ರಿಕ್ಷಾ ಢಿಕ್ಕಿ: ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಾವು

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಆಟೋ ರಿಕ್ಷಾವೊಂದು ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಗುದ್ದಿದಾಗ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಕಳವಳಕಾರಿ ಘಟನೆ ವರದಿಯಾಗಿದೆ.

ಬಂಟ್ವಾಳದ ಅರಳ ಗ್ರಾಮದ ನಿವಾಸಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಉದ್ಯಮಿ ಮಾವಂತೂರು ದೇವಪ್ಪ ಶೆಟ್ಟಿ(70) ಸಾವಪ್ಪಿದ್ದಾರೆ.

ಪಾಂಡೇಶ್ವರ ರಸ್ತೆಯಿಂದ ಎ.ಬಿ.ಶೆಟ್ಟಿ ವೃತ್ತದ ಬಳಿ ರಸ್ತೆ ದಾಟುತ್ತಿದ್ದ ದೇವಪ್ಪ ಶೇಟ್ಟಿಯವರಿಗೆ ಆಟೋ ರಿಕ್ಷಾ ಗುದ್ದಿದ ರಭಸಕ್ಕೆ ತಲೆಗೆ ಗಂಭೀರ ಏಟು ಬಿದ್ದಿತ್ತು. ಬುಧವಾರ ಸಂಜೆ ಈ ಘಟನೆ ನಡೆದಿದೆ.

ಬಂಟ್ವಾಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ದೇವಪ್ಪ ಶೆಟ್ಟರು ಪ್ರಸ್ತುತ ಲಯನ್ಸ್ ಪ್ರಾಂತ ಸಂಯೋಜಕರಾಗಿದ್ದರು. ಶ್ರೀ ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ, ಶ್ರೀ ಬಲವಂಡಿ ಪಿಲಿಚಾಮುಂಡಿ ದೈವಸ್ಥಾನದ ಧರ್ಮದರ್ಶಿಯೂ ಆಗಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಖ್ಯಾತರಾಗಿದ್ದರು.

ಪತ್ನಿ, ಇಬ್ಬರು ಪುತ್ರಿಯರು, ಓರ್ವ ಮಗ ಮತ್ತು ಅಪಾರ ಬಂಧು ವರ್ಗ, ಸ್ನೇಹಿತರನ್ನು ಅವರು ಅಗಲಿದ್ದಾರೆ.

ಇದನ್ನೂ ಓದಿ:
ಮರಕ್ಕೆ ಢಿಕ್ಕಿಯಾದ ಓಮ್ನಿ: ಮಗು ಸಾವು. 6 ಮಂದಿ ಗಂಭೀರ
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಸಮೀಪದ ಮರಕ್ಕೆ ಗುದ್ದಿದ ಪರಿಣಾಮ ಮಗು ಸಾವನ್ನಪ್ಪಿದ್ದು, ಕುಟುಂಬದ ಆರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಖೇದಕರ ಘಟನೆ ಇಲ್ಲಿನ ಮಣಿಹಳ್ಳ ಸಮೀಪದ ಬಡಗುಂಡಿ ಎಂಬಲ್ಲಿ ವರದಿಯಾಗಿದೆ.

ಸ್ಥಳೀಯ ನಿವಾಸಿಗಳಾದ ಜರ್ಮನ್, ರೋಶನ್, ಲವಿಟ, ಸಿಸಿಲಿಯಾ ಬರೆಟ್ಟೋ, ಓಮ್ನಿ ಚಾಲಕ ರೋಬಿನ್, ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಗಾಯಾಳು ಮಕ್ಕಳಲ್ಲಿ ಓರ್ವ ಮಗು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರೋಶನ್ ವಿದೇಶದಲ್ಲಿ ಉದ್ಯೋಗಲ್ಲಿದ್ದು, ಇತ್ತೀಚೆಗಷ್ಟೆ ಊರಿಗೆ ಬಂದಿದ್ದರು. ಕುಟುಂಬಿಕರೊಂದಿಗೆ ಮಂಗಳೂರು ಬೀಚ್‌ಗೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.ಓಮ್ನಿ ಮಣಿಹಳ್ಳ ಸಮೀಪದ ಬಡಗುಂಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.

ಸ್ಥಳಕ್ಕಾಗಮಿಸಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿ
►►ಧನ್ಯಶ್ರೀ ಆತ್ಮಹತ್ಯೆ. ಬೆದರಿಕೆ ಹಾಕಿ ಬಜರಂಗದಳಕ್ಕೂ ಮಾಹಿತಿ ನೀಡಿದ್ದ ಆರೋಪಿಯ ಬಂಧನ:
http://bit.ly/2Ew2b71
►►ಗೋ ಸಾಗಾಟಗಾರರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಮನೋಹರ್ ಪರ್ರಿಕರ್: http://bit.ly/2EvLrwQ
►►ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೆ? ಬಿಜೆಪಿಯ 'ಲೋ ಲೆವೆಲ್' ಟ್ವೀಟ್‌ಗೆ ಆಕ್ರೋಶ: http://bit.ly/2AR2eIE
►►ಮರಕ್ಕೆ ಢಿಕ್ಕಿಯಾದ ಓಮ್ನಿ: ಮಗು ಸಾವು. 6 ಮಂದಿ ಗಂಭೀರ: http://bit.ly/2COSVum
►►ಗೊಮ್ಮಟೇಶ್ವರನಿಗೆ ಬಟ್ಟೆ ಹಾಕುವಂತೆ ಸಿಎಂಗೆ ಪತ್ರಕರ್ತನ ಮನವಿ!: http://bit.ly/2mgzy6w
►►ಮಹದಾಯಿ ನೀರು. ಮಾತುಕತೆ ಇಲ್ಲ. ನ್ಯಾಯಾಧಿಕರಣದಲ್ಲೇ ಎಲ್ಲ: ಪರ್ರಿಕರ್ ಘೋಷಣೆ: http://bit.ly/2qOPCSp
►►ಧನ್ಯಶ್ರೀ ತಂದೆಯ ದಿಕ್ಕು ತಪ್ಪಿಸಿದ ಸಂಘಟನೆಗಳ ವಿರುದ್ಧ ಕ್ರಮ: ಅಣ್ಣಾಮಲೈ: http://bit.ly/2EvLrwQ
►►ತನ್ನದೇ ಕ್ಷೇತ್ರದ ಧನ್ಯಶ್ರೀ ಸಾವಿಗೆ ಜಾಣ ಮೌನ: ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ: http://bit.ly/2CKV9uN

Related Tags: Rickshaw Accident, Devappa Shetty Death, Kannada News, Karnataka News, Coastal Karnataka News, Karavali News, Karavali Karnataka, Latest Kannada News, ರಿಕ್ಷಾ ಡಿಕ್ಕಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಾವು, ಮಾವಂತೂರು ದೇವಪ್ಪ ಶೆಟ್ಟಿ ಸಾವು, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ