ಮುಸ್ಲಿಮರ ಬೈಕ್‌ಗೆ ದಿನ ರಾತ್ರಿ ಸರಣಿ ಬೆಂಕಿ: ಕೊನೆಗೂ ಆರೋಪಿಯ ಸೆರೆ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಕಳೆದ ಕೆಲ ದಿನಗಳಿಂದ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಂಡು ಅವರ ಬೈಕ್‌ಗೆ ಬೆಂಕಿ ಹಚ್ಚುವ ಕೃತ್ಯ ಮುಂದುವರೆದಿದ್ದು, ಇಂದು ನಸುಕಿನ ಜಾವದಲ್ಲಿ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಲೆತ್ನಿಸಿದ ದುಷ್ಕರ್ಮಿಯೋರ್ವನನ್ನು ಗಂಗೊಳ್ಳಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗೊಳ್ಳಿಯ ದಾಕುಹಿತ್ಲು ನಿವಾಸಿ ಕೃಷ್ಣ ಖಾರ್ವಿ ಎಂಬವರ ಪುತ್ರ ಗುರುರಾಜ್ ಖಾರ್ವಿ(28) ಎಂಬಾತನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ದಾಕುಹಿತ್ಲು ಟಕಿಯಾಮೊಹಲ್ಲಾ ನಿವಾಸಿ ಮಸೀದಿಯಲ್ಲಿ ಅಝಾನ್ ಕೂಗುವ ನಯೀಮ್ ಎಂಬವರ ಸ್ಕೂಟರ್‌ಗೆ ಬೆಳಗಿನ ಜಾವ 3.30 ರ ಸಮಾರಿಗೆ ಬೆಂಕಿ ಇಕ್ಕಲಾಗಿತ್ತು.

ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಳು ನಿರೀಕ್ಷಿಸಲಾಗುತ್ತಿದೆ.

ಸ್ಥಳ್ಕಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬಾರ್ಗಿ ಭೇಟಿ ನೀಡಿದ್ದಾರೆ. ಪೊಲೀಸರು ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ. 


ಇದನ್ನೂ ಓದಿ
►►ಮತ್ತೊಂದು ಬೈಕ್‌ಗೆ ಬೆಂಕಿ: ಗಂಗೊಳ್ಳಿ ಉದ್ವಿಗ್ನಗೊಳಿಸಲು ಮತ್ತೆ ಕಿಡಿಗೇಡಿಗಳ ಯತ್ನ:
http://bit.ly/2CU9YPD
►►ಗಂಗೊಳ್ಳಿಯಲ್ಲಿ ಮತ್ತೆ ಸೌಹಾರ್ದ ಕದಡುವ ಯತ್ನ: ಕಿಡಿಗೇಡಿಗಳಿಂದ ಬೈಕ್‌ಗೆ ಬೆಂಕಿ: http://bit.ly/2D5moBc

ಹಿಂದಿನ ವರದಿ
ಮತ್ತೊಂದು ಬೈಕ್‌ಗೆ ಬೆಂಕಿ: ಗಂಗೊಳ್ಳಿ ಉದ್ವಿಗ್ನಗೊಳಿಸಲು ಮತ್ತೆ ಕಿಡಿಗೇಡಿಗಳ ಯತ್ನ
ಕುಂದಾಪುರ: ಕೋಮು ಸೂಕ್ಷ್ಮ ಪ್ರದೇಶವೆಂದೇ ಬಿಂಬಿತವಾಗಿರುವ ಗಂಗೊಳ್ಳಿಯನ್ನು ಉದ್ವಿಗ್ನಗೊಳಿಸಲು ಕಳೆದೊಂದು ವಾರದಿಂದ ಕಿಡಿಗೇಡಿಗಳು ಅವಿರತ ಯತ್ನ ನಡೆಸುತ್ತಿದ್ದು ಇದೀಗ ಇನ್ನೊಂದು ಬೈಕ್‌ಗೆ ಬೆಂಕಿ ಹಚ್ಚಲಾಗಿದೆ.

ಗಂಗೊಳ್ಳಿ ಮ್ಯಾಂಗ್ನೀಸ್ ರಸ್ತೆಯಲ್ಲಿ ಮೊಬೈಲ್ ಶಾಪ್ ಹೊಂದಿರುವ ಬದ್ರುದ್ದೀನ್ ಎಂಬವರ ಪ್ಲಾಟಿನಾ ಬೈಕ್‌ಗೆ ದುಷ್ಕರ್ಮಿಗಳು ಇಂದು ನಸುಕಿನ ಜಾವ 4.30ರ ಸುಮಾರಿಗೆ ಬೆಂಕಿ ಇಕ್ಕಿ ಪರಾರಿಯಾಗಿದ್ದಾರೆ.

ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆಗೆ ತಾಗಿಕೊಂಡ ಗೋಪಾಲ ಶೇರುಗಾರ್ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ಬದ್ರುದ್ದೀನ್ ತಮ್ಮ ಕುಟುಂಬಿಕರೊಂದಿಗೆ ವಾಸವಿದ್ದಾರೆ. ರಾತ್ರಿ ಅಂಗಡಿಯಿಂದ ಬಂದ ಬದ್ರುದ್ದೀನ್ ಬಾಡಿಗೆ ಮನೆಯ ಕೆಳಗಡೆ ಗೋಪಾಲ ಶೇರುಗಾರ್ ಮನೆಯ ಮುಂಬದಿ ಬೈಕ್ ನಿಲ್ಲಿಸಿ ಮನೆಗೆ ತೆರಳಿದ್ದರು.

ಇಂದು ನಸುಕಿನ ಜಾವ 4.30ರ ಸುಮಾರಿಗೆ ಮನೆಯ ಹೊರಗಿನಿಂದ ವಾಸನೆ ಬಂದ ಹಿನ್ನೆಲೆಯಲ್ಲಿ ಮನೆಯ ಮಾಲೀಕ ಗೋಪಾಲ ಶೇರುಗಾರ್ ಹೊರಗೆ ಬಂದು ನೋಡಿದಾಗ ಬೆಂಕಿ ಹೊತ್ತಿ ಉರಿಯುತ್ತಿತ್ತು. ಕೂಡಲೇ ಅವರು ನೀರು ಹಾಕಿ ಬೆಂಕಿಯನ್ನು ನಂದಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಘಟನೆಯಲ್ಲಿ ಬೈಕ್ ಭಾಗಶಃ ಹಾನಿಯಾಗಿದ್ದು, ಸ್ಥಳಕ್ಕಾಗಮಿಸಿದ ಗಂಗೊಳ್ಳಿ ಪೊಲೀಸರು ಬೈಕ್ ಅನ್ನು ಠಾಣೆಗೆ ಸಾಗಿಸಿದ್ದಾರೆ.

ಮುಸ್ಲಿಮರ ಅಂಗಡಿ ಮುಂಗಟ್ಟುಗಳು ಬಂದ್
ಕಳೆದ ಕೆಲ ವಾರಗಳಿಂದೀಚೆಗೆ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಬೈಕ್‌ಗಳಿಗೆ ಬೆಂಕಿ ಇಕ್ಕುವುದು ಹಾಗೂ ಮನೆಗಳಿಗೆ ಕಲ್ಲು ತೂರಾಟ ನಡೆಸುವ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮುಸ್ಲಿಂ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಕೆಲಕಾಲ ಬಂದ್ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬಂದು ತಮ್ಮ ಮನವಿಯನ್ನು ಸ್ವೀಕರಿಸಬೇಕು ಎಂದು ಪಿಎಫ್ಐ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳು ಆಗ್ರಹಿಸಿದ್ದು, ಡಿವೈಎಸ್ಪಿ ಪ್ರವೀಣ್ ನಾಯ್ಕ್ ಎಸ್‌ಪಿ ಬರುವುದಾಗಿ ಸೂಚಿಸಿದ್ದರಿಂದ ವರ್ತಕರು ಅಂಗಡಿಗಳ ಬಾಗಿಲನ್ನು ತೆರೆದು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಪೊಲೀಸರಿಂದ ಗುಂಪು ಚದುರಿಕೆ, ಸ್ಥಳದಲ್ಲಿ ಬಿಗು ಬಂದೋಬಸ್ತ್
ಕಿಡಿಗೇಡಿಗಳ ದುಷ್ಕೃತ್ಯ ಖಂಡಿಸಿ ಪಿಎಫ್ಐ ಗಂಗೊಳ್ಳಿ ಘಟಕಾಧ್ಯಕ್ಷ ತಬ್ರೇಜ್ ನೇತೃತ್ವದ ಯುವಕರ ತಂಡ ಸ್ಥಳದಲ್ಲಿ ಜಮಾಯಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಡಿವೈಎಸ್‌ಪಿ ಪ್ರವೀಣ್ ನಾಯ್ಕ್ ನೇತೃತ್ವದ ಪೊಲೀಸರ ತಂಡ ಗುಂಪನ್ನು ಚದುರಿಸಿದೆ. ಇದೀಗ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಡಿವೈಎಸ್ಪಿ ಪ್ರವೀಣ್ ನಾಯ್ಕ್, ಬೈಂದೂರು ಸಿಪಿಐ, ಕುಂದಾಪುರ ಸಿಪಿಐ ಸಂಚಾರ ಠಾಣೆಯ ಪಿಎಸ್ಐ ಸುಬ್ಬಣ್ಣ ಮೊದಲಾದವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಮಂಗಳೂರು ಗಲಭೆಯ ನಂತರ ನಿರಂತರ ಕೃತ್ಯ: ಆರೋಪ
ಮಂಗಳೂರು ಗಲಭೆಯ ನಂತರ ನಿರಂತವಾಗಿ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಂಡು ಅಹಿತಕರ ಕೃತ್ಯಗಳು ನಡೆಸಲಾಗುತ್ತಿದೆ. ವಾರಗಳಿಂದಲೂ ಸಣ್ಣಪುಟ್ಟ ಘಟನೆಗಳು ನಡೆಯುತ್ತಿದ್ದು, ಆರಂಭದಲ್ಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದೆವು. ಮೊದಲೇ ಇದನ್ನು ಚಿವುಟಿ ಹಾಕಿದ್ದರೆ ಇಷ್ಟು ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ. ಕಿಡಿಗೇಡಿಗಳು ಎರಡು ಬೈಕ್‌ಗಳಿಗೆ ಬೆಂಕಿ ಇಕ್ಕಿದ್ದಾರೆ.

ಆರೋಪಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸದಿದ್ದಲ್ಲಿ ಪಿಎಫ್ಐ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಪಿಎಫ್ಐ ಘಟಕಾಧ್ಯಕ್ಷ ತಬ್ರೇಜ್ ಗಂಗೊಳ್ಳಿ 'ಕರಾವಳಿ ಕರ್ನಾಟ'ಕ್ಕೆ ತಿಳಿಸಿದ್ದಾರೆ.

ಸುಬ್ಬಣ್ಣ ವರ್ಗಾವಣೆ ಬಳಿಕ ಗಂಗೊಳ್ಳಿಯಲ್ಲಿ ಅಶಾಂತಿ
ಮೂರ್ನಾಲ್ಕು ವರ್ಷಗಳ ಹಿಂದೆ ಇಲ್ಲಿನ ಜಾಮೀಯಾ ಮಸೀದಿ ಹಾಗೂ ಅಂಗಡಿಗೆ ಬೆಂಕಿ ಇಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಗಂಗೊಳ್ಳಿ ಉದ್ವಿಗ್ನವಾಗಿತ್ತು. ಅಂದಿನ ಉಡುಪಿ ಹೆಚ್ಚುವರಿ ಎಸ್ಪಿಯಾಗಿದ್ದ ಅಣ್ಣಾಮಲೈ ಅವರ ದಿಟ್ಟ ಕ್ರಮಗಳಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಿತ್ತು. ಬಳಿಕ ಸುಬ್ಬಣ್ಣ ಪಿಎಸ್‌ಐ ಆಗಿ ಬಂದ ತರುವಾಯ ಗಂಗೊಳ್ಳಿಯಲ್ಲಿ ಶಾಂತಿ ನೆಲೆಸಿತ್ತು. ಇದೀಗ ಸುಬ್ಬಣ್ಣ ಅವರು ಕುಂದಾಪುರ ಸಂಚಾರ ಠಾಣೆಗೆ ಪಿಎಸ್ಐ ಆಗಿ ವರ್ಗಾವಣೆಗೊಂಡ ಬಳಿಕ ಗಂಗೊಳ್ಳಿಯಲ್ಲಿ ಕಿಡಿಗೇಡಿಗಳು ಮತ್ತೆ ತಮ್ಮ ಬಾಲ ಬಿಚ್ಚುತ್ತಿದ್ದಾರೆ ಎಂದು ಸ್ಥಳೀಯ ಕೆಲವು ಯುವಕರು ಅಭಿಪ್ರಾಯಪಟ್ಟಿದ್ದಾರೆ.

ಗಂಗೊಳ್ಳಿಯಲ್ಲಿ ಸೌಹಾರ್ದತೆ ಕದಡಲು ಹರಸಾಹಸ
ಗಂಗೊಳ್ಳಿಯಲ್ಲಿ ಕೆಲ ಕಿಡಿಗೇಡಿಗಳು ಕೋಮು ಸೌಹಾರ್ದ ಕೆಡಲು ಹೊಂಚು ಹಾಕಿ ಕೂತಿದ್ದಾರೆ. ಮೂರು ವರ್ಷಗಳ ಹಿಂದೆ ಕೋಮುದೊಳ್ಳುರಿಗಳಿಂದ ಉದ್ವಿಗ್ನಗೊಂಡಿದ್ದ ಗಂಗೊಳ್ಳಿ ಪೊಲೀಸರ ಅವಿರತವಾದ ಶ್ರಮದಿಂದಾಗಿ ಮತ್ತೆ ಶಾಂತಿ ನೆಲೆಸಿತ್ತು.

ಸದಾ ಕೋಮು ಗಲಭೆಗೆ ಸಂಚು ಹೂಡುವ ಮತ್ತು ಗಂಗೊಳ್ಳಿಯ ವಿವಿಧ ಸಮುದಾಯಗಳ ನಡುವಿನ ನೆಮ್ಮದಿಯನ್ನು ಹಾಳು ಮಾಡಲೇಬೇಕೆಂದು ಹವಣಿಸುತ್ತಿರುವ ಕೆಲ ಕಿಡಿಗೇಡಿಗಳಿಂದಾಗಿ ಗಂಗೊಳ್ಳಿಯಲ್ಲಿ ಅಶಾಂತಿ ಏರ್ಪಟ್ಟಿದ್ದು, ಪೊಲೀಸರು ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕಾಗಿದೆ.

ಇಂದು ಹೆಚ್ಚು ಓದಿದ ಸುದ್ದಿ
►►ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ 'ಅಲ್ಲಾಡ್ಸು': ಜನ ಸೇರಿಸಲಿಕ್ಕಾಗಿ ವೇದಿಕೆಯಲ್ಲಿ ಮಾದಕ ನೃತ್ಯ:
http://bit.ly/2D7Rx9s
►►ಉದಯವಾಣಿ ಕಾಲಂ ಹಠಾತ್ ಸ್ಥಗಿತ. ಪ್ರಜಾವಾಣಿಗೆ ಬರೆಯಲಿದ್ದಾರೆ ಪ್ರಕಾಶ್ ರೈ: http://bit.ly/2FuWrM8
►►ಸಿಸಿಬಿ ಅಧಿಕಾರಿಗಳಿಂದ ಕೈದಿಗಳ ಜಾತಿ ನಿಂದನೆ, ಹಲ್ಲೆ: ಆರೋಪ: http://bit.ly/2ASR8Tr
►►ಮಂಗಳೂರು: ಭಿನ್ನ ಕೋಮಿನ ಜೋಡಿ ಬಜರಂಗಿ ಕೈಗೆ: http://bit.ly/2mukjYC
►►ಮುಖ್ಯ ನ್ಯಾಯಮೂರ್ತಿ ವಿರುದ್ಧ 4 ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ: ಇತಿಹಾಸದಲ್ಲಿ ಮೊದಲು: http://bit.ly/2D7jFuo
►►ಧನ್ಯಶ್ರೀ ಪ್ರಕರಣದಲ್ಲಿ ಬಿಜೆಪಿಯ ದ್ವಂದ್ವ ನಿಲುವು ಬಟಾಬಯಲಾಗಿದೆ: ರಾಮಲಿಂಗಾ ರೆಡ್ಡಿ: http://bit.ly/2qVf4pf
►►ಜೈಲಿಗೆ ಹೋಗಿದ್ದ ಅಮಿತ್ ಶಾ ಹೇಳಿಕೆಯಿಂದ ಸಾಮರಸ್ಯಕ್ಕೆ ಧಕ್ಕೆ: ಐವನ್ ಡಿಸೋಜಾ: http://bit.ly/2mmgTWN

Related Tags: Bikes Torched, Gangolli, Muslim Youth''s Bikes, Accused Arrested, Gangolli Police, Dakuhithlu, Gururaj Kharvi, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ