ನಾಪತ್ತೆಯಾಗಿದ್ದ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಪತ್ತೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಿಂದ ಜ.8ರಂದು ನಾಪತ್ತೆಯಾಗಿದ್ದ ಸಂಶೋಧನಾ ವಿದ್ಯಾರ್ಥಿ ಮುಕುಲ್ ಜೈನ್ ಗುರುವಾರ ಪತ್ತೆಯಾಗಿದ್ದಾರೆ.

ಮುಕುಲ್ ಜೈನ್ ದೆಹಲಿಯಿಂದ ಪಟ್ನಾಗೆ ತೆರಳಿದ್ದರು. ಅವರನ್ನು ಯಾರು ಅಪಹರಣ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಸೋಮವಾರ ವಿ.ವಿ ಕ್ಯಾಂಪಸ್ ನಿಂದ ತೆರಳಿದ ಬಳಿಕ ಮುಕುಲ್ ಜೈನ್ ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಜೆಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಅವರು ಸುರಕ್ಷಿತವಾಗಿ ಹಿಂತಿರುಗಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷೆ ಗೀತಾ ಕುಮಾರಿ ತಿಳಿಸಿದ್ದಾರೆ.

ಮುಕುಲ್ ಜೈನ್ ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ(ಇಗ್ನೊ) ಮಾರ್ಗದರ್ಶಕರ ನೇತೃತ್ವದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.  ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ಲೈಫ್ ಸೈನ್ಸ್ ವಿಭಾಗದಲ್ಲಿ ಸಹ ಮಾರ್ಗದರ್ಶಕರನ್ನು ಪಡೆದಿದ್ದರು. ಅಲ್ಲಿನ ಪ್ರಯೋಗಾಲಯದಲ್ಲಿ ಸಂಶೋಧನಾ ಕಾರ್ಯ ನಡೆಸುತ್ತಿದ್ದರು.

ಮುಕುಲ್ ಜೈನ್ ಸೋಮವಾರ ಮಧ್ಯಾಹ್ನ 12.30 ಗಂಟೆಗೆ ವಿಶ್ವವಿದ್ಯಾಲಯದ ಪೂರ್ವ ಪ್ರವೇಶ ದ್ವಾರದಿಂದ ಹೊರಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಂಗಳವಾರ ಕುಟುಂಬಸ್ಥರಿಗೆ ದೃಶ್ಯಾವಳಿಗಳನ್ನು ತೋರಿಸಿದ್ದೇವೆ ಎಂದು ಮುಖ್ಯ ಭದ್ರತಾ ಅಧಿಕಾರಿ ನವೀನ್ ಯಾದವ್ ಹೇಳಿದ್ದನ್ನು ಸ್ಮರಿಸಬಹುದು.

ಇಂದು ಹೆಚ್ಚು ಓದಿದ ಸುದ್ದಿ
►►ಸಿದ್ಧರಾಮಯ್ಯ ವಿರುದ್ದ ಬಿಜೆಪಿಯಿಂದ ‘ನಾನೂ ಉಗ್ರ–ನನ್ನನ್ನೂ ಬಂಧಿಸಿ’ ಚಳವಳಿ:
http://bit.ly/2munE9W
►►ಶತಕ ಭಾರಿಸಿದ ಇಸ್ರೋ: ನಭಕ್ಕೆ ಚಿಮ್ಮಿದ ಭಾರತದ 100ನೇ ಉಪಗ್ರಹ: http://bit.ly/2mvFYzH
►►ಸಿಎಂ ಹೆಸರಿನಲ್ಲಿ ರಾಮನ ಬದಲಾಗಿ ರಾವಣ ಇರಬೇಕಿತ್ತು: ಯಡಿಯೂರಪ್ಪ: http://bit.ly/2D0Vyxd
►►ಪೈಲಟ್ ಸಮಯಪ್ರಜ್ಞೆ: ಮಂಗಳೂರಿನಲ್ಲಿ ತಪ್ಪಿದ ವಿಮಾನ ದುರಂತ: http://bit.ly/2AQk1zk
►►ರಿಕ್ಷಾ ಢಿಕ್ಕಿ: ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಾವು: http://bit.ly/2ExApHr
►►ಧನ್ಯಶ್ರೀ ಆತ್ಮಹತ್ಯೆ. ಬೆದರಿಕೆ ಹಾಕಿ ಬಜರಂಗದಳಕ್ಕೂ ಮಾಹಿತಿ ನೀಡಿದ್ದ ಆರೋಪಿಯ ಬಂಧನ: http://bit.ly/2Ew2b71
►►ಗೋ ಸಾಗಾಟಗಾರರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಮನೋಹರ್ ಪರ್ರಿಕರ್: http://bit.ly/2EvLrwQ
►►ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೆ? ಬಿಜೆಪಿಯ 'ಲೋ ಲೆವೆಲ್' ಟ್ವೀಟ್‌ಗೆ ಆಕ್ರೋಶ: http://bit.ly/2AR2eIE

Related Tags: Jawaharlal Nehru University, Student Mukul Jain Missing, Campus, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ