ಧನ್ಯಶ್ರೀ ಆತ್ಮಹತ್ಯೆ. ಬೆದರಿಕೆ ಹಾಕಿ ಬಜರಂಗದಳಕ್ಕೂ ಮಾಹಿತಿ ನೀಡಿದ್ದ ಆರೋಪಿಯ ಬಂಧನ

ಕರಾವಳಿ ಕರ್ನಾಟಕ ವರದಿ

ಚಿಕ್ಕಮಗಳೂರು:
ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿ ಬಜರಂಗದಳಕ್ಕೆ ಮಾಹಿತಿ ನೀಡಿದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ದ.ಕ ಜಿಲ್ಲೆಯ ಬಂಟ್ವಾಳದ ಬಡಗಕಜೇಕಾರ್ ನಿವಾಸಿ ರಾಜೇಶ್ ಎಂಬವರ ಪುತ್ರ ಸಂತೋಷ (20) ಎಂದು ಗುರುತಿಸಲಾಗಿದೆ.

ಧನ್ಯಾಶ್ರೀ ಆತ್ಮಹತ್ಯೆಯ ಬಳಿಕ ಆರೋಪಿ ಸಂತೋಷ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದನು. ಆರೋಪಿಯ ಬಂಧನಕ್ಕೆ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ ಮೂಡಿಗೆರೆ ಠಾಣಾಧಿಕಾರಿ ರಫೀಕ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಸೆರೆ ಹಿಡಿದಿದೆ.

ಧನ್ಯಶ್ರೀಯೊಂದಿಗೆ ವಾಟ್ಸಾಪ್‌ನಲ್ಲಿ ಸಂಭಾಷಣೆ ನಡೆಸಿದ್ದ ಆರೋಪಿ ಸಂಭಾಷಣೆಯ ಎಲ್ಲಾ ಸ್ಕ್ರೀನ್ ಶಾಟ್‌ಗಳನ್ನು ಬಜರಂಗದಳ ಮುಖಂಡರಿಗೆ ರವಾನಿಸಿದ್ದನು. ಅಲ್ಲದೇ ಧನ್ಯಶ್ರೀ ತಂದೆ ತಾಯಿಗೆ ಬೆದರಿಕೆಯನ್ನೊಡ್ಡಿದ್ದನು ಎನ್ನಲಾಗಿದೆ.

ಮೂಡಿಗೆರೆಯ ವಿದ್ಯಾರ್ಥಿನಿ ಮುಸ್ಲಿಂ ಸ್ನೇಹಿತನ ಕುರಿತು ಮಾಡಿದ ಚಾಟ್ ಹಿಸ್ಟರಿಯ ಸ್ಕ್ರೀನ್ ಶಾಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಫೋಟೊ ಜೊತೆ ಹರಿಯಬಿಟ್ಟು ಅದು ಭಾರೀ ವೈರಲ್ ಆಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಲವ್ ಜಿಹಾದ್ ಎಂದು ಬಿಂಬಿಸಿ ಧನ್ಯಾಳ ಬಗ್ಗೆ ಕೀಳು ಕಮೆಂಟ್‌ಗಳನ್ನು ಮಾಡಿ ಆಕೆಯ ಮಾನಹಾನಿ ಮಾಡಲಾಗಿತ್ತು. ಇದರಿಂದ ಮನನೊಂದ ಧನ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇದನ್ನೂ ಓದಿ:
►►ಧನ್ಯಶ್ರೀ ತಂದೆಯ ದಿಕ್ಕು ತಪ್ಪಿಸಿದ ಸಂಘಟನೆಗಳ ವಿರುದ್ಧ ಕ್ರಮ: ಅಣ್ಣಾಮಲೈ:
http://bit.ly/2EvLrwQ
►►ತನ್ನದೇ ಕ್ಷೇತ್ರದ ಧನ್ಯಶ್ರೀ ಸಾವಿಗೆ ಜಾಣ ಮೌನ: ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ: http://bit.ly/2CKV9uN
►►ಸಂಘ ಪರಿವಾರದ ಧಮ್ಕಿಗೆ ಆತ್ಮಹತ್ಯೆ: ದೇಶಾದ್ಯಂತ ಸುದ್ದಿಯಾಗುತ್ತಿದೆ ಧನ್ಯಾ ಸಾವು: http://bit.ly/2Eq55KC
►►ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಚೋದನೆ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಸೆರೆ: http://bit.ly/2CS310P
►►ಲವ್ ಜಿಹಾದ್ ಪುಕಾರು. ಸೋಷಿಯಲ್ ಮೀಡಿಯಾದಲ್ಲಿ ಮಾನಹಾನಿ: ವಿದ್ಯಾರ್ಥಿನಿ ಆತ್ಮಹತ್ಯೆ: http://bit.ly/2CQeGy5

ಇಂದು ಹೆಚ್ಚು ಓದಿದ ಸುದ್ದಿ
►►ಗೋ ಸಾಗಾಟಗಾರರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಮನೋಹರ್ ಪರ್ರಿಕರ್:
http://bit.ly/2EvLrwQ
►►ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೆ? ಬಿಜೆಪಿಯ 'ಲೋ ಲೆವೆಲ್' ಟ್ವೀಟ್‌ಗೆ ಆಕ್ರೋಶ: http://bit.ly/2AR2eIE
►►ಮರಕ್ಕೆ ಢಿಕ್ಕಿಯಾದ ಓಮ್ನಿ: ಮಗು ಸಾವು. 6 ಮಂದಿ ಗಂಭೀರ: http://bit.ly/2COSVum
►►ಗೊಮ್ಮಟೇಶ್ವರನಿಗೆ ಬಟ್ಟೆ ಹಾಕುವಂತೆ ಸಿಎಂಗೆ ಪತ್ರಕರ್ತನ ಮನವಿ!: http://bit.ly/2mgzy6w
►►ಮಹದಾಯಿ ನೀರು. ಮಾತುಕತೆ ಇಲ್ಲ. ನ್ಯಾಯಾಧಿಕರಣದಲ್ಲೇ ಎಲ್ಲ: ಪರ್ರಿಕರ್ ಘೋಷಣೆ: http://bit.ly/2qOPCSp
►►ಧನ್ಯಶ್ರೀ ತಂದೆಯ ದಿಕ್ಕು ತಪ್ಪಿಸಿದ ಸಂಘಟನೆಗಳ ವಿರುದ್ಧ ಕ್ರಮ: ಅಣ್ಣಾಮಲೈ: http://bit.ly/2EvLrwQ
►►ತನ್ನದೇ ಕ್ಷೇತ್ರದ ಧನ್ಯಶ್ರೀ ಸಾವಿಗೆ ಜಾಣ ಮೌನ: ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ: http://bit.ly/2CKV9uN

Related Tags: Dhanya Suicide, Moodigere, Chikmagalur, BJP Yuva Morcha Moodigere, Anil Varun, Santhosh Arrested, Love Jehad, Social Media
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ