ಗೊಮ್ಮಟೇಶ್ವರನಿಗೆ ಬಟ್ಟೆ ಹಾಕುವಂತೆ ಸಿಎಂಗೆ ಪತ್ರಕರ್ತನ ಮನವಿ!

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕಿ ಮಾನ ಮುಚ್ಚಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ಪ್ರಭು ಎಂಬವರು ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೂ ಈ ಪತ್ರ ಬರೆದು ಬಾಹುಬಲಿಗೆ ಬಟ್ಟೆ ಹಾಕುವಂತೆ ಮನವಿ ಮಾಡಿದ್ದಾರೆ.

ದಿನದಿಂದ ದಿನಕ್ಕೆ ಮಾನವನ ಜೀವನದ ಶೈಲಿಗಳು, ಮಾನವನ ವಿಕಾಸವೂ ಉನ್ನತೀಕರಣವಾಗಿ ಪ್ರತಿಯೊಬ್ಬರೂ ಜೀವನದ ಮೌಲ್ಯಗಳನ್ನು ತಿಳಿದುಕೊಂಡು, ತಂತ್ರಜ್ಞಾನದಿಂದ ಜಗತ್ತಿನ ಆಗುಹೋಗುಗಳನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳುವ ಇಂತಹ ಸಂದರ್ಭದಲ್ಲಿ ಜೈನ ಧರ್ಮಗುರು ಬಾಹುಬಲಿಯವರು 9ನೇ ಶತಮಾನದಲ್ಲಿ ದಿಗಂಬರರಾಗಿದ್ದರು ಎನ್ನುವ ಕಾರಣದಿಂದ ಅಲ್ಲಿಂದ ಇಲ್ಲಿಯವರೆಗೆ ಧರ್ಮಗುರು ಬಾಹುಬಲಿಯವರನ್ನು ಹಾಗೆಯೇ ದಿಗಂಬರರಾಗಿ ಉಳಿಸಿಕೊಂಡಿರುವುದು ಒಂದು ವಿಪರ್ಯಾಸವೇ ಆಗಿದೆ. ಇದು ಮೌಢ್ಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಭು ಪತ್ರದಲ್ಲಿ ವಿವರಿಸಿದ್ದಾರೆ.

ಆಗಿನ ಸಂದರ್ಭದಲ್ಲಿ ಧರ್ಮಗುರು ಬಾಹುಬಲಿಯವರು ತೆಗೆದುಕೊಂಡಂತ ನಿರ್ಧಾರವು ಅವರಿಗೆ ಸರಿ ಅನಿಸಿರಬಹುದು. ಆದ್ರೆ ಅಂದಿನಿಂದ ಇಂದಿನವರೆಗೆ ಮಾನವನ ವಿಕಾಸದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಲ್ಲದೇ ಮಾನವನ ಪ್ರಗತಿಯು ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಾ ಸಾಗಿದೆ ಎಂದು ಅವರು ಬರೆದಿದ್ದಾರೆ.

ದಿಗಂಬರರಾಗಿರುವ ಬಾಹುಬಲಿಯನ್ನು ನೋಡುವುದಕ್ಕೆ ಅಸಹ್ಯ ಅನಿಸುತ್ತದೆ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಇದರ ಬಗ್ಗೆ ಗಮನ ಹರಿಸಿ ಬಟ್ಟೆ ಹಾಕಲಿ ಎಂದು ಪ್ರಭು ಮನವಿ ಮಾಡಿದ್ದಾರೆ.

ಈಗ ಕಾಲ ಬದಲಾಗಿದೆ, ಬಾಹುಬಲಿಯನ್ನು ನೋಡೋಕೆ ಕಷ್ಟವಾಗುತ್ತಿದೆ. ಇದರಲ್ಲಿ ಧಾರ್ಮಿಕ ನಂಬಿಕೆಯ ವಿಚಾರ ಬರುವುದಿಲ್ಲ. ಕನಿಷ್ಠ ಗೊಮಟೇಶ್ವರನ ಮಾನವನ್ನು ಮುಚ್ಚಲು ಚಡ್ಡಿಯಾದರೂ ಹಾಕಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿ
►►ಮಹದಾಯಿ ನೀರು. ಮಾತುಕತೆ ಇಲ್ಲ. ನ್ಯಾಯಾಧಿಕರಣದಲ್ಲೇ ಎಲ್ಲ: ಪರ್ರಿಕರ್ ಘೋಷಣೆ:
http://bit.ly/2qOPCSp
►►ಧನ್ಯಶ್ರೀ ತಂದೆಯ ದಿಕ್ಕು ತಪ್ಪಿಸಿದ ಸಂಘಟನೆಗಳ ವಿರುದ್ಧ ಕ್ರಮ: ಅಣ್ಣಾಮಲೈ: http://bit.ly/2EvLrwQ
►►ತನ್ನದೇ ಕ್ಷೇತ್ರದ ಧನ್ಯಶ್ರೀ ಸಾವಿಗೆ ಜಾಣ ಮೌನ: ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ: http://bit.ly/2CKV9uN
►►ಭೂಗತ ಲೋಕದ ಸಂಪರ್ಕವಿದೆ ಎಂದು ಬೆದರಿಕೆ: ತಿಂಗಳೆ ವಿರುದ್ಧ ಬಿಜೆಪಿ ನಾಯಕನ ಆರೋಪ: http://bit.ly/2D0BDOm
►►ಬಶೀರ್ ಹತ್ಯೆ: ಮಾರಕಾಸ್ತೃಗಳಿಗಾಗಿ ನೇತ್ರಾವತಿ ನದಿಯಲ್ಲಿ ಶೋಧ: http://bit.ly/2CZlQ3d
►►ಕೇಂದ್ರದ ಅನುದಾನ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ: ಅಮಿತ್ ಷಾ ಆರೋಪ: http://bit.ly/2Fo2ZvU
►►ಆರ್‌ಎಸ್‌ಎಸ್, ಬಜರಂಗದಳದವರು ಉಗ್ರಗಾಮಿಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ: http://bit.ly/2qQr0bS

Related Tags: Bahubali, Cloth, Siddramiah, Prabhu, Journalist, Letter
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ