ಜೈಲಿಗೆ ಹೋಗಿದ್ದ ಅಮಿತ್ ಶಾ ಹೇಳಿಕೆಯಿಂದ ಸಾಮರಸ್ಯಕ್ಕೆ ಧಕ್ಕೆ: ಐವನ್ ಡಿಸೋಜಾ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಜೈಲಿಗೆ ಹೋಗಿ ಬಂದ ಅಮಿತ್ ಶಾ ಅವರ ಹೇಳಿಕೆಯಿಂದ ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಅಪಾಯವಿದೆ. ಅಮಿತ್ ಶಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಅವರ ರಾಜ್ಯ ಭೇಟಿಯನ್ನು ಬಹಿಷ್ಕರಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮತನಾಡಿದ ಅವರು, ಅಮಿತ್ ಶಾ ಕಾನೂನು ಸುವ್ಯವಸ್ಥೆ ಹಾಳುಗೆಡವುವ ತಮ್ಮ ಚಾಳಿಯನ್ನು ಮುಂದುವರಿಸಿದರೆ ಅವರ ಭೇಟಿಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಹಿಂದೂ ವಿರೋಧಿ ಎಂದು ಬಿಂಬಿಸುವ ಮೂಲಕ ಅಮಿತ್ ಶಾ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ ಐವನ್ ಡಿಸೋಜಾ, ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ರಾಜ್ಯ ಸರ್ಕಾರ ಆಡಳಿತ ನೀಡಿದರೂ ಕೇಂದ್ರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಯಡಿಯೂರಪ್ಪ ಜೊತೆಗೆ ಬಿಜೆಪಿ ನಾಯಕರು ಬರುತ್ತಿಲ್ಲ.

ಮಹಾದಾಯಿ ಸಮಸ್ಯೆಯನ್ನು ಸರಿಪಡಿಸುವ ಬದಲು ಈಗ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಉಲ್ಟಾ ಹೊಡೆದಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಬಿಜೆಪಿ ಜನತೆಯ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಅವರು ಹೇಳಿದರು.

ಇಂದು ಹೆಚ್ಚು ಓದಿದ ಸುದ್ದಿ
►►ನಾಪತ್ತೆಯಾಗಿದ್ದ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಪತ್ತೆ:
http://bit.ly/2D1pA3j
►►ಸಿದ್ಧರಾಮಯ್ಯ ವಿರುದ್ದ ಬಿಜೆಪಿಯಿಂದ ‘ನಾನೂ ಉಗ್ರ–ನನ್ನನ್ನೂ ಬಂಧಿಸಿ’ ಚಳವಳಿ: http://bit.ly/2munE9W
►►ಶತಕ ಭಾರಿಸಿದ ಇಸ್ರೋ: ನಭಕ್ಕೆ ಚಿಮ್ಮಿದ ಭಾರತದ 100ನೇ ಉಪಗ್ರಹ: http://bit.ly/2mvFYzH
►►ಸಿಎಂ ಹೆಸರಿನಲ್ಲಿ ರಾಮನ ಬದಲಾಗಿ ರಾವಣ ಇರಬೇಕಿತ್ತು: ಯಡಿಯೂರಪ್ಪ: http://bit.ly/2D0Vyxd
►►ಪೈಲಟ್ ಸಮಯಪ್ರಜ್ಞೆ: ಮಂಗಳೂರಿನಲ್ಲಿ ತಪ್ಪಿದ ವಿಮಾನ ದುರಂತ: http://bit.ly/2AQk1zk
►►ರಿಕ್ಷಾ ಢಿಕ್ಕಿ: ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಾವು: http://bit.ly/2ExApHr
►►ಧನ್ಯಶ್ರೀ ಆತ್ಮಹತ್ಯೆ. ಬೆದರಿಕೆ ಹಾಕಿ ಬಜರಂಗದಳಕ್ಕೂ ಮಾಹಿತಿ ನೀಡಿದ್ದ ಆರೋಪಿಯ ಬಂಧನ: http://bit.ly/2Ew2b71
►►ಗೋ ಸಾಗಾಟಗಾರರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಮನೋಹರ್ ಪರ್ರಿಕರ್: http://bit.ly/2EvLrwQ
►►ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೆ? ಬಿಜೆಪಿಯ 'ಲೋ ಲೆವೆಲ್' ಟ್ವೀಟ್‌ಗೆ ಆಕ್ರೋಶ: http://bit.ly/2AR2eIE

Related Tags: Ivan D''souza, Mangalore, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ