ಪಟಾಕಿ ಸ್ಪೋಟ: ಬಾಲಕ ಸ್ಥಳದಲ್ಲೇ ದಾರುಣ ಮೃತ್ಯು

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಪಟಾಕಿ ಸ್ಫೋಟಗೊಂಡು ತಲೆಗೆ ಹೊಡೆದ ಪರಿಣಾಮ ಬಾಲಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಇಲ್ಲಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಸಂಭವಿಸಿದೆ.

ಮೃತ ಬಾಲಕನನ್ನು ಧನುಷ್ (12) ಎಂದು ಗುರುತಿಸಲಾಗಿದ್ದು, ಭಾನುವಾರ ರಾತ್ರಿ 9 ಗಂಟೆಗೆ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಲೂರ್ದ್ ಚರ್ಚ್‌ನಲ್ಲಿ ಆಯೋಜಿಸಿದ್ದ ಪಟಾಕಿ ಸಿಡಿಸುವ ಕಾರ್ಯಕ್ರಮದ ವೇಳೆ ಈ ದುರ್ಘಟನೆ ನಡೆದಿದೆ.

ಪ್ರತಿ ಹೊಸ ವರ್ಷದ ಎರಡನೇ ಭಾನುವಾರ ಚರ್ಚ್‌ನಲ್ಲಿ ಪಟಾಕಿ ಸಿಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಧನುಷ್ ಪ್ರತಿ ವರ್ಷ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದನು.

ಈ ವರ್ಷವೂ ಕೂಡ ಪಟಾಕಿ ಸಿಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಧನುಷ್ ತಲೆ ಮೇಲೆ ಪಟಾಕಿ ಬಿದ್ದ ಪರಿಣಾಮ ಮೆದುಳು ಹೊರಬಂದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಧನುಷ್ ತ್ಯಾಗರಾಜನಗರ ನಿವಾಸಿಯಾಗಿದ್ದು, ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಹೆಚ್ಚು ಓದಿದ ಸುದ್ದಿ
►►ಮಗುವಿನ ಜೀವ ಉಳಿಸಿ: ತಂದೆಯ ಕರುಣಾಜನಕ ವಿನಂತಿ:
http://bit.ly/2Dbif1O
►►ತಂದೆ ಸಾವಿನಲ್ಲಿ ಅನುಮಾನವಿಲ್ಲ. ತೊಂದರೆ ನೀಡಬೇಡಿ: ಜ. ಲೋಯಾ ಪುತ್ರ: http://bit.ly/2mwj4am
►►ಟೈರ್ ರಿಮೋಡ್ ಘಟಕಕ್ಕೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ನಷ್ಟ: http://bit.ly/2FEv7em
►►ಸಂಸದೆ ಶೋಭಾ ಕರಂದ್ಲಾಜೆ ಸೋಲಬೇಕಿದೆ: ಜಿ. ರಾಜಶೇಖರ್: http://bit.ly/2mvAy6I
►►ಸೋಷಿಯಲ್ ಮೀಡಿಯಾದಲ್ಲಿ ಮಾಧುರಿಗೆ ಕಿರುಕುಳ: ಆರೋಪಿಯ ಬಂಧನ: http://bit.ly/2EHmwpZ
►►ಅಪಘಾತದಲ್ಲಿ ಹಿರಿಯ ಪತ್ರಕರ್ತ ಡಾ. ವೀರೇಶ್ ಹಿರೇಮಠ್ ಸಾವು: http://bit.ly/2mBy3kb
►►ಸಂವಿಧಾನ ಬದಲಿಸಲು ಇವರೇನು ದೊಣ್ಣೆ ನಾಯಕರೆ?: ಪ್ರಕಾಶ್ ರೈ: http://bit.ly/2D0KLiP
►►ಮರಕ್ಕೆ ಬೈಕ್ ಢಿಕ್ಕಿ: ಖಾಸಗಿ ಸುದ್ದಿ ವಾಹಿನಿ ವರದಿಗಾರ ಸಾವು: http://bit.ly/2r3IFwY

Related Tags: Lourde''s Church in Cambridge Layout, Bangalore, Dhanush Death, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ