ಸಿದ್ದರಾಮಯ್ಯ ಮಹಿಳೆಯ ಮೈ ಮುಟ್ಟಬಹುದೆ? ಬಿಜೆಪಿಯ 'ಲೋ ಲೆವೆಲ್' ಟ್ವೀಟ್‌ಗೆ ಆಕ್ರೋಶ
ನೀತಾ ಅಂಬಾನಿಯ ಕೈಯನ್ನು ಮೋದಿ ಮುಟ್ಟಬಹುದೆ? ಆಕೆ ಸಿದ್ದರಾಮಯ್ಯ ಅವರ ಮೊಮ್ಮಗಳ ವಯಸ್ಸಿನವಳು. ರಟ್ಟೆ ಹಿಡಿದು ಹತ್ತಿರಕ್ಕೆ ಕರೆದರೆ ತಪ್ಪೇನು?

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
‘ಕಾಮಾಲೆ ಕಣ್ಣಿನವರಿಗೆ ಊರೆಲ್ಲ ಹಳದಿ’ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಯುವತಿಯೊಬ್ಬರನ್ನು ಸೆಲ್ಫಿ ತೆಗೆಯುವ ಸಂದರ್ಭ ಹತ್ತಿರಕ್ಕೆ ಎಳೆದುದದ್ದನ್ನು ಪ್ರಶ್ನಿಸಿರುವ ಕಳವಳಕಾರಿ ಘಟನೆ ವರದಿಯಾಗಿದೆ.

‘ಸಿದ್ದರಾಮಯ್ಯ ಮಹಿಳೆಯೊಬ್ಬರ ಮೈ ಮುಟ್ಟಬಹುದೇ? ಎಂಬ ಬಿಜೆಪಿ ರಾಷ್ಟ್ರೀಯ ಘಟಕದ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ವಿಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಯುವತಿಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾಗ, ಆಕೆ ತಮ್ಮಿಂದ ದೂರ ಇರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕೆಯ ತೋಳು ಹಿಡಿದು ಹತ್ತಿರಕ್ಕೆ ಎಳೆದ ಬಳಿಕ ಆಕೆ ಸೆಲ್ಫಿ ತೆಗೆದಿದ್ದರು. ಈ ವಿಡಿಯೋ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, 1,700ಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀತಾ ಅಂಬಾನಿ ಹಾಗೂ ಇತರ ಮಹಿಳೆಯರ ಕೈ ಹಿಡಿದಿರುವ ಚಿತ್ರ, ಮಹಿಳೆಯೊಬ್ಬರನ್ನು ತಬ್ಬಿರುವ ಚಿತ್ರ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು  ಸಚಿವೆ ಉಮಾ ಭಾರತಿ ಅವರ ಗಲ್ಲ ಹಿಡಿದಿರುವ ಮೊದಲಾದ ಚಿತ್ರಗಳನ್ನು ಅಮಿತ್ ಮಾಳವೀಯ ಅವರ ಟ್ವೀಟ್ ವಿರುದ್ಧ ಟ್ವೀಟ್ ಮಾಡಲಾಗಿದೆ.

‘ಆಕೆ ಸಿದ್ದರಾಮಯ್ಯ ಅವರ ಮೊಮ್ಮಗಳ ವಯಸ್ಸಿನವಳು. ರಟ್ಟೆ ಹಿಡಿದು ಹತ್ತಿರಕ್ಕೆ ಕರೆದರೆ ತಪ್ಪೇನು?’ ಎಂದು ಮಲ್ಲೇಶ್ ರೆಡ್ಡಿ ಎಂಬುವರು ಟ್ವೀಟ್ ಮಾಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಈ ರೀತಿ ಆರೋಪ ಮಾಡುವ ಕಪಟ ವೇಷದಾರಿಗಳಾದ ಸಂಘ ಪರಿವಾರದವರು ಪರಿವಾರವೆ ಇಲ್ಲದೆ ಸಂಘ ಹೇಗೆ ಕಟ್ಟುತ್ತಿದ್ದಾರೆ ಎಂಬುದು ನಮ್ಮನ್ನು ಕಾಡುವ ಪ್ರಶ್ನೆ. ಅವರಿಗೆ ನಾವು ಏನನ್ನಬೇಕು? ಎಂದು ಬಸವರಾಜು ಎ.ಪಿ. ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಬಿಜೆಪಿ ಶಾಸಕರು ಸದನದಲ್ಲಿ ಅಶ್ಲೀಲ ಚಿತ್ರ ನೋಡುತ್ತಿದ್ದ ದೃಶ್ಯಗಳನ್ನು ಸೆರೆ ಹಿಡಿದಿರುವ ಸುದ್ದಿ ವಾಹಿನಿಗಳ ವಿಡಿಯೋಗಳನ್ನು ಕೂಡ ಸಿದ್ದರಾಮಯ್ಯ ವಿರುದ್ಧ ಆರೋಪ ವಿರೋಧಿಸಿ ಟ್ವೀಟ್ ಮಾಡಲಾಗಿರುವುದು ಗಮನಾರ್ಹ.

ಇಂದು ಹೆಚ್ಚು ಓದಿದ ಸುದ್ದಿ
►►ಮರಕ್ಕೆ ಢಿಕ್ಕಿಯಾದ ಓಮ್ನಿ: ಮಗು ಸಾವು. 6 ಮಂದಿ ಗಂಭೀರ:
http://bit.ly/2COSVum
►►ಗೊಮ್ಮಟೇಶ್ವರನಿಗೆ ಬಟ್ಟೆ ಹಾಕುವಂತೆ ಸಿಎಂಗೆ ಪತ್ರಕರ್ತನ ಮನವಿ!: http://bit.ly/2mgzy6w
►►ಮಹದಾಯಿ ನೀರು. ಮಾತುಕತೆ ಇಲ್ಲ. ನ್ಯಾಯಾಧಿಕರಣದಲ್ಲೇ ಎಲ್ಲ: ಪರ್ರಿಕರ್ ಘೋಷಣೆ: http://bit.ly/2qOPCSp
►►ಧನ್ಯಶ್ರೀ ತಂದೆಯ ದಿಕ್ಕು ತಪ್ಪಿಸಿದ ಸಂಘಟನೆಗಳ ವಿರುದ್ಧ ಕ್ರಮ: ಅಣ್ಣಾಮಲೈ: http://bit.ly/2EvLrwQ
►►ತನ್ನದೇ ಕ್ಷೇತ್ರದ ಧನ್ಯಶ್ರೀ ಸಾವಿಗೆ ಜಾಣ ಮೌನ: ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ: http://bit.ly/2CKV9uN
►►ಭೂಗತ ಲೋಕದ ಸಂಪರ್ಕವಿದೆ ಎಂದು ಬೆದರಿಕೆ: ತಿಂಗಳೆ ವಿರುದ್ಧ ಬಿಜೆಪಿ ನಾಯಕನ ಆರೋಪ: http://bit.ly/2D0BDOm
►►ಬಶೀರ್ ಹತ್ಯೆ: ಮಾರಕಾಸ್ತೃಗಳಿಗಾಗಿ ನೇತ್ರಾವತಿ ನದಿಯಲ್ಲಿ ಶೋಧ: http://bit.ly/2CZlQ3d
►►ಕೇಂದ್ರದ ಅನುದಾನ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ: ಅಮಿತ್ ಷಾ ಆರೋಪ: http://bit.ly/2Fo2ZvU
►►ಆರ್‌ಎಸ್‌ಎಸ್, ಬಜರಂಗದಳದವರು ಉಗ್ರಗಾಮಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ: http://bit.ly/2qQr0bS

Related Tags: Bjp Amit Malviya, Tweet, Siddharamaiah Selfie, Karnataka Chief Minister Siddaramaiah, Controversy Tweet, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ