ಉದಯವಾಣಿ ಕಾಲಂ ಹಠಾತ್ ಸ್ಥಗಿತ. ಪ್ರಜಾವಾಣಿಗೆ ಬರೆಯಲಿದ್ದಾರೆ ಪ್ರಕಾಶ್ ರೈ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಉದಯವಾಣಿಯಲ್ಲಿ ತಾನು ಬರೆಯುತ್ತಿದ್ದ ಕಾಲಂ ಹಠಾತ್ ಆಗಿ ನಿಲ್ಲಿಸಲ್ಪಟ್ಟ ಬಳಿಕ ಪ್ರಕಾಶ ರೈ ಈಗ 'ಪ್ರಜಾವಾಣಿ'ಗೆ ಬರೆಯಲಿದ್ದಾರೆ. ಪ್ರಕಾಶ್ ರೈ ಅವರ ಹೊಸ ಕಾಲಂ ಪ್ರಜಾವಾಣಿಯಲ್ಲಿ ಪ್ರಕಟವಾಗಲಿದೆ.

ಉದಯವಾಣಿಗೆ ಪ್ರತಿ ಶನಿವಾರ 'ಇರುವುದೆಲ್ಲವ ಬಿಟ್ಟು' ಎಂಬ ಹೆಸರಿನ ಅಂಕಣ ಬರೆಯುತ್ತಿದ್ದ ಪ್ರಕಾಶ್ ರೈ ಪ್ರಚಲಿತ ವಿದ್ಯಮಾನಗಳೂ ಒಳಗೊಂಡಂತೆ ವೈವಿಧ್ಯಮಯ ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದರು.

ಆದರೆ ಎರಡು ವಾರಗಳ ಹಿಂದೆ ಪ್ರಕಾಶ್ ರೈ ಅವರ ಅಂಕಣವನ್ನು ಉದಯವಾಣಿ ದೈನಿಕ ಹಠಾತ್ ಆಗಿ ಸ್ಥಗಿತಗೊಳಿಸಿತ್ತು. ಈ ಕುರಿತು ಉದಯವಾಣಿ ಪ್ರಕಾಶ್ ರೈ ಅವರಿಗೆ ಮಾಹಿತಿಯನ್ನೂ ನೀಡಿರಲಿಲ್ಲ ಎನ್ನಲಾಗಿದೆ.

ಅಂಕಣ ನಿಂತ ಬಳಿಕ ಟ್ವೀಟ್ ಮಾಡಿದ್ದ ಪ್ರಕಾಶ್ ರೈ 'ಉದಯವಾಣಿಯಲ್ಲಿ ನನ್ನ ಅಂಕಣ ಪ್ರಕಟಣೆಯನ್ನು ನಿಲ್ಲಿಸಲಾಗಿದೆ. ಕಾಣದ ಕೈಗಳ ಆಟ ನಮಗೆ ಕಾಣದೇನು?' ಎಂದು ಪೋಸ್ಟ್ ಮಾಡಿದ್ದರು.

ಇಂದು ಮತ್ತೆ ಟ್ವೀಟ್ ಮಾಡಿರುವ ಪ್ರಕಾಶ್ ರೈ 'ಪ್ರಜಾವಾಣಿ'ಯಲ್ಲಿ ತನ್ನ ಅಂಕಣ ಪ್ರರಂಭವಾಗಲಿದೆ ಎಂದು ಸೂಚನೆ ನೀಡಿದ್ದಾರೆ. ಈ ಅಂಕಣಕ್ಕೆ 'ಅವರವರ ಭಾವಕ್ಕೆ' ಎಂದು ಹೆಸರಿಡಲಾಗಿದೆ. 'ನಿಮ್ಮ ಧ್ವನಿಯನ್ನು ಹತ್ತಿಕ್ಕಿದಾಗ ಅದು ಇನ್ನಷ್ಟು ಗಟ್ಟಿಯಾಗುತ್ತದೆ' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.ಪ್ರಧಾನಿ ಮೋದಿ, ಸಚಿವ ಅನಂತ ಕುಮಾರ ಹೆಗಡೆ ಮುಂತಾದವರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿರುವ ಪ್ರಕಾಶ್ ರೈ ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಕಾಶ್ ರೈ ಅವರ ಎಲ್ಲ ಭಾಷಣಗಳು, ಪತ್ರಿಕಾ ಹೇಳಿಕೆಗಳು ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

ವಿಶೇಷವೆಂದರೆ ಉದಯವಾಣಿ ಸಂಪಾದಕರಾಗಿ ಶಿವ ಸುಬ್ರಹ್ಮಣ್ಯ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳ ಬಳಿಕ ಪ್ರಕಾಶ್ ರೈ ಅವರ ಅಂಕಣ ಸ್ಥಗಿತಗೊಂಡಿದೆ.

ಇಂದು ಹೆಚ್ಚು ಓದಿದ ಸುದ್ದಿ
►►ಸಿಸಿಬಿ ಅಧಿಕಾರಿಗಳಿಂದ ಕೈದಿಗಳ ಜಾತಿ ನಿಂದನೆ, ಹಲ್ಲೆ: ಆರೋಪ:
http://bit.ly/2ASR8Tr
►►ಮಂಗಳೂರು: ಭಿನ್ನ ಕೋಮಿನ ಜೋಡಿ ಬಜರಂಗಿ ಕೈಗೆ: http://bit.ly/2mukjYC
►►ಮುಖ್ಯ ನ್ಯಾಯಮೂರ್ತಿ ವಿರುದ್ಧ 4 ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ: ಇತಿಹಾಸದಲ್ಲಿ ಮೊದಲು: http://bit.ly/2D7jFuo
►►ಧನ್ಯಶ್ರೀ ಪ್ರಕರಣದಲ್ಲಿ ಬಿಜೆಪಿಯ ದ್ವಂದ್ವ ನಿಲುವು ಬಟಾಬಯಲಾಗಿದೆ: ರಾಮಲಿಂಗಾ ರೆಡ್ಡಿ: http://bit.ly/2qVf4pf
►►ಜೈಲಿಗೆ ಹೋಗಿದ್ದ ಅಮಿತ್ ಶಾ ಹೇಳಿಕೆಯಿಂದ ಸಾಮರಸ್ಯಕ್ಕೆ ಧಕ್ಕೆ: ಐವನ್ ಡಿಸೋಜಾ: http://bit.ly/2mmgTWN
►►ನಾಪತ್ತೆಯಾಗಿದ್ದ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಪತ್ತೆ: http://bit.ly/2D1pA3j
►►ಸಿದ್ಧರಾಮಯ್ಯ ವಿರುದ್ದ ಬಿಜೆಪಿಯಿಂದ ‘ನಾನೂ ಉಗ್ರ–ನನ್ನನ್ನೂ ಬಂಧಿಸಿ’ ಚಳವಳಿ: http://bit.ly/2munE9W
►►ಶತಕ ಭಾರಿಸಿದ ಇಸ್ರೋ: ನಭಕ್ಕೆ ಚಿಮ್ಮಿದ ಭಾರತದ 100ನೇ ಉಪಗ್ರಹ: http://bit.ly/2mvFYzH
►►ಸಿಎಂ ಹೆಸರಿನಲ್ಲಿ ರಾಮನ ಬದಲಾಗಿ ರಾವಣ ಇರಬೇಕಿತ್ತು: ಯಡಿಯೂರಪ್ಪ: http://bit.ly/2D0Vyxd
►►ಪೈಲಟ್ ಸಮಯಪ್ರಜ್ಞೆ: ಮಂಗಳೂರಿನಲ್ಲಿ ತಪ್ಪಿದ ವಿಮಾನ ದುರಂತ: http://bit.ly/2AQk1zk

Related Tags: Prakash Rai, Udayavani Column, Prajavani Column, Avaravara Bhavakke, Iruvudellava Bittu, Twitter, Social Media, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ