ಗಲ್ಫ್: ಜೆಟ್ ಏರ್‌ವೇಸ್ ಚಳಿಗಾಲದ ಕೊಡುಗೆ, ವಿಶೇಷ 20% ದರ ಕಡಿತ
ಜನವರಿ15, 2018 ರಂದು ಸಮಾಪ್ತಿಗೊಳ್ಳುವ ವಾರದ ಕೊಡುಗೆ ಸಂದರ್ಭ ಬುಕ್ಕಿಂಗ್ ಮಾಡುವ ಜೆಟ್ ಏರ್‌ವೇಸ್ ಪ್ರಯಾಣಿಕರಿಗೆ ಹೊಸ ವರ್ಷದ ಕೊಡುಗೆ.

ಕರಾವಳಿ ಕರ್ನಾಟಕ ವರದಿ

ಕುವೈಟ್:
ಭಾರತದ ಅಗ್ರಗಣ್ಯ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಜೆಟ್ ಏರ್‌ವೇಸ್, ಏಷ್ಯಾದ ಅದ್ಭುತಗಳನ್ನು ಅರಿಯಲು ವಿಶೇಷ ಪ್ರಮೋಷನ್ ಸೇಲ್ ಅವಕಾಶದ ಕೊಡುಗೆಯನ್ನು ಹೊಸ ವರ್ಷದಲ್ಲಿ ಪ್ರಪ್ರಥಮ ಬಾರಿಗೆ ತನ್ನ ಪ್ರಯಾಣಿಕರಿಗೆ ಕೊಡುಗೆಯಾಗಿ ನೀಡುತ್ತಿದೆ!

ಜನವರಿ 15, 2018 ರಂದು ಸಮಾಪ್ತಿಗೊಳ್ಳುವ ವಾರದ ಕೊಡುಗೆ ಸಂದರ್ಭ ಬುಕ್ಕಿಂಗ್ ಮಾಡುವ  ಜೆಟ್ ಏರ್‌ವೇಸ್ ಪ್ರಯಾಣಿಕರು ಗಲ್ಫ್‌ನಿಂದ ಭಾರತ ಮತ್ತು ಬ್ಯಾಂಕಾಕ್, ಕೊಲಂಬೊ, ಡಾಕಾ, ಹಾಂಗ್‌ಕಾಂಗ್, ಕಠ್ಮಂಡು ಮತ್ತು ಸಿಂಗಾಪುರದಂಥ ಇತರ ಗಮ್ಯ ಸ್ಥಾನಗಳನ್ನು ಒಳಗೊಂಡಂತೆ ನಡೆಸುವ ಯಾನಗಳಲ್ಲಿ ಟಿಕೇಟ್ ದರಗಳಲ್ಲಿ ವಿಶೇಷ 20% ದರ ಕಡಿತದ ಉಳಿತಾಯವನ್ನು ಆನಂದಿಸಬಹುದಾಗಿದೆ.

ಮೊದಲು- ಬಂದವರಿಗೆ ಮೊದಲ –ಆದ್ಯತೆಯ ಸೇವೆ ನೆಲೆಯಲ್ಲಿ ಒನ್ ವೇ ಮತ್ತು ರಿಟರ್ನ್ ಜರ್ನಿ ಎರಡಕ್ಕೂ ಈ ಸೀಮಿತ ಅವಧಿಯ ಮಾರಾಟ ಕೊಡುಗೆ ಲಭ್ಯವಿದ್ದು, ಪ್ರಯಾಣಿಕರು ತಮ್ಮ ಯಾನಗಳನ್ನು ಮುಂಚಿತವಾಗಿಯೇ ಯೋಜನಾಬದ್ಧವಾಗಿ ನಡೆಸಲು ಇದರಿಂದ ಸಾಧ್ಯವಾಗುತ್ತದೆ.

ಈ ಪ್ರಮೋಶನ್ ಕೊಡುಗೆಯ ಅಂಗವಾಗಿ ಬುಕ್ ಮಾಡಲಾಗುವ ಟಿಕೇಟ್‌ಗಳನ್ನು ಜನವರಿ15, 2018ರ ಬಳಿಕದ ಯಾನಗಳಿಗೂ ಷರತ್ತುಗಳು ಮತ್ತು ನಿಯಮಗಳಿಗನುಸಾರವಾಗಿ ಬಳಸಬಹುದಾಗಿದೆ.

ಜೆಟ್ ಏರ್‌ವೇಸ್ ಸಂಸ್ಥೆ ನಿರ್ವಹಿಸುವ ಯಾನಗಳಲ್ಲಿ ಮಾತ್ರ ಈ ವಿಶೇಷ ದರ ಕಡಿತ ಕೊಡುಗೆ ಲಭ್ಯವಿದ್ದು, ಜೆಟ್ ಏರ್‌ವೇಸ್ ಸಂಸ್ಥೆಯ ವೆಬ್‌ಸೈಟ್ www.jetairways.com ಮೂಲಕ  ಅಥವಾ ಜೆಟ್ ಏರ್‌ವೇಸ್ ಮೊಬೈಲ್ ಆಪ್ ಬಳಸಿ ಅಥವಾ ಟ್ರಾವೆಲ್ ಏಜೆಂಟ್‌ಗಳ ಮೂಲಕ ಟಿಕೇಟ್ ಬುಕ್ ಮಾಡಬಹುದಾಗಿದೆ.

“ ಹೊಸ ವರ್ಷದ ಆರಂಭವು ಪ್ರಯಾಣದ ಯೋಜನೆಗಳನ್ನು ಮುಂಚಿತವಾಗಿಯೇ ಗುರುತಿಸಲು ಸರಿಯಾದ ಸಮಯವಾಗಿದೆ. ಈ ಸೀಮಿತ ಅವಧಿಯ ಕೊಡುಗೆಯು ಏಷ್ಯಾದಾದ್ಯಂತ ಬಹುಜನ ಪ್ರಿಯ ಸ್ಥಳಗಳಲ್ಲಿ ನಮ್ಮ ಪ್ರಯಾಣಿಕರು ತಮ್ಮ ಮುಂದಿನ ಸಾಹಸಗಳನ್ನು ಕೈಗೊಳ್ಳುವಲ್ಲಿ ಮತ್ತು ನಮ್ಮ ಪ್ರಯಾಣಿಕರಿಗೆ ಮೌಲ್ಯಾಧಾರಿತ ಸೇವೆ ನೀಡುವಲ್ಲಿ ಈ ಸೀಮಿತ ಅವಧಿಯ ಕೊಡುಗೆಯು ಅನನ್ಯ ಅವಕಾಶವಾಗಿದೆ ಎಂದು  ಜೆಟ್ ಏರ್‌ವೇಸ್ ಗಲ್ಫ್, ಮಿಡ್ಲ್ ಈಸ್ಟ್ ಮತ್ತು ಆಫ್ರಿಕಾ ಉಪಾಧ್ಯಕ್ಷ ಶಾಕಿರ್ ಕಾಂತಾವಾಲಾ ಅವರು ಹೇಳಿದ್ದಾರೆ.

ಭಾರತದ ಅಗ್ರಗಣ್ಯ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯಾದ ಜೆಟ್ ಏರ್ವೇಸ್, ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವೆ ತನ್ನ ಸಾಟಿಯಿಲ್ಲದ ಯಾನ ಸೇವೆಗಳು, ಪ್ರಯಾಣಿಕರ ಅನುಕೂಲಕ್ಕೆ ತಕ್ಕ ವಿಸ್ತೃತ ಸಂಪರ್ಕಗಳ ಸೇವೆಗಳ ಮೂಲಕ ಜನ ಬಯಸುವ ವಿಮಾನ ಯಾನ ಸಂಸ್ಥೆಯಾಗಿ ಹೆಸರುಗಳಿಸಿರುವುದು ಗಮನಾರ್ಹ.

Related Tags: JET AIRWAYS, WINTER ADVENTURE WITH JET AIRWAYS, Shakir Kantawala, Vice President - Gulf, Middle East & Africa, Jet Airways, Karnataka News, Coastal Karnataka News, Karavali News, Karavali Karnataka, Latest News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ