೊಹ್ಲಿ ಟೆಸ್ಟ್ ನಲ್ಲಿ 21 ಹಾಗೂ ಏಕದಿನ ಕ್ರಿಕೆಟ್ 32 ಶತಕ ಗಳಿಸಿದ್ದಾರೆ. ಒಟ್ಟು 53 ಶತಕ ಬಾರಿಸಿದ್ದು, ಅತಿ ಹೆಚ್ಚು ಶತಕ ಗಳಿಸಿರುವ ಭಾರತೀಯ ಆಟಗಾರರ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ನಂತರದ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಅವರು 31 ಪಂದ್ಯಗಳಲ್ಲಿ 49 ಇನ್ನಿಂಗ್ಸ್ ಗಳಿಂದ 12 ಶತಕ ಹಾಗೂ 4 ಅರ್ಧಶತಕ ಗಳಿಸಿದ್ದಾರೆ. 53 ಶತಕಗಳ ಮೂಲಕ ಬ್ರಿಯಾನ್ ಲಾರಾ ಸಮಕ್ಕೆ ನಿಂತಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿ
►►ಪಟಾಕಿ ಸ್ಪೋಟ: ಬಾಲಕ ಸ್ಥಳದಲ್ಲೇ ದಾರುಣ ಮೃತ್ಯು:
http://bit.ly/2EI5xnB
►►ಮಗುವಿನ ಜೀವ ಉಳಿಸಿ: ತಂದೆಯ ಕರುಣಾಜನಕ ವಿನಂತಿ: http://bit.ly/2Dbif1O
►►ತಂದೆ ಸಾವಿನಲ್ಲಿ ಅನುಮಾನವಿಲ್ಲ. ತೊಂದರೆ ನೀಡಬೇಡಿ: ಜ. ಲೋಯಾ ಪುತ್ರ: http://bit.ly/2mwj4am
►►ಟೈರ್ ರಿಮೋಡ್ ಘಟಕಕ್ಕೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ನಷ್ಟ: http://bit.ly/2FEv7em
►►ಸಂಸದೆ ಶೋಭಾ ಕರಂದ್ಲಾಜೆ ಸೋಲಬೇಕಿದೆ: ಜಿ. ರಾಜಶೇಖರ್: http://bit.ly/2mvAy6I
►►ಸೋಷಿಯಲ್ ಮೀಡಿಯಾದಲ್ಲಿ ಮಾಧುರಿಗೆ ಕಿರುಕುಳ: ಆರೋಪಿಯ ಬಂಧನ: http://bit.ly/2EHmwpZ
►►ಅಪಘಾತದಲ್ಲಿ ಹಿರಿಯ ಪತ್ರಕರ್ತ ಡಾ. ವೀರೇಶ್ ಹಿರೇಮಠ್ ಸಾವು: http://bit.ly/2mBy3kb
►►ಸಂವಿಧಾನ ಬದಲಿಸಲು ಇವರೇನು ದೊಣ್ಣೆ ನಾಯಕರೆ?: ಪ್ರಕಾಶ್ ರೈ: http://bit.ly/2D0KLiP
►►ಮರಕ್ಕೆ ಬೈಕ್ ಢಿಕ್ಕಿ: ಖಾಸಗಿ ಸುದ್ದಿ ವಾಹಿನಿ ವರದಿಗಾರ ಸಾವು: http://bit.ly/2r3IFwY

Related Tags: India v South Africa, 2nd Test, Virat Kohli, 21st Test Century, Sports News, Cricket News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ