ಸಿಸಿಬಿ ಅಧಿಕಾರಿಗಳಿಂದ ಕೈದಿಗಳ ಜಾತಿ ನಿಂದನೆ, ಹಲ್ಲೆ: ಆರೋಪ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಪೊಲೀಸ್ ಅಧಿಕಾರಿಗಳಾದ ಎಸಿಪಿ ವೆಲೆಂಟೈನ್ ಡಿ’ಸೋಜಾ ಮತ್ತು ಸಿಸಿಬಿ ಇನ್ಸ್‌ಪೆಕ್ಟರ್ ಶಾಂತಾರಾಂ ಅವರು ಕಾರಾಗೃಹದಲ್ಲಿ ಮೂವರು ಕೈದಿಗಳ ಜಾತಿ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗೃಹ ಮಂತ್ರಿಗಳು, ಪೊಲೀಸ್ ಮಹಾನಿರ್ದೇಶಕರು ಬೆಂಗಳೂರು, ಕಾರಾಗೃಹ ಎಡಿಜಿಪಿ ಬೆಂಗಳೂರು, ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಲಾಗಿದೆ. ಈ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹಿಸಲಾಗಿದೆ.

ಜ.8ರಂದು ಮಂಗಳೂರು ಕಾರಾಗೃಹದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿದ್ದ ಸಂದರ್ಭ ಕಾರಾಗೃಹದಲ್ಲಿದ್ದ ಪೊಲೀಸರು ತಕ್ಷಣ ವಾತಾವರಣ ತಿಳಿಸಿ ಶಾಂತಿಯನ್ನು ಮರುಸ್ಥಾಪಿಸಿದ್ದರು. ಸಂಜೆ ಏಳರ ಹೊತ್ತಿಗೆ ಕಾರಾಗೃಹಕ್ಕೆ ಬಂದ ಎಸಿಪಿ ವೆಲೆಂಟೈನ್ ಡಿ’ಸೋಜಾ ಮತ್ತು ಸಿಸಿಬಿ ಇನ್ಸ್‌ಪೆಕ್ಟರ್ ಶಾಂತಾರಾಂ ಅವರು ಇಂದು ಕೋರ್ಟಿಗೆ ಹಾಜರಾಗಿ ಜೈಲಿಗೆ ಬಂದವರು ಯಾರು ಎಂದು ಕೇಳಿ ಇರ್ಷಾದ್ ಬಜ್ಪೆ, ನವಾಝ್ ಮಂಗಳೂರು, ಮುಸ್ತಫಾ ಪೊರ್ಕೊಡಿ ಎಂಬವರನ್ನು ಪ್ರತ್ಯೀಕವಾಗಿ ಕರೆದು ಹಲ್ಲೆಗೈದು ಜಾತಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಬಗ್ಗೆ ನವಾಝ್ ಮಂಗಳೂರು ಅವರ ಸಹೋದರ ಶರ್ಫುದ್ದೀನ್ ಎಂಬವರು ದೂರು ನೀಡಿದ್ದಾರೆ.

ಜ.8ರಂದು ಕಾರಾಗೃಹದಲ್ಲಿ ಹೊಡೆದಾಟದಲ್ಲಿ ಹಲವರಿಗೆ ಗಾಯ
ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಸಂಜೆ ಕೈದಿಗಳ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಸಂಭವಿಸಿ ನಾಲ್ವರು ಪೊಲೀಸರು ಮತ್ತು ಸುಮಾರು 10ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದರು.  ಗಾಯಾಳು ಕೈದಿಗಳನ್ನು ಮತ್ತು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೈಲಿನ ಕಿಟಿಕಿಯ ಅಲ್ಯುಮೀನಿಯಂ ಫ್ರೇಮ್, ಟ್ಯೂಬ್ಲೈಟ್ ಮತ್ತು ಕಲ್ಲು, ಕೊಡಪಾನ, ಚೊಂಬುಗಳಿಂದ ಕೈದಿಗಳು ಹೊಡೆದಾಡಿ ಕೊಂಡಿದ್ದರು.  ಪೊಲೀಸರು ಲಾಠಿ ಪ್ರಹಾರ ಮಾಡಿ ಹೊಡೆದಾಟವನ್ನು ಹತೋಟಿಗೆ ತಂದಿದ್ದರು.

ಸಂಜೆ 4 ಗಂಟೆ ವೇಳೆಗೆ ಜೈಲಿನ ಎ ಮತ್ತು ಬ್ಯಾರಕ್  ಕೈದಿಗಳನ್ನು ವಿಸಿಟಿಂಗ್ ಮತ್ತು ಟೀ ಬ್ರೇಕ್‌ಗೆ ಬಿಡಲಾಗಿತ್ತು. ಈ ವೇಳೆಗೆ ಕಲ್ಲಡ್ಕದ ಮಿಥುನ್ ಮತ್ತು ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಸಾದಿಕ್ ನಡುವೆ  ಜಗಳವಾಗಿತ್ತು. ಬಳಿಕ ಎ ಬ್ಯಾರಕ್ನ ಕೈದಿಗಳು ಬಿ ಬ್ಯಾರಕ್ಗೆ ನುಗ್ಗಿ ದಾಂಧಲೆ ನಡೆಸಿದ್ದು, ಪರಸ್ಪರ ಹಲ್ಲೆಗೈದಿದ್ದರು. ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಜೈಲರ್ಗಳು, ಜೈಲು ಸಿಬಂದಿ ಮತ್ತು ಹೋಂಗಾರ್ಡ್ ಮೇಲೂ ವಿಚಾರಣಾಧೀನ ಕೈದಿಗಳು ಹಲ್ಲೆ ನಡೆಸಿ ಸಾಂಬಾರು, ಸಾಂಬಾರು ಹುಡಿ ಎರಚಿದ್ದರು. ಘಟನೆಯಲ್ಲಿ  ಲಕ್ಷಾಂತರ ರೂ. ಮೌಲ್ಯದ ಜೈಲಿನ ಆಸ್ತಿಪಾಸ್ತಿ ನಷ್ಟವಾಗಿತ್ತು.
ಡಿಸಿಪಿ ಹನುಮಂತರಾಯ, ಇನ್ಸ್‌ಪೆಕ್ಟರ್‌ಗಳಾದ ರವೀಶ್ ನಾಯಕ್, ಎಸಿಪಿ ವೆಲೆಂಟೈನ್ ಡಿ’ಸೋಜಾ, ಸಿಸಿಬಿ ಇನ್ಸ್‌ಪೆಕ್ಟರ್ ಶಾಂತಾರಾಂ ಮುಂತಾದ ಅಧಿಕಾರಿಗಳು ಜೈಲಿಗೆ ದೌಡಾಯಿಸಿದ್ದರು.

ಪೊಲೀಸ್ ಸಿಬ್ಬಂದಿ ಯೋಗೀಶ್, ಜೈಲರ್‌ಗಳಾದ ಸಿದ್ಧರಾಮ್ ಪಾಟೀಲ್, ಚೀಫ್ ವಾರ್ಡನ್ ಕೆಂಪಾರು, ಸಿಬ್ಬಂದಿ ಕೆ.ಬಿ. ರಹಿಮಾನಿ ಮತ್ತು ಶಿವಣ್ಣ, ಕೈದಿಗಳಾದ ಶರೀಫ್, ಸಯ್ಯದ್ ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದರು. ಸಯ್ಯದ್ ಗಂಭೀರ ಗಾಯಗೊಂಡಿದ್ದರು. ಘಟನೆಯಲ್ಲಿ ಗಾಯಗೊಂಡ ಹೆಚ್ಚಿನ ಕೈದಿಗಳ ವಿವರ ಲಭ್ಯವಾಗಿಲ್ಲ.

ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಇಂದು ಹೆಚ್ಚು ಓದಿದ ಸುದ್ದಿ
►►ಮಂಗಳೂರು: ಭಿನ್ನ ಕೋಮಿನ ಜೋಡಿ ಬಜರಂಗಿ ಕೈಗೆ:
http://bit.ly/2mukjYC
►►ಮುಖ್ಯ ನ್ಯಾಯಮೂರ್ತಿ ವಿರುದ್ಧ 4 ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ: ಇತಿಹಾಸದಲ್ಲಿ ಮೊದಲು: http://bit.ly/2D7jFuo
►►ಧನ್ಯಶ್ರೀ ಪ್ರಕರಣದಲ್ಲಿ ಬಿಜೆಪಿಯ ದ್ವಂದ್ವ ನಿಲುವು ಬಟಾಬಯಲಾಗಿದೆ: ರಾಮಲಿಂಗಾ ರೆಡ್ಡಿ: http://bit.ly/2qVf4pf
►►ಜೈಲಿಗೆ ಹೋಗಿದ್ದ ಅಮಿತ್ ಶಾ ಹೇಳಿಕೆಯಿಂದ ಸಾಮರಸ್ಯಕ್ಕೆ ಧಕ್ಕೆ: ಐವನ್ ಡಿಸೋಜಾ: http://bit.ly/2mmgTWN
►►ನಾಪತ್ತೆಯಾಗಿದ್ದ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಪತ್ತೆ: http://bit.ly/2D1pA3j
►►ಸಿದ್ಧರಾಮಯ್ಯ ವಿರುದ್ದ ಬಿಜೆಪಿಯಿಂದ ‘ನಾನೂ ಉಗ್ರ–ನನ್ನನ್ನೂ ಬಂಧಿಸಿ’ ಚಳವಳಿ: http://bit.ly/2munE9W
►►ಶತಕ ಭಾರಿಸಿದ ಇಸ್ರೋ: ನಭಕ್ಕೆ ಚಿಮ್ಮಿದ ಭಾರತದ 100ನೇ ಉಪಗ್ರಹ: http://bit.ly/2mvFYzH
►►ಸಿಎಂ ಹೆಸರಿನಲ್ಲಿ ರಾಮನ ಬದಲಾಗಿ ರಾವಣ ಇರಬೇಕಿತ್ತು: ಯಡಿಯೂರಪ್ಪ: http://bit.ly/2D0Vyxd
►►ಪೈಲಟ್ ಸಮಯಪ್ರಜ್ಞೆ: ಮಂಗಳೂರಿನಲ್ಲಿ ತಪ್ಪಿದ ವಿಮಾನ ದುರಂತ: http://bit.ly/2AQk1zk

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಸಿಸಿಬಿ ಅಧಿಕಾರಿಗಳಿಂದ ಕೈದಿಗಳ ಜಾತಿ ನಿಂದನೆ, ಎಸಿಪಿ ವೆಲೆಂಟೈನ್ ಡಿ’ಸೋಜಾ, ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಂ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ