ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ 'ಅಲ್ಲಾಡ್ಸು': ಜನ ಸೇರಿಸಲಿಕ್ಕಾಗಿ ವೇದಿಕೆಯಲ್ಲಿ ಮಾದಕ ನೃತ್ಯ

ಕರಾವಳಿ ಕರ್ನಾಟಕ ವರದಿ

ಚಿಕ್ಕಬಳ್ಳಾಪುರ:
ಜಿಲ್ಲೆಯ ಗಡಿಭಾಗದ ಬಾಗೇಪಲ್ಲಿಯಲ್ಲಿ ಶುಕ್ರವಾರ ಪರಿವರ್ತನಾ ಯಾತ್ರೆ ನಡೆಯಲಿದ್ದು ಜನರನ್ನು ಆಕರ್ಷಿಸುವ ಸಲುವಾಗಿ ಬೆಳಿಗ್ಗೆಯಿಂದಲೇ ಯುವಕ-ಯುವತಿಯರ ಮಾದಕ ನೃತ್ಯ ನಡೆದಿದೆ. ಬೆಳಿಗ್ಗೆ ಗೌರಿಬಿದನೂರಿನಿಂದ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಗೊಂಡಿದೆ.

ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ಬೆಳಿಗ್ಗೆಯಿಂದಲೇ ಆರ್ಕೆಸ್ಟ್ರಾದೊಂದಿಗೆ ಯುವತಿಯರ ನೃತ್ಯ ಆಯೋಜಿಸಲಾಗಿದೆ.

ಪಟ್ಟಣದ ಎಚ್‌.ಎನ್‌.ವೃತ್ತದಲ್ಲಿ ಹಾಕಿದ ವೇದಿಕೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಆರಂಭಗೊಂಡ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಐದು ಯುವತಿಯರು ವಿವಿಧ ಹಾಡಿಗೆ ಮೈಬಳುಕಿಸಿ ಹೆಜ್ಜೆ ಹಾಕುತ್ತ ಮಾದಕವಾಗಿ ಕುಣಿದಿತ್ತಿದ್ದಾರೆ.

ವೇದಿಕೆ ಬಳಿ ನೆರೆದಿರುವ ನೂರಾರು ಜನರು ನೃತ್ಯಕ್ಕೆ ಮನಸೋತು ಶಿಳ್ಳೆ ಹೊಡೆಯುತ್ತಿದ್ದಾರೆ. ಕೆಲವರೂ ತಾವೂ ನಿಂತಲ್ಲೇ ಹೆಜ್ಜೆ ಹಾಕಿದ್ದಾರೆ.

ಮುದುಕರೂ ಸಹ ಯುವತಿಯರಿಗೆ ಸಾಥ್ ನೀಡಿ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕಂಡುಬಂದವು. ಬಹಿರಂಗ ವೇದಿಕೆಯಲ್ಲಿ ‘ಅಲ್ಲಾಡ್ಸು ಅಲ್ಲಾಡ್ಸು’ ಹಾಡು ಸೇರಿದಂತೆ ಅನೇಕ ಗೀತೆಗಳಿಗೆ ಯುವತಿಯರು ನೃತ್ಯ ಮಾಡಿದ್ದಾರೆ.


ವೇದಿಕೆ ಮೇಲಿದ್ದ ಕೆಲವರು ಈ ಮಾದಕ ಕುಣಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ನೃತ್ಯ ಕಾರ್ಯಕ್ರಮ ಮುಂದುವರಿದಿದೆ.

ಪೂರ್ವ ನಿಗದಿಯಂತೆ ಬಾಗೇಪಲ್ಲಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಪರಿವರ್ತನಾ ಯಾತ್ರೆಯ ಸಭಾ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಗೌರಿಬಿದನೂರಿನಲ್ಲಿ 11 ಗಂಟೆಗೆ ಆರಂಭವಾಗಬೇಕಾದ ಯಾತ್ರೆ ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿದೆ.

ಯಾತ್ರೆ ಬಾಗೇಪಲ್ಲಿ ತಲುಪುವಾಗ ಸಂಜೆಯಾಗುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಜನರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಈ ಮಾದಕ ನೃತ್ಯ ನಡೆಯುವ ಹಾಗೆ ನೋಡಿಕೊಳ್ಳಲಾಗಿದೆ.

ಇಂದು ಹೆಚ್ಚು ಓದಿದ ಸುದ್ದಿ
►►ಉದಯವಾಣಿ ಕಾಲಂ ಹಠಾತ್ ಸ್ಥಗಿತ. ಪ್ರಜಾವಾಣಿಗೆ ಬರೆಯಲಿದ್ದಾರೆ ಪ್ರಕಾಶ್ ರೈ:
http://bit.ly/2FuWrM8
►►ಸಿಸಿಬಿ ಅಧಿಕಾರಿಗಳಿಂದ ಕೈದಿಗಳ ಜಾತಿ ನಿಂದನೆ, ಹಲ್ಲೆ: ಆರೋಪ: http://bit.ly/2ASR8Tr
►►ಮಂಗಳೂರು: ಭಿನ್ನ ಕೋಮಿನ ಜೋಡಿ ಬಜರಂಗಿ ಕೈಗೆ: http://bit.ly/2mukjYC
►►ಮುಖ್ಯ ನ್ಯಾಯಮೂರ್ತಿ ವಿರುದ್ಧ 4 ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ: ಇತಿಹಾಸದಲ್ಲಿ ಮೊದಲು: http://bit.ly/2D7jFuo
►►ಧನ್ಯಶ್ರೀ ಪ್ರಕರಣದಲ್ಲಿ ಬಿಜೆಪಿಯ ದ್ವಂದ್ವ ನಿಲುವು ಬಟಾಬಯಲಾಗಿದೆ: ರಾಮಲಿಂಗಾ ರೆಡ್ಡಿ: http://bit.ly/2qVf4pf
►►ಜೈಲಿಗೆ ಹೋಗಿದ್ದ ಅಮಿತ್ ಶಾ ಹೇಳಿಕೆಯಿಂದ ಸಾಮರಸ್ಯಕ್ಕೆ ಧಕ್ಕೆ: ಐವನ್ ಡಿಸೋಜಾ: http://bit.ly/2mmgTWN
►►ನಾಪತ್ತೆಯಾಗಿದ್ದ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಪತ್ತೆ: http://bit.ly/2D1pA3j
►►ಸಿದ್ಧರಾಮಯ್ಯ ವಿರುದ್ದ ಬಿಜೆಪಿಯಿಂದ ‘ನಾನೂ ಉಗ್ರ–ನನ್ನನ್ನೂ ಬಂಧಿಸಿ’ ಚಳವಳಿ: http://bit.ly/2munE9W
►►ಶತಕ ಭಾರಿಸಿದ ಇಸ್ರೋ: ನಭಕ್ಕೆ ಚಿಮ್ಮಿದ ಭಾರತದ 100ನೇ ಉಪಗ್ರಹ: http://bit.ly/2mvFYzH
►►ಸಿಎಂ ಹೆಸರಿನಲ್ಲಿ ರಾಮನ ಬದಲಾಗಿ ರಾವಣ ಇರಬೇಕಿತ್ತು: ಯಡಿಯೂರಪ್ಪ: http://bit.ly/2D0Vyxd
►►ಪೈಲಟ್ ಸಮಯಪ್ರಜ್ಞೆ: ಮಂಗಳೂರಿನಲ್ಲಿ ತಪ್ಪಿದ ವಿಮಾನ ದುರಂತ: http://bit.ly/2AQk1zk

Related Tags: BJP Parivartana Yatre, Bagepalli, Dance, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ