ಗೋ ಸಾಗಾಟಗಾರರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಮನೋಹರ್ ಪರ್ರಿಕರ್

ಕರಾವಳಿ ಕರ್ನಾಟಕ ವರದಿ

ಪಣಜಿ:
ಗೋಮಾಂಸ ಸಾಗಾಟ ಮಾಡುವಾಗ ತಡೆಯುವ 'ಗೋರಕ್ಷಕರ' ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಭರವಸೆ ನೀಡಿದ್ದಾರೆ. 

ಗೋಮಾಂಸ ವರ್ತಕರ ವಿರುದ್ಧ ಯಾವುದೇ ದೌರ್ಜನ್ಯ ನಡೆಯದಂತೆ ಖಾತ್ರಿ ಪಡಿಸುವ ಬಗ್ಗೆ ಗೋವಾ ಸರ್ಕಾರ ಭರವಸೆ ನೀಡಿದ್ದು ಗೋಮಾಂಸ ವರ್ತಕರು ಮುಷ್ಕರವನ್ನು ವಾಪಾಸು ಪಡೆದಿದ್ದಾರೆ.

ಕಳೆದ ನಾಲ್ಕು ದಿನದಿಂದ ರಾಜ್ಯದಲ್ಲಿ ಬೀಫ್ ವರ್ತಕರು ಮುಷ್ಕರ ನಡೆಸಿದ್ದ  ಹಿನ್ನೆಲೆಯಲ್ಲಿ ಗೋವಾದಲ್ಲಿ ಬೀಫ್ ಕೊರತೆಯುಂಟಾಗಿತ್ತು.

ಕಾನೂನುಬದ್ಧ ಗೋಮಾಂಸ ಸಾಗಾಟದಲ್ಲಿ ಯಾರೇ ತಡೆಯೊಡ್ಡಿದರೂ ಅವರಿಗೆ ಶಿಕ್ಷೆಯಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್  ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ, ದಾಖಲೆಗಳು ಸಮರ್ಪಕವಾಗಿದ್ದಲಿ ವರ್ತಕರಿಗೆ ಯಾವುದೇ ತೊಂದರೆಯಾಗಕೂಡದು, ಎಂದು ಪರ್ರಿಕರ್ ಹೇಳಿದ್ದಾರೆ.ನಕಲಿ ‘ಗೋರಕ್ಷಕ’ರ ಕಾಟದಿಂದ  ಕರ್ನಾಟಕದ ಬೀಫ್ ವರ್ತಕರು ಮಾಂಸದ ಸರಬರಾಜು ನಿಲ್ಲಿಸಿದ್ದರು. ಸ್ವಯಂಘೋಷಿತ ಗೋರಕ್ಷಕರು ಗೋಮಾಂಸ ಸಾಗಾಟಗಾರರಿಗೆ ಕಿರುಕುಳ ನೀಡುತ್ತಿದ್ದು, ಸರ್ಕಾರ ಕ್ರಮ ಕೈಗೊಳ್ಳುವವರೆಗೆ  ಮಾಂಸ ಪೂರೈಸದಿರಲು ವರ್ತಕರು ನಿರ್ಧರಿಸಿದ್ದರು.

ಮಹಾರಾಷ್ಟ್ರ ಬೀಫ್ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಬಳಿಕ, ಗೋವಾಕ್ಕೆ ಕರ್ನಾಟಕದ ಬೆಳಗಾವಿಯಿಂದ ಸುಮಾರು 25 ಟನ್ ಗೋಮಾಂಸ ಪೂರೈಕೆಯಾಗುತ್ತದೆ.

ಇಂದು ಹೆಚ್ಚು ಓದಿದ ಸುದ್ದಿ
►►ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೆ? ಬಿಜೆಪಿಯ 'ಲೋ ಲೆವೆಲ್' ಟ್ವೀಟ್‌ಗೆ ಆಕ್ರೋಶ:
http://bit.ly/2AR2eIE
►►ಮರಕ್ಕೆ ಢಿಕ್ಕಿಯಾದ ಓಮ್ನಿ: ಮಗು ಸಾವು. 6 ಮಂದಿ ಗಂಭೀರ: http://bit.ly/2COSVum
►►ಗೊಮ್ಮಟೇಶ್ವರನಿಗೆ ಬಟ್ಟೆ ಹಾಕುವಂತೆ ಸಿಎಂಗೆ ಪತ್ರಕರ್ತನ ಮನವಿ!: http://bit.ly/2mgzy6w
►►ಮಹದಾಯಿ ನೀರು. ಮಾತುಕತೆ ಇಲ್ಲ. ನ್ಯಾಯಾಧಿಕರಣದಲ್ಲೇ ಎಲ್ಲ: ಪರ್ರಿಕರ್ ಘೋಷಣೆ: http://bit.ly/2qOPCSp
►►ಧನ್ಯಶ್ರೀ ತಂದೆಯ ದಿಕ್ಕು ತಪ್ಪಿಸಿದ ಸಂಘಟನೆಗಳ ವಿರುದ್ಧ ಕ್ರಮ: ಅಣ್ಣಾಮಲೈ: http://bit.ly/2EvLrwQ
►►ತನ್ನದೇ ಕ್ಷೇತ್ರದ ಧನ್ಯಶ್ರೀ ಸಾವಿಗೆ ಜಾಣ ಮೌನ: ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ: http://bit.ly/2CKV9uN
►►ಭೂಗತ ಲೋಕದ ಸಂಪರ್ಕವಿದೆ ಎಂದು ಬೆದರಿಕೆ: ತಿಂಗಳೆ ವಿರುದ್ಧ ಬಿಜೆಪಿ ನಾಯಕನ ಆರೋಪ: http://bit.ly/2D0BDOm

Related Tags: Cow Transportation, Beef Transport, Goa, Illegal Interference, Strict Action, Goa Chief Minister, Manohar Parrikar, Beef Politics, BJP
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ