ಮುಖ್ಯ ನ್ಯಾಯಮೂರ್ತಿ ವಿರುದ್ಧ 4 ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ: ಇತಿಹಾಸದಲ್ಲಿ ಮೊದಲು

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಟಿಯನ್ನು ನಡೆಸಿ ನ್ಯಾಯಾಂಗ ವ್ಯವಸ್ಥೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಹಿಡಿದು ಸಿಜೆಐಗಳ ಮುಂದೆ ಹೋಗಿದ್ದೆವು. ಆದರೆ, ಅದರಿಂದ ಯಾವುದೇ ಪ್ರಯೋಜನಗಳಾಗಲಿಲ್ಲ. ಸಿಜೆಐಗೆ ಮನವರಿಗೆ ಮಾಡಲು ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಆಡಳಿತ ಸರಿ ಇಲ್ಲ. ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದು ಹೇಳುವ ಪ್ರಯತ್ನ ನಡೆಸಿದ್ದು ಫಲಕಾರಿಯಾಗಿಲ್ಲ.

ಹೀಗಾಗಿ ನಮಗೆ ಬೇರಾವುದೇ ದಾರಿಯಿಲ್ಲದೆ, ದೇಶದ ಜನತೆಯ ಮುಂದೆ ಬಂದಿದ್ದೇವೆಂದು ಸುದ್ದಿಗೋಷ್ಠಿಯ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಚಲ್ಮೇಶ್ವರ್ ಅವರು ಹೇಳಿದ್ದಾರೆ.

ನ್ಯಾ. ಬಿ.ಎಚ್ ಲೋಯ ನಿಗೂಢ ಸಾವು ಗಂಭೀರ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲ ನಿಮಿಷಗಳಲ್ಲೇ ಸುಪ್ರೀಂ ಕೋರ್ಟಿನ ಅತಿ ಹಿರಿಯ ನಾಲ್ವರು ನ್ಯಾಯಮೂರ್ತಿಗಳಿಂದ ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಯಿತು.

ನ್ಯಾಯಮೂರ್ತಿ ಚೆಲ್ಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದರು.

ಪತ್ರಿಕಾಗೋಷ್ಟಿ ನಡೆಸುವ ನಿರ್ಧಾರವನ್ನು ನ್ಯಾಯಮೂರ್ತಿ ಚೆಲ್ಮೇಶ್ವರ್ ಅವರು ತೆಗೆದುಕೊಂಡಿದ್ದು, ತಮ್ಮ ನಿವಾಸದ ಆವರಣದಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆ ಕುರಿತು ಸಿಜೆಐ ದೀಪಕ್ ಮಿಶ್ರಾ ಅವರಿಗೆ ಬರೆಯಲಾಗಿರುವ ಪತ್ರಕ್ಕೆ ನಾಲ್ವರು ನ್ಯಾಯಾಧೀಶರು ಸಹಿ ಮಾಡಿದ್ದು, ಪತ್ರದಲ್ಲಿರುವ ಸಾರಾಂಶವನ್ನು ಇಂದು ನ್ಯಾಯಾಧೀಶರು ಬಹಿರಂಗಪಡಿಸಿದ್ದಾರೆ.

ಯಾವುದೇ ಒತ್ತಡಗಳಿಲ್ಲದೆ ಸುದ್ದಿಗೋಷ್ಠಿ ನಡೆಸುವ ನಿರ್ಧಾರ ಕೈಗೊಂಡಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲಿ ಆಡಳಿತ ಸರಿಯಿಲ್ಲ. ಕೆಲವು ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಬಯಸದ ಘಟನೆಗಳು ನಡೆಯುತ್ತವೆ. ಅಂತಹ ಘಟನೆಗಳ ಬಗ್ಗೆ ಸಿಜೆಐ ಅವರಿಗೆ ಪತ್ರ ಬರೆದು ತಿಳಿಸಿದ್ದೇವೆ. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಅನಿವಾರ್ಯವಾಗಿ ನಾವು ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ. ಪ್ರಜಾಪ್ರಭುತ್ವ ಮತ್ತು ಸುಪ್ರೀಂ ಕೋರ್ಟ್ ಘನತೆ ಎತ್ತಿ ಹಿಡಿಯಲು ಅನಿವಾರ್ಯವಾಗಿ ದೇಶದ ಜನರ ಮುಂದೆ ಬಂದಿದ್ದೇವೆ ಎಂದರು.

ಇಂದು ಹೆಚ್ಚು ಓದಿದ ಸುದ್ದಿ
►►ಧನ್ಯಶ್ರೀ ಪ್ರಕರಣದಲ್ಲಿ ಬಿಜೆಪಿಯ ದ್ವಂದ್ವ ನಿಲುವು ಬಟಾಬಯಲಾಗಿದೆ: ರಾಮಲಿಂಗಾ ರೆಡ್ಡಿ:
http://bit.ly/2qVf4pf
►►ಜೈಲಿಗೆ ಹೋಗಿದ್ದ ಅಮಿತ್ ಶಾ ಹೇಳಿಕೆಯಿಂದ ಸಾಮರಸ್ಯಕ್ಕೆ ಧಕ್ಕೆ: ಐವನ್ ಡಿಸೋಜಾ: http://bit.ly/2mmgTWN
►►ನಾಪತ್ತೆಯಾಗಿದ್ದ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಪತ್ತೆ: http://bit.ly/2D1pA3j
►►ಸಿದ್ಧರಾಮಯ್ಯ ವಿರುದ್ದ ಬಿಜೆಪಿಯಿಂದ ‘ನಾನೂ ಉಗ್ರ–ನನ್ನನ್ನೂ ಬಂಧಿಸಿ’ ಚಳವಳಿ: http://bit.ly/2munE9W
►►ಶತಕ ಭಾರಿಸಿದ ಇಸ್ರೋ: ನಭಕ್ಕೆ ಚಿಮ್ಮಿದ ಭಾರತದ 100ನೇ ಉಪಗ್ರಹ: http://bit.ly/2mvFYzH
►►ಸಿಎಂ ಹೆಸರಿನಲ್ಲಿ ರಾಮನ ಬದಲಾಗಿ ರಾವಣ ಇರಬೇಕಿತ್ತು: ಯಡಿಯೂರಪ್ಪ: http://bit.ly/2D0Vyxd
►►ಪೈಲಟ್ ಸಮಯಪ್ರಜ್ಞೆ: ಮಂಗಳೂರಿನಲ್ಲಿ ತಪ್ಪಿದ ವಿಮಾನ ದುರಂತ: http://bit.ly/2AQk1zk

Related Tags: Supreme Court, Unprecedented Move, Press Conference by Justice Chelameswar, Kannada News, Latest Kannada News, ಸುಪ್ರೀಂ ಕೋರ್ಟ್ ಆಡಳಿತ ಲೋಪ, ನ್ಯಾಯಮೂರ್ತಿಗಳ ಸುದ್ದಿಗೋಷ್ಠಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ