ಅತ್ತೂರು ಸಂತ ಲಾರೆನ್ಸ್ ಅಂಚೆ ಚೀಟಿ: ಜ.18 ರಂದು ಬಿಡುಗಡೆ

ಕರಾವಳಿ ಕರ್ನಾಟಕ ವರದಿ

ಉಡುಪಿ/ಕಾರ್ಕಳ:
ಕಾರ್ಕಳ ಅತ್ತೂರಿನ ಸಂತ ಲಾರೆನ್ಸ್ ಪುಣ್ಯಕ್ಷೇತ್ರವನ್ನು ಮೈನರ್ ಬಸಿಲಿಕಾ ಎಂದು ಘೋಷಿಸಿರುವ ಸವಿ ನೆನಪಿಗೆ ಭಾರತೀಯ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಚೀಟಿಯನ್ನು ಜ.18ರ ಮಧ್ಯಾಹ್ನ 12ಗಂಟೆಗೆ ಕಾರ್ಕಳದಲ್ಲಿ ಬಿಡುಗಡೆ ಮಾಡಲಿದೆ.

ಈ ಸಂದರ್ಭ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಉಪಸ್ಥಿತರಿರುತ್ತಾರೆ.

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಹಾಗೂ ಪವಾಡ ಮೂರ್ತಿಯ ವಿಶೆಷ ಕವರ್ ಮತ್ತು ಬಸಿಲಿಕಾ ಲಾಂಛನದ ಮೊಹರು ಬಿಡುಗಡೆಯಾಗಲಿದ್ದು, ಅಂಚೆ ಕಛೇರಿಗಳಲ್ಲಿ ಇವು ಲಭ್ಯ. ಅಂಚೆ ಲಕೋಟೆಗೆ ಬಳಸಬಹುದಾದ ಸಂತ ಲಾರೆನ್ಸ್ ಬಸಿಲಿಕಾ ಮತ್ತು ಪವಾಡ ಮೂರ್ತಿಯ ಭಾವಚಿತ್ರವನ್ನೊಳಗೊಂಡ ಮೈ ಸ್ಟ್ಯಾಂಪ್ (ಐದು ರೂ.ಅಂಚೆ ಚೀಟಿ) ಕೂಡ ಈ ಸಂದರ್ಭ ಬಿಡುಗಡೆಯಾಗಲಿದ್ದು, ಅಂಚೆ ಕಚೇರಿಗಳಲ್ಲಿ ಲಭ್ಯ.

ಭಾರತೀಯ ಅಂಚೆ ಇಲಾಖೆ ಸಲ್ಲಿಸಿರುವ ಈ ಗೌರವದಿಂದ ಮುಂದಿನ ಜನಾಂಗಕ್ಕೆ ಚರ್ಚ್ ಅಧ್ಯಯನ ನಡೆಸಲು, ಇತಿಹಾಸ ತಿಳಿಯಲು ಪೂರಕ ಎಂದು ಉಡುಪಿ ಕಾರ್ಪೋರೇಶನ್ ಬ್ಯಾಂಕ್ ಪ್ರಾಚೀನ ವಸ್ತು ಸಂಗ್ರಹಾಲಯದ ಎಂ.ಕೆ.ಕೃಷ್ಣಯ್ಯ, ಕ್ಯುರೇಟರ್ ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರಿಂದ ಮೈನರ್ ಬಸಿಲಿಕಾ ಮನ್ನಣೆ
ಪುಣ್ಯ ಕ್ಷೇತ್ರಗಳ ನೆಲೆಬೀಡು. ಜಾತ್ಯತೀತ ಮನೋಭಾವವನ್ನು ಎತ್ತಿ ಹಿಡಿದಿರುವಂತಹ ಪುಣ್ಯ ಭೂಮಿ. ಸನಾತನ,  ಜೈನ, ಇಸ್ಲಾಂ, ಕ್ರೈಸ್ತ ಧರ್ಮಗಳ ಸಂಗಮ ಕ್ಷೇತ್ರ. ಇಂತಹ ಪುಣ್ಯಭೂಮಿಯಲ್ಲಿರುವ ಅತ್ತೂರು ಸಂತಲಾರೆನ್ಸ್ ಪವಾಡ ಪುಣ್ಯಕ್ಷೇತ್ರವು ವಿಶ್ವ ಮಾನ್ಯತೆ ಪಡೆದುಕೊಂಡು ಇದೀಗ ಮೈನರ್ ಬಸಿಲಿಕಾ(ಕಿರು ದೇವಾಲಯ) ಎಂದು ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ.

ಕ್ರೈಸ್ತ ಧರ್ಮದ ರೋಮನ್ ಕೆಥೋಲಿಕ್ ಮಹಾಗುರು ಪೋಪ್ ಫ್ರಾನ್ಸಿಸ್ ಅವರಿಂದ ಮೈನರ್ ಬೆಸಿಲಿಕಾ ಎಂಬ ಮಾನ್ಯತೆ ನೀಡಿದ್ದರು.

ಮೈನರ್ ಬಸಿಲಿಕಾ ಇತಿಹಾಸ
ರಾಜ್ಯದಲ್ಲಿರುವ ಎರಡನೇಯ ಮೈನರ್ ಬೆಸಿಲಿಕಾ ಎಂಬ ಖ್ಯಾತಿಗೆ ಪಡೆದಿರುವ ಈ ಪುಣ್ಯಕ್ಷೇತ್ರ ಇತಿಹಾಸ ಮಹತ್ವದಾಗಿದೆ.

ಚಿಮ್ಮವ ಸಿಹಿ ನೀರಿನ ಒರತೆ ಅತ್ತೂರು ಪುಣ್ಯಕ್ಷೇತ್ರ ಸ್ಥಾಪನೆಗೆ ಪೀಠಿಕೆಯಾಗಿದೆ. ತನ್ಮೂಲಕ ದಕ್ಷಿಣ ಭಾರತದ ಕ್ರೈಸ್ತಾಲಯದಲ್ಲಿ ಇರುವಂತಹ ಏಕೈಕ ಪುಷ್ಕರಿಣಿ ಇದಾಗಿದೆ.

ಕ್ರಿ.ಶ 1759ರ ನಂತರ ಲಿಖಿತ ದಾಖಲೆ ಲಭ್ಯವಾಗಿದೆ. ಫ್ರಾನ್ಸಿಸ್ ಸಾಲ್ವದೊರೆ ಲೋಬೋ 1759-1775ರ ತನಕ ಇದೇ ಪುಣ್ಯಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. 1784ರಲ್ಲಿ ಟಿಪ್ಪುಸುಲ್ತಾನ ಕರಾವಳಿ ಕೈಸ್ತರನ್ನು ಬಂಧಿಸಿ ಶ್ರೀರಂಗ ಪಟ್ಟಣದಲ್ಲಿ ಬಂಧನದಲ್ಲಿಟ್ಟಿದ್ದ. 1799ರಲ್ಲಿ ಟಿಪ್ಪು ಸುಲ್ತಾನ ಮರಣ ನಂತರ ಬಂಧಮುಕ್ತಗೊಂಡ ಕ್ರೈಸ್ತರು ಅತ್ತೂರಿನಿಂದ ನಕ್ರೆಗೆ ಹೋಗುವ ದಾರಿಯಲ್ಲಿ ಮರಳಿ ಹುಲ್ಲಿನ ಚಾವಣಿಯ ಚರ್ಚ್ ಸ್ಥಾಪಿಸಿದರು.

ನೆಲದಲ್ಲಿಟ್ಟ ವಿಗ್ರಹ ಮೇಲೆತ್ತಲಾಗಲಿಲ್ಲ!
ಮುಳಿಹುಲ್ಲಿನ ಇಗರ್ಜಿ ಶಿಥಿಲಗೊಂಡಾಗ ಗೋವಾ ಮೂಲದ ಧರ್ಮಗುರುಗಳು ಕಾಷ್ಠಶಿಲ್ಪದ ಸಂತ ಲಾರೆನ್ಸ್ ವಿಗ್ರಹದೊಂದಿಗೆ ಹೊಸ ಪುಣ್ಯಕ್ಷೇತ್ರ ನಿರ್ಮಿಸಲು ಯೋಗ್ಯ ಸ್ಥಳ ಅರಸಿ ಹೊರಟಿದ್ದರು. ಪರ್ಪಲೆಗುಡ್ಡೆ ಇಳಿದು ವಿಗ್ರಹ ನೆಲದಲ್ಲಿ ಇಟ್ಟು ಸನ್ನಿಹದಲ್ಲಿ ಹರಿಯುತ್ತಿದ್ದ ನೀರಿನ ಒರತೆಯಿಂದ ಬಾಯಾರಿಕೆ ನೀಗಿಸಿಕೊಂಡರು. ಪಯಣ ಮುಂದುವರಿಸಲು ಬಯಸಿ ಹೊರಡಲು ಸಿದ್ಧವಾಗಿ ನೆಲದಲ್ಲಿ ಇಟ್ಟ ವಿಗ್ರಹವನ್ನು ಮೇಲೆತ್ತಲು ಮುಂದಾದಾಗ ಕಿಂಚಿತ್ತು ಅಲುಗಡದೇ ಅವರಿಗೆ ಆಶ್ಚರ್ಯ ಕಾದಿತ್ತು.

ಸಂತ ಲಾರೆನ್ಸ್ ಅವರೇ ತಾವು ಇಲ್ಲಿಯೇ ತಂಗಲು ಬಯಸಿದ್ದಲ್ಲಿ ಅಲ್ಲಿಯೇ ಪುಣ್ಯಕ್ಷೇತ್ರ ನಿರ್ಮಿಸಲು ಮುಂದಾಗುತ್ತೇವೆ ಎಂದು ಶಪಥ ಮಾಡಿಕೊಂಡರು. ಮುಂದೆ ಇದೇ ಸ್ಥಳದಲ್ಲಿ 1839ರಲ್ಲಿ ಪುಣ್ಯಕ್ಷೇತ್ರ ನಿರ್ಮಿಸಲಾಗಿತ್ತೆಂಬ ಮಹತ್ವದ ವಿಚಾರ ತಿಳಿದುಬಂದಿದೆ.

ಅಸ್ವಸ್ಥರ, ನೊಂದವರ ಆಶಾಕಿರಣ
ಕ್ರಿ.ಶ 275ರಲ್ಲಿ ರೋಮ್ ಚಕ್ರವರ್ತಿಯ ಧರ್ಮವಿರೋಧಿ ನೀತಿಯಿಂದ ಕ್ರೈಸ್ತ ಧರ್ಮಕ್ಕಾಗಿ ಹುತಾತ್ಮರಾದ ಸಂತಲಾರೆನ್ಸ್ ಹೆಸರಿನಲ್ಲಿ ಅತ್ತೂರು ಪ್ರಸಿದ್ಧವಾಗಿದೆ. ತನ್ನ ಜೀವಿತಾವಧಿಯಲ್ಲಿ ವಿಶೇಷ ಚೇತನ,ರೋಗ ರುಜೀತನದಲ್ಲಿ ಬಳಲುತ್ತಿರುವವರು, ಮಾನಸಿಕ ಅಸ್ಪಸ್ಥರ ಸೇವೆಗೈಯುತ್ತಿದ್ದರು. ಇಂದಿಗೂ ಅಸ್ವಸ್ಥರ, ವಿಕಲಚೇತನರ, ಮಾನಸಿಕ ನೊಂದವರ ಕಣ್ಣೋರೆಸುವ ಕಾರ್ಯ ಇದೇ ಪುಣ್ಯಕ್ಷೇತ್ರದಲ್ಲಿ ನಡೆಯುತ್ತಾಬಂದಿದೆ.

ಟಿಪ್ಪುವಿನಿಂದ ಕ್ರೈಸ್ತರು  ಬಂಧಮುಕ್ತರಾದ ನೆನಪಿಗೆ ಸ್ಮಾರಕ
ಕ್ರಿ.ಶ ಮೂರನೇ ಶತಮಾನದಲ್ಲಿ ಶತಮಾನದಲ್ಲಿ ಬಾಳಿ ಬದುಕಿದ ಸಂತ ಲಾರೆನ್ಸ್ ಬಟ್ಟೆಯ ತುಂಡನ್ನು ಗಾಜಿನ ಪೆಟ್ಟಿಗೆಯಲ್ಲಿ ಭದ್ರವಾಗಿರಿಸಲಾಗಿದೆ. ಟಿಪ್ಪುವಿನ ಮರಣಾಂತರ ಕ್ರೈಸ್ತರು  ಬಂಧಮುಕ್ತರಾಗಿ ಶತಮಾನ ಪೂರೈಸಿದ ನೆನಪಿಗಾಗಿ 1900ರಲ್ಲಿ ಹೊಸ ಪುಣ್ಯ ಕ್ಷೇತ್ರ ನಿರ್ಮಿಸಲಾಗಿದೆ.

ದ್ವಿಶತಮಾನೋತ್ಸವ ನೆನಪಿಗಾಗಿ ಕ್ರಿ.ಶ.2000ದಲ್ಲಿ ಪುಣ್ಯಕ್ಷೇತ್ರ ಜೀರ್ಣೋದ್ಧಾರ ಮಾಡಲಾಗಿದೆ.

ಇಂದು ಹೆಚ್ಚು ಓದಿದ ಸುದ್ದಿ
►►ರಿಕ್ಷಾ ಢಿಕ್ಕಿ: ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಾವು:
http://bit.ly/2ExApHr
►►ಧನ್ಯಶ್ರೀ ಆತ್ಮಹತ್ಯೆ. ಬೆದರಿಕೆ ಹಾಕಿ ಬಜರಂಗದಳಕ್ಕೂ ಮಾಹಿತಿ ನೀಡಿದ್ದ ಆರೋಪಿಯ ಬಂಧನ: http://bit.ly/2Ew2b71
►►ಗೋ ಸಾಗಾಟಗಾರರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಮನೋಹರ್ ಪರ್ರಿಕರ್: http://bit.ly/2EvLrwQ
►►ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೆ? ಬಿಜೆಪಿಯ 'ಲೋ ಲೆವೆಲ್' ಟ್ವೀಟ್‌ಗೆ ಆಕ್ರೋಶ: http://bit.ly/2AR2eIE
►►ಮರಕ್ಕೆ ಢಿಕ್ಕಿಯಾದ ಓಮ್ನಿ: ಮಗು ಸಾವು. 6 ಮಂದಿ ಗಂಭೀರ: http://bit.ly/2COSVum
►►ಗೊಮ್ಮಟೇಶ್ವರನಿಗೆ ಬಟ್ಟೆ ಹಾಕುವಂತೆ ಸಿಎಂಗೆ ಪತ್ರಕರ್ತನ ಮನವಿ!: http://bit.ly/2mgzy6w
►►ಮಹದಾಯಿ ನೀರು. ಮಾತುಕತೆ ಇಲ್ಲ. ನ್ಯಾಯಾಧಿಕರಣದಲ್ಲೇ ಎಲ್ಲ: ಪರ್ರಿಕರ್ ಘೋಷಣೆ: http://bit.ly/2qOPCSp
►►ಧನ್ಯಶ್ರೀ ತಂದೆಯ ದಿಕ್ಕು ತಪ್ಪಿಸಿದ ಸಂಘಟನೆಗಳ ವಿರುದ್ಧ ಕ್ರಮ: ಅಣ್ಣಾಮಲೈ: http://bit.ly/2EvLrwQ

Related Tags: Karkala, Special Postal Envelope, Stamp, St Lawrence Minor Basilica, Attur Church, Rev. Fr. George D’souza, Udupi Bishop, Dr. Gerold Lobo, John D’silva, Saint Lawrence Church Attur, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸು
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ